ತವರಿಗೆ ಮತ್ತೆ ಮರಳುತ್ತಾ ಹಳ್ಳಿಹಕ್ಕಿ- ವಿಶ್ವನಾಥ್‍ಗೆ ಈಗ ಖರ್ಗೆಯೇ ಆಸರೆ!

Public TV
2 Min Read

ಮೈಸೂರು: ಬಿಜೆಪಿ (BJP) ಯಲ್ಲಿದ್ದರೂ ಅಕ್ಷರಶಃ ವಿರೋಧ ಪಕ್ಷದ ನಾಯಕನಾಗಿರೋ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಸದ್ದಿಲ್ಲದೆ ಮರಳಿ ಕಾಂಗ್ರೆಸ್ (Congress) ಗೂಡಿಗೆ ಸೇರುವ ಲಕ್ಷಣಗಳು ಸ್ಪಷ್ಟವಾಗುತ್ತಿವೆ. ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನು ವಿಶ್ವನಾಥ್ ಭೇಟಿ ಮಾಡಿರೋ ಹಿನ್ನೆಲೆಯಲ್ಲಿ ಮತ್ತೆ ವಿಶ್ವನಾಥ್ ಪಕ್ಷಾಂತರ ಮಾಡ್ತಾರಾ ಎಂಬ ಸುದ್ದಿ ದಟ್ಟವಾಗಿದೆ.

ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ (H. Vishwanath) , ಮೂರು ವರ್ಷದ ಹಿಂದೆ ಜೆಡಿಎಸ್ ತೊರೆದು ಬಿಜೆಪಿ ಸೇರಿ ಕಾಂಗ್ರೆಸ್ – ಜೆಡಿಎಸ್ ಸರ್ಕಾರ ಪತನವಾಗಲು ಪ್ರಮುಖ ಕಾರಣರಾಗಿದ್ದರು. ಬಾಂಬೆ ಟೀಂಗೆ ಒಂದರ್ಥದಲ್ಲಿ ವಿಶ್ವನಾಥ್ ಅವರೇ ಕ್ಯಾಪ್ಟನ್. ಆದರೆ ಉಪಚುನಾವಣೆಯಲ್ಲಿ ಸೋತ ಬಳಿಕ ಅವರು ಕ್ಯಾಪ್ಟನ್‍ಶಿಪ್ ಕಳೆದುಕೊಂಡು ಇಡೀ ಬಾಂಬೆ ಟೀಂ ಪಾಲಿಗೆ ಅಪ್ರಸ್ತುತರೆನ್ನಿಸಿಕೊಂಡರು. ಆ ಹಿನ್ನೆಲೆಯಲ್ಲಿ ನಿಧಾನವಾಗಿ ವಿಶ್ವನಾಥ್ ಬಿಜೆಪಿ ವಿರುದ್ಧ ಬುಸುಗೊಡಲು ಆರಂಭಿಸಿದ್ದರು.

