‘ಬಿಗ್ ಬಾಸ್’ ಮನೆಯಲ್ಲಿ ಇಶಾನಿ ರ್‍ಯಾಪ್ ಸಾಂಗ್, ಖಿನ್ನತೆಯ ಮಾತು

Public TV
2 Min Read

ರ್‍ಯಾಪ್ ಸಂಗೀತದ ಮೂಲಕವೇ ಗುರುತಿಸಿಕೊಂಡಿದ್ದರೂ ಇಶಾನಿ (Ishani) ಬಿಗ್‌ಬಾಸ್‌ (Bigg Boss Kannada) ಮನೆಯೊಳಗೆ ಬಂದ ಮೇಲೆ ಅವರ ರ್‍ಯಾಪ್ ಪ್ರೇಮ ವ್ಯಕ್ತಗೊಂಡಿದ್ದು ವಿರಳವೇ. ಮನೆಯೊಳಗಿನ ವಾತಾವರಣಕ್ಕೆ ಹೊಂದಿಕೊಳ್ಳುವ ಭರದಲ್ಲಿ, ಮೈಕಲ್‌ ಜೊತೆಗಿನ ಸ್ಪೆಷಲ್ ಫ್ರೆಂಡ್‌ಶಿಪ್‌, ಟಾಸ್ಕ್‌ಗಳ ಕಾವು, ಜಗಳ ಈ ಎಲ್ಲದರಿಂದ ಅವರೊಳಗಿನ ರ್‍ಯಾಪ್ ಗರ್ಲ್‌ ಬಚ್ಚಿಟ್ಟುಕೊಂಡಂತಿದ್ದಳು.

ಆದರೆ, ಒಳಗೆ ಬಚ್ಚಿಟ್ಟುಕೊಂಡಿದ್ದನ್ನು ಹೊರತೆಗೆದು ಅಸಲಿ ಮುಖ ತೋರಿಸುವುದೇ ಬಿಗ್‌ಬಾಸ್‌ ರಿಯಾಲಿಟಿ ಷೋನ ಸ್ಪೆಷಾಲಿಟಿ. ಅದು ಈ ಸೀಸನ್‌ನಲ್ಲಿ ಕೂಡ ಪ್ರತಿದಿನ ಸಾಬೀತಾಗುತ್ತಿದೆ. ಮನೆಯೊಳಗೆ ಪ್ರವೇಶಿಸುವಾಗ ಇದ್ದ ಹಾಗೆ ಯಾರೂ ಈಗ ಇಲ್ಲ. ದಿನಕ್ಕೊಂದು ಹೊಸ ಹೊಸ ರೂಪಗಳು ಅವರೊಳಗಿಂದ ಹೊರಬೀಳುತ್ತಿವೆ. ಹಾಗೆಯೇ ಇಶಾನಿ ಅವರ ಮನಸೊಳಗೆ ಬಚ್ಚಿಟ್ಟುಕೊಂಡಿದ್ದ ರ್‍ಯಾಪ್ ಗರ್ಲ್‌ ನಿಧಾನಕ್ಕೆ ಹೊರಬೀಳುತ್ತಿದ್ದಾಳೆ.  ಅದು JioCinemaದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಕನ್ನಡದಲ್ಲಿ ದಾಖಲಾಗಿದೆ.

ಇಶಾನಿ ಅವರೊಳಗಿನ ರ್‍ಯಾಪ್ ಗರ್ಲ್‌ ಮಾತಾಡತೊಡಗಿದ್ದಕ್ಕೆ ಸಾಕ್ಷಿಯಾಗಿದ್ದು, ಬುಲೆಟ್‌ ರಕ್ಷಕ್‌. ಬರೀ ಸಾಕ್ಷಿಯಾಗಿದ್ದಷ್ಟೇ ಅಲ್ಲ, ಅವರ ಸಹಾಯಕ್ಕೂ ನಿಂತಿದ್ದಾರೆ. ಇವತ್ತಿಡೀ ದಿನ ಇಶಾನಿ ಮ್ಯೂಸಿಕ್ ಮೂಡ್‌ನಲ್ಲಿಯೇ ಇದ್ದಂತಿತ್ತು. ನಡೆದಾಡುತ್ತಿರುವಾಗ, ಹರಟೆಗೆಂದು ಕೂತಿದ್ದಾಗಲೆಲ್ಲ ಗುನುಗುತ್ತಿದ್ದರು. ಕೆಲವು ವರ್ಷಗಳ ಹಿಂದೆ ಇಶಾನಿ ಡಿಪ್ರೆಶನ್‌ಗೆ ಹೋಗಿದ್ದರಂತೆ. ಇದರ ಕುರಿತೂ ಈವತ್ತು ಬಿಗ್‌ಬಾಸ್‌ ಮನೆಯಲ್ಲಿ ಅವರು ಅನುಭವಗಳನ್ನು ಹಂಚಿಕೊಂಡಿದ್ದಾರೆ. ವಿನಯ್, ಇಶಾನಿ, ನಮ್ರತಾ, ಮೈಕಲ್ ಎಲ್ಲರೂ ಕೂತು ಡಿಪ್ರೆಶನ್‌ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಮೈಕಲ್ ಮತ್ತು ನಮ್ರತಾ ಕೂಡ ಹಿಂದೊಮ್ಮೆ ಡಿಪ್ರೆಶನ್‌ಗೆ ಜಾರಿದ್ದರಂತೆ. ಮೈಕಲ್‌ ಅವರಿಗೆ ಡಿಪ್ರೆಶನ್‌ನಿಂದ ಹೊರಬರಲು ವರ್ಕೌಟ್‌ ತುಂಬ ಸಹಾಯ ಮಾಡಿದೆ. ನಮ್ರತಾಗೆ ಡಾನ್ಸ್‌ ಕೂಡ ಸಹಾಯ ಮಾಡಿತ್ತಂತೆ. ‘ನಾನು ಡಿಪ್ರೆಶನ್‌ನಿಂದ ಹೊರಗೆ ಬರಲು ಸಾಕಷ್ಟು ಪ್ರಯತ್ನಪಟ್ಟೆ. ಆದರೆ ಆಗುತ್ತಿರಲಿಲ್ಲ. ಸಂಗೀತ ಕ್ಲಾಸ್‌, ಡಾನ್ಸ್‌ ಕ್ಲಾಸ್‌ ಎಲ್ಲದಕ್ಕೂ ಹೋಗುತ್ತಿದ್ದೆ. ಆದರೆ ಮನಸ್ಸನ್ನು ಆವರಿಸಿದ ಖಿನ್ನತೆಯಿಂದ ಹೊರಬರುವುದು ಸುಲಭವಾಗಿರಲಿಲ್ಲ. ಸುಮಾರು ಎರಡು ವರ್ಷಗಳ ಕಾಲ ನನಗೆ ಯಾವ ಅವಕಾಶಗಳೂ ಸಿಗಲಿಲ್ಲ. ಇದೂ ನಾನು ಖಿನ್ನತೆಗೆ ಜಾರಲು ಕಾರಣವಾಗಿತ್ತು’ ಎಂದು ಅವರು ಹೇಳಿಕೊಂಡಿದ್ದಾರೆ.

ಕೊನೆಗೂ ತಮ್ಮನ್ನು ಖಿನ್ನತೆಯಿಂದ ಪಾರುಮಾಡಿದ ಸಂಗೀತದ ಶಕ್ತಿಯನ್ನು ಮನೆಯ ಸದಸ್ಯರಿಗೂ ತೋರಿಸಬೇಕು ಎಂದು ಅವರುನ ನಿರ್ಧರಿಸಿರಬೇಕು. ಇಶಾನಿ ಹಾಡು ಕಟ್ಟಲು ನಿರ್ಧರಿಸಿದ್ದರು. ಎಲ್ಲರೂ ಮಾತಾಡುತ್ತಿರುವಾಗ ಇಶಾನಿ ಹಾಳೆ ಪೆನ್ನು ಹಿಡಿದುಕೊಂಡು ಬಾಯಲ್ಲಿ ಏನೋ ಗುನುಗುತ್ತ ಮನಸ್ಸಿನೊಳಗೆ ಹುಟ್ಟುತ್ತಿರುವ ಹಾಡಿಗೆ ಅಕ್ಷರರೂಪ ನೀಡುತ್ತಿದ್ದರು.

ನಾನು ಕ್ವಿನ್‌ ಇಶಾನಿ

ನಾನು ರ್‍ಯಾಪರ್ ರಾಣಿ

ನಾನು ಏನ್ ಅಂತ ನನಗೆ ಗೊತ್ತು

ಇದು ಬಿಗ್ ಬಾಸ್

ಐ ಆಮ್‌ ಲೇಡಿ ಬಾಸ್

ನಾನು ಫೈಟರ್ ಲೇಡಿ

ಡೊಂಟ್ ಗಿವ್ ಅ

ಆಚೆ ನನ್ನ ಫ್ಯಾನ್ಸು

ಕೊಡ್ರೀ ಒಂದು ಚಾನ್ಸು

ಆಗ್ರೀನ್ ನಾನು ಬೌನ್ಸ್

ಇದೇ ನನ್ನ ರೂಲ್ಸು..

-ಹೀಗೆ ಲಿರಿಕ್ಸ್‌ ಮತ್ತೆ ಮತ್ತೆ ಹೇಳಿಕೊಳ್ಳುತ್ತ, ಅದನ್ನು ತಿದ್ದಿಕೊಳ್ಳುತ್ತ ಬರೆದುಕೊಳ್ಳುತ್ತಿದ್ದಾರೆ. ನಂತರ ಮನೆಯೊಳಗೆ ಬಂದು ಕೂತ ಮೇಲೆ ರಕ್ಷಕ್ (Rakshak)ಕೂಡ ಅವರ ಲಿರಿಕ್ಸ್‌ಗೆ ತಮ್ಮೆರಡು ಸಾಲು ಸೇರಿಸಿದ್ದಾರೆ.

‘ಕೇಳ್ರೋ ನನ್ನ ಫ್ಯಾನ್ಸು

ನಾನೇ ಇಲ್ಲಿ ಬಾಸು’ -ಇದು ರಕ್ಷಕ್ ಸೇರಿಸಿದ ಸಾಲುಗಳು. ಹಾಡು ಇನ್ನೂ ಮುಂದುವರಿಯುತ್ತಲೇ ಇತ್ತು. ಇಶಾನಿ ಇಷ್ಟೊಂದು ಉತ್ಸಾಹದಿಂದ ಕಟ್ಟುತ್ತಿರುವ ಹಾಡು ಪೂರ್ಣಗೊಂಡ ಮೇಲೆ ಹೇಗಿರಬಹುದು? ರಾಪ್‌ ಸಾಂಗ್ ಕಂಪೋಸ್ ಆದಮೇಲೆ ಹೇಗಿರುತ್ತದೆ? ಅದನ್ನು ಅವರು ಎಲ್ಲಿ ಹೇಗೆ ಹಾಡುತ್ತಾರೆ? ಎನ್ನುವುದು ಕುತೂಹಲದ ಅಂಶ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್