ದೆಹಲಿ ಬ್ಲಾಸ್ಟ್‌ಗೂ ಕರ್ನಾಟಕಕ್ಕೂ ಇದ್ಯಾ ಲಿಂಕ್? – ಚುರುಕುಗೊಂಡ ತನಿಖೆ

Public TV
1 Min Read

ನವದೆಹಲಿ/ಬೆಂಗಳೂರು: ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ್ದ ಕಾರು ಸ್ಫೋಟ ಇದೀಗ ಕರ್ನಾಟಕಕ್ಕೆ ಲಿಂಕ್ ಹೊಂದಿದ್ಯಾ ಎಂಬ ಅನುಮಾನ ವ್ಯಕ್ತವಾಗಿದೆ.

ಕಾರು ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್‌ಐಎ ತನಿಖೆ ಚುರುಕುಗೊಂಡಿದ್ದು, ಬೇರೆ ಬೇರೆ ಆಯಾಮಗಳಲ್ಲಿ ಮಾಹಿತಿ ಪತ್ತೆಹಚ್ಚುತ್ತಿದೆ. ಐದು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಬಂಧನವಾಗಿದ್ದ ಡಾ.ಬ್ರೇವ್‌ಗೂ ಇದಕ್ಕೂ ಸಂಬಂಧವಿದ್ಯಾ ಎಂಬ ಶಂಕೆ ಮೂಡಿದೆ.

ಸದ್ಯ ಕರ್ನಾಟಕ ಎನ್‌ಐಎ ತಂಡ ಅಲರ್ಟ್ ಆಗಿದೆ. ದೆಹಲಿ ಬ್ಲಾಸ್ಟ್ನ ರೂವಾರಿ ಉಮರ್‌ಗೆ ಬೆಂಗಳೂರಿಮ ಲಿಂಕ್ ಇದ್ಯಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಈಗಾಗಲೇ ಎನ್‌ಐಎ ವಶದಲ್ಲಿರುವ ಮೂವರು ಆರೋಪಿಗಳ ತೀವ್ರ ವಿಚಾರಣೆ ನಡೆಸಿರೋ ಅಧಿಕಾರಿಗಳು ಬೆಂಗಳೂರಿನ ಮಾಹಿತಿ ಕೆದಕುತ್ತಿದ್ದಾರೆ.

ಈ ಮಾಹಿತಿಯನ್ನು ಆಧರಿಸಿ ಈಗಾಗಲೇ ಕರ್ನಾಟಕದಲ್ಲಿ ಇರುವ ಎನ್‌ಐಎ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

Share This Article