ಎಚ್. ವಿಶ್ವನಾಥ್ ಟೀಕೆಗಳಿಂದ ಮುಜುಗರಕ್ಕೆ ಒಳಗಾಗಿದ್ದ ಬಿಜೆಪಿ ಅವರನ್ನು ಸಮಾಧಾನ ಮಾಡಲೆಂದೇ ಅವರಿಗೆ ಸಾಹಿತ್ಯ ಕೋಟಾದಲ್ಲಿ ವಿಧಾನ ಪರಿಷತ್ ಸದಸ್ಯನಾಗಿ ಮಾಡಿತು. ಆಗ ಸ್ವಲ್ಪ ಕಾಲ ಮೌನವಾಗಿದ್ದ ವಿಶ್ವನಾಥ್, ನಂತರ ಏಕಾಏಕಿ ಮತ್ತೆ ಬಿಜೆಪಿ ವಿರುದ್ಧ ವಾಗ್ದಾಳಿ ಆರಂಭಿಸಿದರು. ಅದು ಎಷ್ಟರ ಮಟ್ಟಿಗೆ ಎಂದರೆ ವಿರೋಧ ಪಕ್ಷಗಳಿಗಿಂತಾ ಹೆಚ್ಚಾಗಿ ಬಿಜೆಪಿ ಆಡಳಿತವನ್ನು ಹೆಜ್ಜೆಹೆಜ್ಜೆಗೂ ಟೀಕಿಸಲು ಶುರು ಮಾಡಿದರು. ಎಚ್. ವಿಶ್ವನಾಥ್ ತಮ್ಮ ಪಕ್ಷದ ನಾಯಕ ಎಂಬುದನ್ನೇ ಬಿಜೆಪಿ ಮರೆತು ಬಿಟ್ಟಿದಿಯಾ ಎಂಬುಷ್ಟರ ಮಟ್ಟಿಗೆ ಪಕ್ಷದಲ್ಲಿ ಅವರನ್ನು ಬಿಜೆಪಿ ನಿರ್ಲಕ್ಷಿಸಿತು. ಇದನ್ನೂ ಓದಿ: ಗುಜರಾತ್‌ನಲ್ಲಿ ಬಿಜೆಪಿಗೆ ಭರ್ಜರಿ ಬಹುಮತ: ಟುಡೇಸ್‌ ಚಾಣಕ್ಯ

ಈಗ ನೋಡಿದರೆ ಎಚ್. ವಿಶ್ವನಾಥ್ ದಿಢೀರನೆ ಹೋಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಕೈಗೆ ಒಂದು ಹೂಗುಚ್ಛ ನೀಡಿ ಶುಭ ಹಾರೈಸಿದ್ದಾರೆ. ಇದು ಬರೀ ಶುಭ ಹಾರೈಕೆಯ ಭೇಟಿಯಲ್ಲ. ಇದರ ಹಿಂದೆ ಬೇರೆಯದ್ದೇ ರಾಜಕೀಯ ಲೆಕ್ಕ ಇರೋದು ಸ್ಪಷ್ಟ. ಏಕೆಂದರೆ ಎಚ್. ವಿಶ್ವನಾಥ್ ಇಡುವ ಪ್ರತಿ ಹೆಜ್ಜೆ, ಹಾಗೂ ಹೇಳುವ ಪ್ರತಿ ಮಾತಿನ ಹಿಂದೆ ರಾಜಕೀಯ ಗುಣಕಾರ ಇದ್ದೆ ಇರುತ್ತೆ. ಈ ದೃಷ್ಟಿಯಿಂದ ಭೇಟಿ ಮಹತ್ವ ಪಡೆದುಕೊಂಡಿದೆ.

ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿರೋ ಎಚ್. ವಿಶ್ವನಾಥ್‍ಗೆ ತಮ್ಮ ಹಳೆಯ ಹಿರಿಯ ಸ್ನೇಹಿತರಾದ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿರೋ ಕಾರಣ ತಮಗೆ ತಮ್ಮ ಮೂಲ ಪಕ್ಷವೇ ಬೆಸ್ಟ್ ಎನ್ನಿಸಿದ್ದರೆ ಅದರಲ್ಲಿ ಅಚ್ಚರಿ ಇಲ್ಲ. ಜೊತೆಗೆ ವಿಶ್ವನಾಥ್ ಕಾಂಗ್ರೆಸ್ ಸೇರ್ಪಡೆ ಆದರೆ ಅದು ಬಿಜೆಪಿ ಪಾಲಿಗೆ ಶಾಕ್ ಕೂಡ ಅಲ್ಲ. ಇದನ್ನೂ ಓದಿ: Himachal Pradesh Exit Poll Result: ಬಿಜೆಪಿ ಕಾಂಗ್ರೆಸ್‌ ಮಧ್ಯೆ ನೆಕ್‌ ಟು ನೆಕ್‌ ಫೈಟ್‌

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *