ಇದು ನಿಮ್ಮ ಫೆಮಿನಿಸಂ?- ದೀಪಿಕಾ ಪಡುಕೋಣೆ ವಿರುದ್ಧ ಸಂದೀಪ್ ರೆಡ್ಡಿ ಆಕ್ರೋಶ

Public TV
2 Min Read

ರ್ಜುನ್ ರೆಡ್ಡಿ, ಅನಿಮಲ್ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೋಸ್ಟ್ ಚರ್ಚೆಗೆ ಗ್ರಾಸವಾಗಿದೆ. ‘ಸ್ಪಿರಿಟ್’ ಚಿತ್ರದ ಕಥೆ ಲೀಕ್ ಆಗಿರೋದ್ದಕ್ಕೆ ನಿರ್ದೇಶಕ ಸಿಟ್ಟಾಗಿದ್ದಾರೆ. ದೀಪಿಕಾ ಪಡುಕೋಣೆಗೆ (Deepika Padukone) ಪರೋಕ್ಷವಾಗಿ ನಿರ್ದೇಶಕ ಟಾಂಗ್ ಕೊಟ್ರಾ ಎಂಬ ಅನುಮಾನ ನೆಟ್ಟಿಗರಲ್ಲಿ ಮೂಡಿದೆ. ಇದನ್ನೂ ಓದಿ:ಫಸ್ಟ್‌ ಟೈಮ್‌ ಕನ್ನಡ ಚಿತ್ರರಂಗದಲ್ಲಿ ಪೋಸ್ಟರ್‌ ಬ್ಯಾನ್‌

ನಿರ್ದೇಶಕನ ಪೋಸ್ಟ್‌ನಲ್ಲಿ ನಾನು ಕಲಾವಿದರಿಗೆ ಕಥೆ ಹೇಳುವಾಗ 100% ನಂಬಿಕೆ ಇಡುತ್ತೇನೆ. ಯಾರಿಗೂ ಕಥೆ ಹೇಳಬಾರದು ಅಂತ ನಮ್ಮ ನಡುವೆ ಒಪ್ಪಂದ ಆಗಿರುತ್ತದೆ. ಆ ನಿಯಮವನ್ನು ಮುರಿಯುವ ಮೂಲಕ ನೀವೇನು ಎಂಬುದನ್ನು ತೋರಿಸಿದ್ದೀರಿ. ಕಿರಿಯ ಕಲಾವಿದರನ್ನು ಕೆಳಗೆ ಹಾಕಿದ್ದಲ್ಲದೇ, ನನ್ನ ಸ್ಟೋರಿಯನ್ನು ಲೀಕ್ ಮಾಡಿದ್ದೀರಿ. ಇದೇನಾ ನಿಮ್ಮ ಸ್ತ್ರೀವಾದ ಎಂದು ಅವರು ಪ್ರಶ್ನಿಸಿದ್ದಾರೆ.

ಒಬ್ಬ ಫಿಲ್ಮ್ ಮೇಕರ್ ಆಗಿ, ನಾನು ನನ್ನ ಚಿತ್ರಕ್ಕಾಗಿ ವರ್ಷಗಳ ಕಠಿಣ ಪರಿಶ್ರಮ ಹಾಕಿದ್ದೇನೆ. ಫಿಲ್ಮ್ ಮೇಕಿಂಗ್ ನನಗೆ ಎಲ್ಲವೂ ಆಗಿದೆ. ಅದಕ್ಕೆ ನಾವು ಸಂಪೂರ್ಣವಾಗಿ ಕೆಲಸ ಮಾಡಿರುತ್ತೇವೆ. ಒಂದು ಕೆಲಸ ಮಾಡಿ ಮುಂದಿನ ಬಾರಿ ಸಂಪೂರ್ಣ ಕಥೆ ಹೇಳಿಬಿಡಿ, ನನಗೆ ಯಾವುದೇ ಸಮಸ್ಯೆ ಇಲ್ಲ ಎಂದು ಕೆಂಡಕಾರಿದ್ದಾರೆ.

ಈ ಆಕ್ರೋಶದ ಪೋಸ್ಟ್ ಅನ್ನು ಸಂದೀಪ್ ರೆಡ್ಡಿ ದೀಪಿಕಾ ಕುರಿತಾಗಿಯೇ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಿನಿ ಪ್ರಿಯರು ಚರ್ಚೆ ನಡೆಸುತ್ತಿದ್ದಾರೆ. ಇದನ್ನೂ ಓದಿ:ಪ್ರಶಾಂತ್ ನೀಲ್, ಜ್ಯೂ.ಎನ್‌ಟಿಆರ್ ಸಿನಿಮಾದಲ್ಲಿ ರಶ್ಮಿಕಾ ಐಟಂ ಡ್ಯಾನ್ಸ್?

 

View this post on Instagram

 

A post shared by Triptii Dimri (@tripti_dimri)

ಪ್ರಭಾಸ್‌ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಆಯ್ಕೆ ಮಾಡಿದ್ದಾರೆ ಎನ್ನಲಾಗಿತ್ತು. ಏಕಾಏಕಿ ಅದು ಏನು ಆಯ್ತೋ ಏನೋ ದಿಢೀರ್ ಅಂತ ಮೊನ್ನೆ (ಮೇ 24) ತೃಪ್ತಿ ದಿಮ್ರಿ ಅವರನ್ನು ಸಿನಿಮಾಗೆ ನಾಯಕಿ ಅಂತ ಚಿತ್ರತಂಡ ಘೋಷಣೆ ಮಾಡಿತ್ತು. ಇದನ್ನು ಸಹಿಸದ ದೀಪಿಕಾ ಕಥೆ ಲೀಕ್ ಮಾಡಿದ್ದಾರೆ ಎಂಬುದನ್ನು ನಿರ್ದೇಶಕ ಪರೋಕ್ಷವಾಗಿ ಹೇಳಿದ್ರಾ ಎಂಬ ಮಾತುಗಳು ಕೇಳಿ ಬರುತ್ತಿವೆ.

ಪ್ರಭಾಸ್ ಮತ್ತು ಸಂದೀಪ್ ರೆಡ್ಡಿ ವಂಗಾ ಕಾಂಬಿನೇಷನ್ ಸಿನಿಮಾ ‘ಸ್ಪಿರಿಟ್’ ಈ ವರ್ಷದ ಅಂತ್ಯದಲ್ಲಿ ಶೂಟಿಂಗ್ ಶುರುವಾಗಲಿದೆ. ಇದಕ್ಕೆ ತೃಪ್ತಿ ದಿಮ್ರಿ ನಾಯಕಿ ಎಂದು ಚಿತ್ರತಂಡ ಅನೌನ್ಸ್ ಮಾಡಿದೆ.

Share This Article