ಫ್ಯಾನ್ಸ್ ಒತ್ತಾಯದ ಮೇರೆಗೆ ವಿಷ್ಣುದಾದ ಇತಿಹಾಸ ಬರೆದ ಮೂವೀ ರೀ-ರಿಲೀಸ್

Public TV
2 Min Read

ನ್ನಡ ಚಿತ್ರರಂಗವೇ ಎಂದೂ ಮರೆಯಲು ಅಸಾಧ್ಯವಾದ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿನಾಯದ ಸಿನಿಮಾ ಮತ್ತೆ ಚಂದನವನದಲ್ಲಿ ರೀ-ರಿಲೀಸ್ ಆಗುತ್ತಿದೆ. ಕನ್ನಡ ಸಿನಿಲೋಕದಲ್ಲೇ ವಿಜೃಂಭಿಸಿದ ‘ಕೃಷ್ಣ ನೀ ಬೇಗನೆ ನಾರೋ’ ಸಿನಿಮಾ ಮತ್ತೆ ರಿಲೀಸ್ ಆಗುತ್ತಿದೆ. ಈ ಸುದ್ದಿ ಕೇಳಿ ದಾದಾನ ಅಭಿಮಾನಿಗಳು ಖುಷ್ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಆಂಗ್ರಿ ಮ್ಯಾನ್ ಆಗಿಯೇ ಸಿನಿಲೋಕಕ್ಕೆ ಕಾಲಿಟ್ಟ ಸಂಪತ್ ಕುಮಾರ್ ನಂತರ ಇಡೀ ಸಿನಿರಸಿಕರ ಮನದಲ್ಲಿ ದಾದಾ ಆಗಿ ಮೆರೆಯುತ್ತಿದ್ದಾರೆ. ವಿಷ್ಣು ಅವರ ಸೃಜನಶೀಲ ನಡೆ, ಕನ್ನಡ ಸಿನಿಮಾರಂಗಕ್ಕೆ ಅವರು ಕೊಟ್ಟ ಕೊಡುಗೆಯನ್ನು ಯಾರು ಮರೆಯುವಂತಿಲ್ಲ. ಇವರು ಮಾಡಿದ ಆಲ್ ಮೋಸ್ಟ್ ಸಿನಿಮಾಗಳು ಸಿನಿಲೋಕದಲ್ಲಿ ಹೊಸದೊಂದು ಅಲೆಯನ್ನು ಸೃಷ್ಟಿ ಮಾಡಿತ್ತು.

ವಿಷ್ಣು ಸಿನಿಮಾಗೆ ಮತ್ತೆ ಬಿಡುಗಡೆ ಭಾಗ್ಯ

ಅದೇ ರೀತಿ 1986ರಲ್ಲಿ ತೆರೆಕಡ ‘ಕೃಷ್ಣ ನೀ ಬೇಗನೆ ಬಾರೋ’ ಸಿನಿಮಾ ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಈ ಸಿನಿಮಾವನ್ನು ಭಾರ್ಗವ ಅವರು ನಿರ್ದೇಶನ ಮಾಡಿದ್ದರು. ಈ ಸಿನಿಮಾ 1983ರಲ್ಲಿ ಹಿಂದಿಯಲ್ಲಿ ರಿಲೀಸ್ ಆದ ‘ಸೌತೇನ್’ ಸಿನಿಮಾದ ರಿಮೇಕ್ ಆಗಿದ್ದರೂ, ‘ಕೃಷ್ಣ ನೀ ಬೇಗನೆ ಬಾರೋ’ ಸಿನಿಮಾದಲ್ಲಿನ ಕಲಾವಿದರ ಅಭಿನಾಯ ಮೂಲ ನಟರನ್ನು ಮರೆಸಿತ್ತು. ಹಿಂದಿಯಾ ‘ಸೌತೇನ್’ ನಲ್ಲಿಯೂ ದಿಗ್ಗಜರೇ ನಟಿಸಿದ್ದರೂ, ಕನ್ನಡದ ಕಲಾವಿದರೂ ಕಮಾಲ್ ಮಾಡಿದ್ದರು.

ಈ ಸಿನಿಮಾದಲ್ಲಿ ವಿಷ್ಣುವರ್ಧನ್, ಭವ್ಯ, ಕಿಮ್ ಮತ್ತು ಮುಖ್ಯಮಂತ್ರಿ ಚಂದ್ರು ನಟಿಸಿದ್ದರು. ಅಲ್ಲದೇ ಬಾಕ್ಸಾಫೀಸ್‍ನಲ್ಲಿ ಸೂಪರ್ ಹಿಟ್ ಆಗಿದ್ದು, ಕನ್ನಡ ಕಲಾವಿದರ ಬಗ್ಗೆ ಇಡೀ ಭಾರತೀಯ ಚಿತ್ರರಂಗ ಮಾತನಾಡುವಂತೆ ಮಾಡಿತ್ತು. ಅದಕ್ಕೆ ಈ ಸಿನಿಮಾವನ್ನು ರೀ-ರಿಲೀಸ್ ಮಾಡಲಾಗುತ್ತಿದೆ.

10 Interesting Facts about Vishnuvardhan – DADA of Kannada Cinema - MetroSaga

ಹೊಸ ರೂಪದಲ್ಲಿ ಕೃಷ್ಣ!
‘ಕೃಷ್ಣ ನೀ ಬೇಗನೆ ಬಾರೋ’ ಸಿನಿಮಾವನ್ನು ಮುನಿರಾಜು ಅವರು ರೀ-ರಿಲೀಸ್ ಮಾಡುತ್ತಿದ್ದ, ಈ ಸಿನಿಮಾಗೆ ಹೊಸ ರೂಪವನ್ನು ನೀಡುತ್ತಿದ್ದಾರೆ. ಈ ಕುರಿತು ಮಾತನಾಡಿದ ಅವರು, ‘ಕೃಷ್ಣ ನೀ ಬೇಗನೆ ಬಾರೋ’ ಸಿನಿಮಾವನ್ನು ನಾನು ಸಿನಿಮಾಸ್ಕೋಪ್, 7.1 ಸೌಂಡ್ ಎಫೆಕ್ಟ್, ಡಿ ಐ, ಕಲರಿಂಗ್ ಎಲ್ಲವನ್ನು ಮಾಡಿಸಿ, ಹೊಚ್ಚ ಹೊಸ ಸಿನಿಮಾದ ಹಾಗೆ ಮಾಡಿದ್ದೇನೆ. ಆಗ ಈ ಸಿನಿಮಾ ಈಸ್ಟ್‍ಮನ್ ಕಲರ್ ಇತ್ತು. ಈಗಿನ ಟ್ರೆಂಡ್‍ಗೆ ತಕ್ಕಂತೆ ಸಿನಿಮಾಗಳನ್ನು ಮಾಡುತ್ತಿದ್ದೇನೆ. ಏಪ್ರಿಲ್ ಮೊದಲವಾರ ಅಥವಾ ಎರಡನೇ ವಾರ ಈ ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಫ್ಯಾನ್ಸ್ ಒತ್ತಾಯ!
ನಾನು ಹೆಚ್ಚು ಅಣ್ಣಾವ್ರ ಸಿನಿಮಾಗಳನ್ನು ರೀ-ರಿಲೀಸ್ ಮಾಡುತ್ತಿದ್ದೆ. ಆದರೆ ದಾದಾನ ಸಿನಿಮಾಗಳನ್ನು ರಿಲೀಸ್ ಮಾಡಬೇಕು ಎಂದು ಅಭಿಮಾನಿಗಳು ಕೇಳಿಕೊಂಡರು. ಅದಕ್ಕೆ ಈ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿದೆ. ಹೊಸ ರೀತಿಯಲ್ಲಿ ಸಿನಿಮಾವನ್ನು ತಯಾರು ಮಾಡುತ್ತಿದ್ದೇನೆ. ಈ ಸಿನಿಮಾವನ್ನು ಅದ್ದೂರಿಯಾಗಿ ರಿಲೀಸ್ ಮಾಡಬೇಕು ಎಂದುಕೊಂಡಿದ್ದೇನೆ. ಅಪ್ಪು ಸಿನಿಮಾವಿರುವುದರಿಂದ ಏಪ್ರಿಲ್ ನಲ್ಲಿ ಸಿನಿಮಾ ರಿಲೀಸ್ ಮಾಡಲು ನಿರ್ಧಾರಿಸಿದ್ದೇನೆ ಎಂದು ತಿಳಿಸಿದರು. ಒಟ್ಟಿನಲ್ಲಿ ಈ ಸುದ್ದಿ ಕೇಳಿದ ಅಭಿಮಾನಿಗಳು ಸಖತ್ ಖುಷಿಯಲ್ಲಿ ಇದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *