ಮೋದಿ ಈ ದೇಶದ ಪ್ರಧಾನಿ, ಮೈಸೂರಿಗೆ ಬರೋದ್ರಲ್ಲಿ ತಪ್ಪೇನಿಲ್ಲ: ಸಿದ್ದರಾಮಯ್ಯ

Public TV
1 Min Read

ವಿಜಯಪುರ: ಮೋದಿ ಈ ದೇಶದ ಪ್ರಧಾನಿ ಅವರು ಮೈಸೂರಿಗೆ ಬರೋದ್ರಲ್ಲಿ ತಪ್ಪೇನಿಲ್ಲ. ಆದರೆ ಪ್ರಧಾನಿ ಬರುತ್ತಿರುವುದು ಅಂತಾರಾಷ್ಟ್ರೀಯ ಯೋಗದಿನಕ್ಕೆ ಮಾತ್ರವಲ್ಲ, ರಾಜಕೀಯ ಮಾಡುವುದಕ್ಕೂ ಬರುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕುಟುಕಿದ್ದಾರೆ.

ವಿಜಯಪುರದ ದೇವರಹಿಪ್ಪರಗಿ ಪಟ್ಟಣದಲ್ಲಿ ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಅಂತಾರಾಷ್ಟ್ರೀಯ ಯೋಗದಿನಾಚರಣೆ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಭೇಟಿ ನೀಡುವುದರ ಕುರಿತು ಅವರು ಮಾತನಾಡಿದ್ದಾರೆ. ಮೋದಿ ದೇಶದ ಪ್ರಧಾನಿ, ಮೈಸೂರಿಗೆ ಬರೋದರಲ್ಲಿ ತಪ್ಪಿಲ್ಲ. ಬರಬೇಡ ಅಂತ ಹೇಳೋಕೆ ಆಗುತ್ತಾ. ಲೆಟ್ ಹಿಮ್ ಕಂ, ಅಟೆಂಡ್ ದಿ ಫಂಕ್ಷನ್. ದೇಶದ ಪ್ರಧಾನಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸುತ್ತಾರೆ. ರಾಜಕೀಯ ಕೂಡಾ ಮಾಡಲಿಕ್ಕೆ ಬರ್ತಿದ್ದಾರೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಬಾಲ್ಯ ಸ್ನೇಹಿತ ಅಬ್ಬಾಸ್ ನೆನಪಿಸಿಕೊಂಡ ಮೋದಿ – ನೆಟ್ಟಿಗರಿಗೆ ಕುತೂಹಲ

text book bjp

ಬಿ.ಸಿ.ನಾಗೇಶ್ ರಾಜೀನಾಮೆ ಕೊಡಲಿ: ಪಠ್ಯಪುಸ್ತಕ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ಬಿ.ಸಿ.ನಾಗೇಶ್ ವಿರುದ್ಧ ಹರಿಹಾಯ್ದಿದ್ದಾರೆ. ಪುಸ್ತಕ ಪರಿಷ್ಕರಣೆ ಹಿಂದೆ ಇರೋದು ಬಿ.ಸಿ.ನಾಗೇಶ್, ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಏಕೆಂದರೆ ಮಹಾನ್ ವ್ಯಕ್ತಿಗಳಿಗೆ ಅಪಮಾನ ಮಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಹಕ್ಕಿ ಡಿಕ್ಕಿಯಾಗಿ 185 ಮಂದಿ ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ!

ಚಕ್ರತೀರ್ಥನನ್ನು ಅರೆಸ್ಟ್ ಮಾಡಿ: ರೋಹಿತ್ ಚಕ್ರತೀರ್ಥ ಅರೆಸ್ಟ್ ಆಗಬೇಕು. ಈ ಪಠ್ಯ ವಾಪಾಸ್ ತೆಗೆದುಕೊಳ್ಳಬೇಕು. ಚಕ್ರತೀರ್ಥ ಕೇಸರೀಕರಣಕ್ಕಾಗಿ ಹೀಗೆ ಮಾಡಿದ್ದಾರೆ. ತಿರುಚಿದ ಪಠ್ಯವನ್ನ ಮಕ್ಕಳಿಗೆ ಬೋಧಿಸಬಾರದು. ಮಕ್ಕಳಿಗೆ ವೈಚಾರಿಕ, ವೈಜ್ಞಾನಿಕ ಜ್ಞಾನ ಕೊಡಬೇಕು. ಕುವೆಂಪು, ಅಂಬೇಡ್ಕರ್, ಬಸವಣ್ಣ, ನಾರಾಯಣಗುರು, ಬಾಲಗಂಗಾಧರ ಸ್ವಾಮೀಜಿ, ಸಿದ್ದಗಂಗಾಶ್ರೀಗಳಿಗೆ ಪಠ್ಯದಲ್ಲಿ ಅಪಮಾನವಾಗಿದೆ ಅದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *