ಮಳೆ ಬರುವುದಕ್ಕೂ ಸರ್ಕಾರಕ್ಕೂ ಸಂಬಂಧ ಇದೆಯಾ? ಇದು ನೈಸರ್ಗಿಕ ವಿಕೋಪ: ರಾಮಲಿಂಗಾ ರೆಡ್ಡಿ

Public TV
2 Min Read

ರಾಮನಗರ: ತಮಿಳುನಾಡಿಗೆ (Tamil Nadu) ಕಾವೇರಿ ನೀರು (Kaveri Water) ಹರಿಸುವುದನ್ನು ಖಂಡಿಸಿ ಮಂಗಳವಾರ ಬೆಂಗಳೂರು ಹಾಗೂ ರಾಮನಗರ (Ramanagara) ಬಂದ್ ವಿಚಾರದ ಬಗ್ಗೆ ರಾಮನಗರದಲ್ಲಿ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.

ಭಾಷೆ, ಜಲ, ರಾಜ್ಯದ ಬಗ್ಗೆ ಅನ್ಯಾಯವಾದ ವೇಳೆ ಸಂಘಟನೆಗಳು ಬಂದ್ ಮಾಡುವುದು ಸಹಜ. ಹೀಗಾಗಿ ಅವರಿಗೆ ನಮ್ಮಿಂದ ಯಾವುದೇ ಧಕ್ಕೆ ಉಂಟಾಗುವುದಿಲ್ಲ. ಮಳೆ ಬರುವುದಕ್ಕೂ ಸರ್ಕಾರಕ್ಕೂ ಸಂಬಂಧ ಇದೆಯಾ? ಇದೊಂದು ನೈರ್ಸಗಿಕ ವಿಕೋಪ. ಕಳೆದ ವರ್ಷ 660 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಟ್ಟಿದ್ದೇವೆ. ಈಗ ರಾಜ್ಯದಲ್ಲಿ ಮಳೆ ಇಲ್ಲ. ಈ ಬಗ್ಗೆ ಮಾನಿಟರಿಂಗ್ ವಿಂಗ್‌ಗೆ ಎಲ್ಲವೂ ಗೊತ್ತಿದೆ. ಸುಪ್ರೀಂ ಕೋರ್ಟ್ಗೂ ಸಹ ನೀರಿಲ್ಲದಿರುವ ಬಗ್ಗೆ ಮಾಹಿತಿ ಇದ್ದರೂ ತಡೆ ನೀಡಿಲ್ಲ. ಪ್ರಧಾನಿಗಳಿಗೆ ಮಾಹಿತಿ ಇದ್ದರೂ ಅವರೂ ಸಹ ಮಧ್ಯ ಪ್ರವೇಶ ಮಾಡುತ್ತಿಲ್ಲ. ನೀರಿಗಾಗಿ ಬೊಬ್ಬೆ ಹೊಡೆಯುತ್ತಿರುವ ಬಿಜೆಪಿ (BJP) ನಾಯಕರು, ಪ್ರಧಾನಿಗಳಿಗೆ ಮನವರಿಕೆ ಮಾಡಿಕೊಡಬೇಕಿತ್ತು. ಆದರೆ ಆ ಕೆಲಸ ಮಾಡದೇ ಸುಮ್ಮನೆ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ದೇವದುರ್ಗ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಹೊಂದಾಣಿಕೆ ಇಲ್ಲ: ಕರೆಮ್ಮ ನಾಯಕ್

ನಮ್ಮ ಸರ್ಕಾರ ರೈತರಿಗೆ ಮಾತ್ರವಲ್ಲದೇ ಯಾವುದೇ ವರ್ಗಕ್ಕೆ ಮೋಸ ಮಾಡಿಲ್ಲ. ಸುಳ್ಳು ಹೇಳುವುದು, ಮೋಸ ಮಾಡುವುದು ಬಿಜೆಪಿ ಕೆಲಸ. ನಾವು ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೆವೆ. ಬಿಜೆಪಿಗೆ ಮೋಸ ಮಾಡುವುದು ಅವರ ರಕ್ತದಲ್ಲಿಯೇ ಇದೆ. ಬಿಜೆಪಿಯವರು ಇಂಡಿಯಾ (INDIA) ಒಕ್ಕೂಟದ ಬಗ್ಗೆ ಮಾತನಾಡುವ ಮೊದಲು, ಅವರ ಎನ್‌ಡಿಎ (NDA) ಮೈತ್ರಿ ಕೂಟದಲ್ಲಿ ಅಣ್ಣ ಡಿಎಂಕೆ ಇದ್ದಾರೆ. ಅವರಿಗೆ ನೀರಿನ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡಬೇಕಿತ್ತು ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಬಂದ್ ಬಿಸಿ ನಡುವೆ ಮಂಗಳವಾರ CWRC ಸಭೆ – ಮತ್ತೆ ನೀರು ಹರಿಸಲು ಸೂಚಿಸುತ್ತಾ ನಿಯಂತ್ರಣ ಸಮಿತಿ?

ಬೆಂಗಳೂರು ಬಂದ್‌ಗೆ (Bengaluru Bandh) ಬಿಎಂಟಿಸಿ ಬೆಂಬಲ ನೀಡುವ ವಿಚಾರದ ಕುರಿತು ಮಾತನಾಡಿ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಯೂನಿಯನ್‌ಗಳಿವೆ. ಅವರು ಬಂದ್ ಬಗ್ಗೆ ನಿರ್ಣಯ ಮಾಡುತ್ತಾರೆ. ಬಂದ್‌ಗೆ ನಮ್ಮ ವಿರೋಧ ಇಲ್ಲ. ಆದರೆ ಎರಡು ದಿನ ಬಂದ್ ಮಾಡುವುದರಿಂದ ಜನರಿಗೆ ಸಮಸ್ಯೆ ಆಗಲಿದೆ. ಈ ಬಗ್ಗೆ ಸಂಘಟನೆಗಳು ಚಿಂತನೆ ಮಾಡಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ ಜೊತೆ ಮೈತ್ರಿ – ಜೆಡಿಎಸ್‌ನಲ್ಲಿಅಸಮಾಧಾನವಿಲ್ಲ ಎಂದ ಖಾಶೆಂಪೂರ್

3 ಡಿಸಿಎಂ ಹುದ್ದೆ ಬಗ್ಗೆ ಕಾಂಗ್ರೆಸ್‌ನಲ್ಲಿ ಚರ್ಚೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಈ ಸಮಯದಲ್ಲಿ ಡಿಸಿಎಂ ಹುದ್ದೆ ಬಗ್ಗೆ ಚರ್ಚೆ ಅನಾವಶ್ಯಕ. ವೇಣುಗೋಪಾಲ್ ಅವರು ಸಹ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅನಾವಶ್ಯಕ ಗೊಂದಲ ಸೃಷ್ಟಿಸುವುದು ಬೇಕಿಲ್ಲ. ಡಿಸಿಎಂ ಆಯ್ಕೆ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಯಾರೂ ಡಿಸಿಎಂ ವಿಚಾರವಾಗಿ ಮಾತನಾಡಬಾರದು ಎಂದು ಸ್ವಪಕ್ಷೀಯ ಸಚಿವರಿಗೆ ಸೂಚನೆ ನೀಡಿದರು. ಇದನ್ನೂ ಓದಿ: ಶಾಂತಿಯುತ ಬಂದ್‌ಗೆ ಸರ್ಕಾರ ಅಡಚಣೆ ಮಾಡಲ್ಲ: ಡಿಕೆಶಿ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್