ಸಾಮಾನ್ಯವಾಗಿ ನಾವು ಮನೆಯಿಂದ ಆಚೆ ಹೋದಾಗ ಬಾಯಾರಿಕೆ ಆದರೆ ಬಾಟಲ್ ಖರೀದಿಸಿ, ನೀರು ಕುಡಿಯುತ್ತದೆ. ಬಳಿಕ ಆ ಬಾಟಲ್ ಅನ್ನು ಎಸೆಯುತ್ತವೆ. ಇನ್ನೂ ಕೆಲವರು ಹೋಟೆಲ್ ಗಳಿಗೆ ಹೋದಾಗ ಖರೀದಿಸಿದ ಬಾಟಲ್ ಅನ್ನು ಮನೆಗೆ ತಂದು ಅದನ್ನೇ ಬಳಸುತ್ತಾರೆ. ಹೀಗೆ ದಿನನಿತ್ಯ ನೀರು ಕುಡಿಯಲು ಪ್ಲಾಸ್ಟಿಕ್ ಬಾಟಲ್ ಬಳಸುವುದು ಉತ್ತಮನಾ? ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಒಂದು ದಿನ ನೀರು ಕುಡಿಯಲು ಪ್ಲಾಸ್ಟಿಕ್ ಬಾಟಲ್ ಬಳಸಿದರೆ ಸಮಸ್ಯೆ ಇಲ್ಲ. ಆದರೆ ದಿನನಿತ್ಯ ನೀರು ಕುಡಿಯಲು ಪ್ಲಾಸ್ಟಿಕ್ ಬಾಟಲನ್ನೇ ಬಳಸಿದರೆ ಅದು ಆರೋಗ್ಯಕ್ಕೆ ಹಾನಿಕಾರಕ. ಹೌದು, ಅಧ್ಯಯನಗಳ ಪ್ರಕಾರ, ಪ್ರತಿದಿನ ಪ್ಲಾಸ್ಟಿಕ್ ಬಾಟಲ್ ನಲ್ಲಿ ನೀರು ಕುಡಿಯುವ ಮೂಲಕ 90 ಸಾವಿರಕ್ಕೂ ಹೆಚ್ಚು ಮೈಕ್ರೋಪ್ಲಾಸ್ಟಿಕ್ ಕಣಗಳನ್ನು ಸೇವಿಸುತ್ತಾರೆ.
ಈ ಕುರಿತು ಪ್ರಮುಖ ಲೇಖಕಿ ಸಾರಾ ಎಂಬುವವರು ಅಧ್ಯಯನ ನಡೆಸಿದ್ದಾರೆ. ಥೈಲ್ಯಾಂಡ್ ನ ದೀಪಗೊಂದಕ್ಕೆ ಭೇಟಿ ನೀಡಿದಾಗ ಅಲ್ಲಿ ಸಮುದ್ರ ತೀರದಲ್ಲಿ ಚುಕ್ಕಿಗಳಂತೆ ಹರಡಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹಾಗೂ ಅವುಗಳಲ್ಲಿ ಎದ್ದು ಕಾಣುತ್ತಿದ್ದ ಪ್ಲಾಸ್ಟಿಕ್ ಬಾಟಲಿಗಳನ್ನು ಕಂಡು ನಿರಾಶಗೊಂಡರು. ಇದೊಂದು ಪರಿಸರಕ್ಕೆ ಸಮಸ್ಯೆಯನ್ನು ಉಂಟು ಮಾಡುತ್ತದೆ ಎಂದು ಅರಿತ ಅವರು ಈ ಕುರಿತು ಆಳವಾಗಿ ಅಧ್ಯಯನ ಮಾಡಲು ನಿರ್ಧರಿಸಿದರು. ಕೆನಡಾದ ಕಾಂಕರ್ಡಿಯ ವಿಶ್ವವಿದ್ಯಾಲಯದ ಡಾಕ್ಟರ್ ಇಟ್ ಪಡೆದಿದ್ದ ಸಾರಾ ಅವರು ಈ ಕುರಿತು ಸಂಶೋಧನೆ ನಡೆಸಿದರು. ಪ್ಲಾಸ್ಟಿಕ್ ಬಾಟಲಿಗಳಿಂದ ಮಾನವನ ದೇಹದ ಮೇಲಾಗುವ ಪರಿಣಾಮಗಳ ಕುರಿತು ಆಳವಾಗಿ ಅಧ್ಯಯನ ನಡೆಸಿದರು. ಅವರ ಅಧ್ಯಯನದ ವರದಿಯಂತೆ, ನಲ್ಲಿ ನೀರನ್ನು ಕುಡಿಯುವ ಜನರಿಗಿಂತ ಪ್ಲಾಸ್ಟಿಕ್ ಬಾಟಲಿಗಳ ಮೂಲಕ ನೀರು ಕುಡಿಯುವವರು 90 ಸಾವಿರಕ್ಕೂ ಹೆಚ್ಚು ಮೈಕ್ರೋ ಪ್ಲಾಸ್ಟಿಕ್ ಕಣಗಳನ್ನ ಸೇವಿಸುತ್ತಾರೆ ಎಂದು ತಿಳಿಸಿದ್ದಾರೆ.
