ಬೆಂಗಳೂರು: ದುಡ್ಡು ಏನ್ ಮೊಟ್ಟೆಯಿಡುತ್ತಾ..? ದುಡ್ಡು ಇಲ್ವೇನ್ರಿ ನಿಮ್ ಹತ್ರ? ಏನು ಅರಣ್ಯ ಇಲಾಖೆ ಬಡ ಇಲಾಖೆನಾ..? ಹೀಗಂತ ಸಿಎಂ ಸಿದ್ದರಾಮಯ್ಯ (Siddaramaiah), ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ (Eshwar Khandre) ಅವರಿಗೆ ಪ್ರಶ್ನೆ ಮಾಡಿದ ಪ್ರಸಂಗವೊಂದು ನಡೆಯಿತು.
ಅರಣ್ಯ ಇಲಾಖೆಯ (Forest Department) ಹಮ್ಮಿಕೊಂಡಿದ್ದ ʻರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ-2025ʼ ಹುತಾತ್ಮರ ದಿನಾಚರಣೆಯ ಕಾರ್ಯಕ್ರಮಲ್ಲಿ ವೇದಿಕೆಯಲ್ಲೇ ಸಿಎಂ ಈ ರೀತಿ ಪ್ರಶ್ನೆ ಮಾಡಿದ್ರು. ಆನೆ ಹಾವಳಿ ಹೆಚ್ಚಾಗಿರುವ ಬಗ್ಗೆ ಮಾತಾನಾಡಿದ ಸಿಎಂ, ಇದಕ್ಕೆ ರೈಲ್ವೇ ಬ್ಯಾರಿಕೇಡ್ (Railway Barricade) ವ್ಯವಸ್ಥೆಗೆ ಸೂಚಿಸಿದ್ರು. ಈ ವೇಳೆ 410 ಕಿಮಿ ಆಗಿದೆ ಇನ್ನು 500 ಕಿಮಿ ಮಾಡಬೇಕು ಅಂತಾ ಖಂಡ್ರೆ ಹೇಳಿದ್ರು. ಸರಿ ಮಾಡಿ ದುಡ್ ಇಲ್ವಾ ನಿಮ್ ಇಲಾಖೆನಲ್ಲಿ? ಇದನ್ನೇ ಹೇಳ್ಕೊಂಡು ಕೂರೋದಲ್ಲ. ನಿಮ್ದು ಬಡ ಇಲಾಖೆ ಏನು ಅಲ್ವಲ್ಲ? ಅಂತಾ ಟಾಂಗ್ ಕೊಟ್ರು. ಇದನ್ನೂ ಓದಿ: Forest Martyrs Day | ಹುತಾತ್ಮರಿಗೆ 50 ಲಕ್ಷ ರೂ. ಪರಿಹಾರ: ಈಶ್ವರ್ ಖಂಡ್ರೆ
ಬೋರ್ಡ್‌ನಲ್ಲಿ ರಿಜೆಕ್ಟ್ ಮಾಡ್ತಾರೆ ಸರ್, ಫೈನಾನ್ಸ್ ನಿಮ್ದೆ ಅಲ್ವಾ ಅಂತಾ ಖಂಡ್ರೆನೂ ಮರು ಉತ್ತರ ನೀಡಿದ್ರು. ಯಾರ್ರಿ ಅವ್ರು ರಿಜೆಕ್ಟ್ ಮಾಡೋರು ಕರ್ಕೊಂಡು ಬನ್ನಿ. ಅಂತಾ ಸಿಎಂ ಹೇಳಿದ್ರು. ಇನ್ನು ಈಗ ವೀರಪ್ಪನ್ ನಂತಹ ಚೋರನ ಕಾಟ ಇಲ್ಲ, ಈಗ ಮಾನವ – ಪ್ರಾಣಿಗಳ ಸಂಘರ್ಷವೇ ದೊಡ್ಡ ವಿಚಾರವಾಗಿದೆ. ವನ್ಯಜೀವಿಗಳ ಸಂಖ್ಯೆ ಹೆಚ್ಚಾಗಿದೆ ಕಾಡು ಕಡಿಮೆಯಾಗಿದೆ. ಹಿರಿಯ ಅಧಿಕಾರಿಗಳು ಮೊದಲು ಇದರ ಬಗ್ಗೆ ಗಮನ ಹರಿಸಿ ಕಾಡುಬೆಳೆಸಬೇಕು ಜೊತೆಗೆ ಕಾಡಿಗೆ ಹೋಗಬೇಕು ಆಗ ಕಿರಿಯ ಅಧಿಕಾರಿಗಳು ಉತ್ಸಾಹದಿಂದ ಕೆಲ್ಸ ಮಾಡ್ತಾರೆ ಅಂತಾ ಕಿವಿಮಾತು ಹೇಳಿದ್ರು. ಇದನ್ನೂ ಓದಿ: ಸಾಕಿದ ನಾಯಿಯ ಮೇಲೆ ಮಾರಣಾಂತಿಕ ಹಲ್ಲೆ – ಕರುಳು ಕಿತ್ತು ಬರುವಂತಿದೆ ಈ ದೃಶ್ಯ
ಹುಲಿ ಚಿರತೆ ಆನೆಗಳು ಕಾಡು ಬಿಟ್ಟು ನಾಡಿಗೆ ಬರುತ್ತಿದೆ. ಅನೇಕರು ಇದ್ರಲ್ಲಿ ಸಾಯುತ್ತಿದ್ದಾರೆ. ಸರ್ಕಾರ ಹುತಾತ್ಮರಿಗೆ ಪರಿಹಾರ ಕೊಡೋದು ದೊಡ್ಡದಲ್ಲ. ಆದ್ರೇ ಮಾನವ – ಪ್ರಾಣಿಗಳ ಸಂಘರ್ಷ ಕಡಿಮೆಗೆ ಪ್ರಯತ್ನ ಪಡಬೇಕು. ಪ್ರಾಣಿಗಳು ಕಾಡು ಬಿಟ್ಟು ಯಾಕೆ ಹೊರಗೆ ಬರುತ್ತಿದೆ. ಇದು ಸವಾಲಿನ ಪ್ರಶ್ನೆಯಾಗಿದೆ. ಕಾಡಿನಲ್ಲಿ ಆಹಾರ ನೀರು ಸಿಕ್ಕರೆ ನಾಡಿಗೆ ಬರೋದು ಕಡಿಮೆಯಾಗುತ್ತದೆ. ಅರಣ್ಯ ಪ್ರದೇಶದ ಅಧಿಕಾರಿಗಳು ಇದನ್ನು ಮಾಡಲೇಬೇಕು. ಕಾಡಿನಲ್ಲಿ ನೀರು, ಆಹಾರದ ವ್ಯವಸ್ಥೆ ಸರಿಯಾಗಬೇಕು ಅಂದ್ರು. ಇದನ್ನೂ ಓದಿ: ನನ್ನ ರಕ್ತ ಬೆರಕೆಯಲ್ಲ, ಪ್ಯೂರ್ ಹಿಂದುತ್ವ – ಸಿಟಿ ರವಿ