ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ‘ಅಗ್ನಿಸಾಕ್ಷಿ’ ನಟಿ

Public TV
1 Min Read

‘ಅಗ್ನಿಸಾಕ್ಷಿ’ (Agnisakshi) ಸೀರಿಯಲ್ ಮೂಲಕ ಮನೆ ಮಾತಾದ ನಟಿ ಇಶಿತಾ ವರ್ಷ (Ishita Varsha) ಇದೀಗ ಮತ್ತೆ ಟಿವಿ ಪರದೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ನಟಿ ಇಶಿತಾ ವಿಶೇಷ ಪಾತ್ರವೊಂದರಲ್ಲಿ ನಟಿಸುವ ಮೂಲಕ ಮತ್ತೆ ಕಿರುತೆರೆಗೆ ರೀ ಎಂಟ್ರಿ ಕೊಡುತ್ತಿದ್ದಾರೆ. ಇದನ್ನೂ ಓದಿ:ಪಾರ್ವತಿ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ: ಶಿವನ ಪಾತ್ರದಲ್ಲಿ ಶಿವಣ್ಣ

ವಿಜಯ್ ಸೂರ್ಯ ಮತ್ತು ವೈಷ್ಣವಿ ಗೌಡ ನಟನೆಯ ಅಗ್ನಿಸಾಕ್ಷಿ ಸೀರಿಯಲ್‌ನಲ್ಲಿ ಇಶಿತಾ ಅವರು ಮಾಯಾ ಎಂಬ ಪಾತ್ರದ ಮೂಲಕ ಮೋಡಿ ಮಾಡಿದ್ದರು. ಈ ಸೀರಿಯಲ್ ಮುಕ್ತಾಯವಾದ ಮೇಲೆ ರಿಯಾಲಿಟಿ ಶೋವೊಂದರಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೇ ಅಷ್ಟಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ.

ವೈಲ್ಡ್ ಲೈಫ್ ಫೋಟೋಗ್ರಾಫಿ ಮಾಡುತ್ತಾ ಕಾಡು ಮೇಡು ಸುತ್ತುತ್ತಿದ್ದ ನಟಿ ಈಗ ಕಿರುತೆರೆಯ ಜನಪ್ರಿಯ ‘ಪುಟ್ಟಕ್ಕನ ಮಕ್ಕಳು’ ಸೀರಿಯಲ್‌ನಲ್ಲಿ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:‘ಕಾಂತಾರ’ ಪ್ರೀಕ್ವೆಲ್ ಸಿನಿಮಾದಲ್ಲಿ ಸಪ್ತಮಿ ಗೌಡಗೆ ಪಾತ್ರವಿಲ್ಲ

ಉಮಾಶ್ರೀ (Umashree) ಈ ಸೀರಿಯಲ್‌ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಮಗಳ ಪಾತ್ರಧಾರಿ ಸಹನಾ ಬದುಕಿನಲ್ಲಿ ಕೆಲ ಮನಸ್ತಾಪಗಳಿಂದ ಗಂಡನಿಂದ ದೂರವಾಗಿದ್ದಾರೆ. ಅತ್ತೆಯ ಕಿರುಕುಳ ತಾಳಲಾರದೇ ಪತಿಯಿಂದ ಡಿವೋರ್ಸ್ ಬೇಕು ಎಂದು ಸಹನಾ ಪಟ್ಟು ಹಿಡಿದಿದ್ದಾರೆ. ಸಹನಾ ಕೇಸ್‌ಗೆ ಲಾಯರ್ ಆಗಿ ಇಶಿತಾ ವರ್ಷ ಧಾರಾವಾಹಿಯಲ್ಲಿ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ. ವಿಶೇಷ ಪಾತ್ರಕ್ಕೆ ಇಶಿತಾ ಬಣ್ಣ ಹಚ್ಚಿದ್ದಾರೆ.

Share This Article