ಮೈಕ್ರೋಪ್ಲಾಸ್ಟಿಕ್ ಏನಿದು?
ಪ್ಲಾಸ್ಟಿಕ್ ಬಾಟಲಿಗಳಲ್ಲಿ ಕುಡಿಯುವ ನೀರಿನಲ್ಲಿ ಕಣ್ಣಿಗೆ ಕಾಣದ ಕೆಲ ಕಣಗಳಿವೆ. ಅದರಲ್ಲಿ ಮೈಕ್ರೋ ಪ್ಲಾಸ್ಟಿಕ್ ಗಳು ಒಂದು. ಬಾಟಲಿ ತಯಾರಾಗುವಾಗ, ಸಂಗ್ರಹಣೆ, ಸಾಗಾಣಿ ಈ ಹಂತಗಳಲ್ಲಿ ಬಾಟಲಿಗಳಲ್ಲಿ ಮೈಕ್ರೋಪ್ಲಾಸ್ಟಿಕ್ ಗಳು ಬಿಡುಗಡೆಯಾಗುತ್ತವೆ. ಬಾಟಲಿಗಳು ಸೂರ್ಯನ ಬೆಳಕಿಗೆ ವಡ್ಡಿಕೊಂಡಾಗ ಈ ಕಣಗಳು ಹೊರ ಬರುತ್ತವೆ.
ಸಾಮಾನ್ಯವಾಗಿ ಆಹಾರ ಮತ್ತು ಕುಡಿಯುವ ನೀರಿನಿಂದ ಜನರು ವಾರ್ಷಿಕವಾಗಿ ಅಂದಾಜು 39 ಸಾವಿರದಿಂದ 52 ಸಾವಿರದಷ್ಟು ಮೈಕ್ರೋ ಪ್ಲಾಸ್ಟಿಕ್ ಕಣಗಳನ್ನು ಸೇವಿಸುತ್ತಾರೆ. ಬಾಟಲಿ ನೀರನ್ನು ಕುಡಿಯುವ ಜನರು ವರ್ಷಕ್ಕೆ 90 ಸಾವಿರ ಹಾಗೂ ನಲ್ಲಿ ನೀರನ್ನು ಕುಡಿಯುವ ಜನರು 4 ಸಾವಿರ ಮೈಕ್ರೋ ಪ್ಲಾಸ್ಟಿಕ್ ಗಳನ್ನು ಸೇವಿಸುತ್ತಾರೆ.
ಸಾಮಾನ್ಯವಾಗಿ ಪ್ಲಾಸ್ಟಿಕ್ ಬಾಟಲ್ ನಲ್ಲಿ ಪ್ರತಿಯೊಂದು ಲೀಟರ್ ಗೆ 2,40,000 ಹೆಚ್ಚು ಮೈಕ್ರೋಪ್ಲಾಸ್ಟಿಕ್ ಕಣಗಳು ಇರುತ್ತವೆ. ಇವುಗಳು ಸಾಗಾಟದ ಸಂದರ್ಭದಲ್ಲಿ ಅಥವಾ ಬಾಟಲ್ನ ಕ್ಯಾಪ್ ತೆಗೆಯುವಾಗ ಹಾಗೂ ಮುಚ್ಚುವಾಗ ಉಂಟಾಗುವ ಘರ್ಷಣೆಯಿಂದ ನೀರಿನೊಂದಿಗೆ ಈ ಕರಣಗಳು ಸೇರಿಕೊಳ್ಳುತ್ತವೆ.
ಮೈಕ್ರೋಪ್ಲಾಸ್ಟಿಕ್ ಎಷ್ಟು ಹಾನಿಕಾರಕ?
ಮೈಕ್ರೋಪ್ಲಾಸ್ಟಿಕ್ ಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ರಕ್ತವನ್ನು ಪ್ರವೇಶಿಸಿ ಪ್ರಮುಖ ಅಂಗಗಳಿಗೆ ಹಾನಿ ಉಂಟು ಮಾಡುತ್ತದೆ. ಹಾರ್ಮೋನುಗಳಿಗೆ ಸಮಸ್ಯೆಯನ್ನು ಉಂಟು ಮಾಡುವುದಲ್ಲದೆ, ಉರಿಯೂತ, ಜೀವಕೋಶಗಳಿಗೆ ಸಮಸ್ಯೆ, ನರಗಳಿಗೆ ಹಾನಿ, ಸಂತಾನೋತ್ಪತ್ತಿ ಸಮಸ್ಯೆ ಹಾಗೂ ಕ್ಯಾನ್ಸರ್ ರೋಗಕ್ಕೂ ಕಾರಣವಾಗುತ್ತದೆ.
ಇದಲ್ಲದೆ ಉಸಿರಾಟದ ಕಾಯಿಲೆ, ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿ ಕೊಡುತ್ತದೆ ಎಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ.
ಇವುಗಳನ್ನ ಹೇಗೆ ಕಂಡು ಹಿಡಿಯಲಾಗುತ್ತದೆ?
ನ್ಯಾನೋ ಮತ್ತು ಮೈಕ್ರೋಪ್ಲಾಸ್ಟಿಕ್ ಪತ್ತೆ ಹಚ್ಚಲು ಕೆಲವು ವಿಧಾನಗಳನ್ನು ಅನುಸರಿಸುತ್ತಾರೆ. ಸಂಶೋಧಕರ ಮಾಹಿತಿ ಪ್ರಕಾರ, ಪ್ಲಾಸ್ಟಿಕ್ ಬಾಟಲ್ ಗಳನ್ನು ಒಂದೇ ಬಾರಿ ಬಳಸುವುದಾದರೆ ಒಳ್ಳೆಯದು. ಅದಕ್ಕಿಂತ ಹೆಚ್ಚು ಬಾರಿ ಬಳಸಿದರೆ ಆರೋಗ್ಯಕ್ಕೆ ಸಮಸ್ಯೆ ಉಂಟಾಗುತ್ತದೆ ಎಂದು ಒತ್ತಿ ಹೇಳಿದ್ದಾರೆ. ಹೀಗಾಗಿ ಆರೋಗ್ಯದ ದೃಷ್ಟಿಯಿಂದ ಶುಚಿ ಹಾಗೂ ಶುದ್ಧ ನೀರನ್ನ ಕುಡಿಯುವುದು ಒಳ್ಳೆಯದು. ಪ್ರತಿದಿನ ಪ್ಲಾಸ್ಟಿಕ್ ಬಾಟಲ್ ಗಳನ್ನು ನೀರು ಕುಡಿಯಲು ಬಳಸುವುದನ್ನ ತಪ್ಪಿಸಬೇಕು. ಈ ಸಮಸ್ಯೆ ಚಿಕ್ಕದೆನಿಸಿದರು ಕೂಡ ದೀರ್ಘಕಾಲದ ವಿಷಕ್ಕೆ ಇದು ಕಾರಣವಾಗುತ್ತದೆ ಎಂದು ಜನರು ಅರ್ಥಮಾಡಿಕೊಳ್ಳಬೇಕು.
ಇದೆಲ್ಲದರ ಹೊರತಾಗಿ ಜಗತ್ತಿನಲ್ಲೇಡೆ ಸರ್ಕಾರಗಳು ಪ್ಲಾಸ್ಟಿಕ್ ಅನ್ನು ತ್ಯಜಿಸಲು ಅಥವಾ ಮಿತಗೊಳಿಸಲು ಹಲವು ಕ್ರಮಗಳನ್ನ ಹಾಗೂ ಕಾನೂನುಗಳನ್ನ ಜಾರಿಗೆ ತಂದಿದೆ. ಆದರೆ ಈ ನಿಯಮಗಳು ಪ್ಲಾಸ್ಟಿಕ್ ಚೀಲ, ಪ್ಯಾಕೇಜಿಂಗ್ ಸಾಮಗ್ರಿಗಳಿಗೆ ಮಾತ್ರ ಸೀಮಿತವಾಗಿದೆ. ಹೀಗಾಗಿ ಜನರು ಪ್ಲಾಸ್ಟಿಕ್ ಬಾಟಲಿಗಳನ್ನು ಆರೋಗ್ಯಕ್ಕೆ ಅಪಾಯಕಾರಿ ಎಂದು ಪರಿಗಣಿಸಬೇಕು. ಅವುಗಳನ್ನ ಹೆಚ್ಚು ಬಾರಿ ಬಳಸುವುದಕ್ಕಿಂತ, ಒಂದೇ ಬಾರಿ ಬಳಸಿ ಎಸೆಯುವುದು ಉತ್ತಮ ಎಂದು ಅರಿತುಕೊಳ್ಳಬೇಕು.
ಹೀಗಾಗಿ ಸತತವಾಗಿ ನೀರನ್ನು ಕುಡಿಯಲು ಪ್ಲಾಸ್ಟಿಕ್ ಬಾಟಲ್ ಗಳನ್ನು ಬಳಸುವುದರಿಂದ ದೇಹದಲ್ಲಿ ಮೈಕ್ರೋಪ್ಲಾಸ್ಟಿಕ್ ಗಳ ಸಂಖ್ಯೆ ಹೆಚ್ಚಾಗುತ್ತದೆ. ಇದರಿಂದ ದೇಹದ ಮೇಲಾಗುವ ಪರಿಣಾಮವು ಹೆಚ್ಚಾಗುತ್ತದೆ. ಇದರ ಬದಲಿಗೆ BPA free ಬಾಟಲ್ ಗಳನ್ನು ಅಥವಾ ಗಾಜಿನ, ಸ್ಟೀಲ್ ಬಾಟಲ್ ಗಳನ್ನ ದಿನನಿತ್ಯದ ಉಪಯೋಗಗಳಿಗೆ ಬಳಸುವುದು ಉತ್ತಮ.








