ಬೆಳ್ಳಿ ಕೊಡ್ತೀನಿ ಅಂದು ಅಧಿಕಾರ ಕಳಕ್ಕೊಂಡ ನಂತ್ರ ಮಲೆಮಾದೇಶ್ವರನನ್ನೇ ಮರೆತ್ರಾ ಸಿದ್ದರಾಮಯ್ಯ..?

Public TV
1 Min Read

ಚಾಮರಾಜನಗರ: ಮಾಜಿ ಸಿಎಂ ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡ ಮೇಲೆ ತಾವು ತೀರಿಸಬೇಕಿದ್ದ ಹರಕೆಯನ್ನು ಮರೆತಂತೆ ಕಾಣ್ತಿದೆ.

ಹೌದು. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿರುವ ಮಲೆಮಾದೇಶ್ವರ ಬೆಟ್ಟದ ಮಾದಪ್ಪನಿಗೆ ಬೆಳ್ಳಿ ಉಡುಗೊರೆ ನೀಡೋದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಆದ್ರೆ ಈಗ 9 ತಿಂಗಳು ಕಳೆಯುತ್ತಾ ಬಂದ್ರೂ, ಮಾದೇಶ್ವರನಿಗೆ ಸಲ್ಲಿಸಬೇಕಿದ್ದ ಹರಕೆ ಕಡೆ ಮಾತ್ರ ಗಮನ ನೀಡಿಲ್ಲ.

ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಅಂದ್ರೆ ಜನವರಿ 11ರಂದು ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪ್ರಾಧಿಕಾರದ ಸಭೆ ನಡೆಸುವ ವೇಳೆ ಸಭೆಯಲ್ಲಿ ಮಾದಪ್ಪನಿಗೆ ಬೆಳ್ಳಿ ರಥ ನಿರ್ಮಾಣ ಮಾಡುವ ಪ್ರಸ್ತಾಪವನ್ನು ಅಧಿಕಾರಿಗಳು ಸಿದ್ದರಾಮಯ್ಯ ಅವರ ಮುಂದಿಟ್ಟಿದ್ದರು. ಆಗ ಸಿದ್ದರಾಮಯ್ಯ ಅವರು ನನಗೆ ಅಭಿಮಾನಿಗಳು ನೀಡಿರುವ ಬೆಳ್ಳಿ ಉಡುಗೊರೆಗಳನ್ನು ಮಾದಪ್ಪನಿಗೆ ನೀಡುತ್ತೇನೆ. ಆ ಬೆಳ್ಳಿ ಉಡುಗೊರೆಯಲ್ಲಿ ಮಾದಪ್ಪನಿಗೆ ಬೆಳ್ಳಿ ರಥ ಮಾಡಿಸಿ ಎಂದು ಅಧಿಕಾರಿಗಳಿಗೆ ಹೇಳಿದ್ದರು.

ಆದ್ರೆ ನಂತರದಲ್ಲಿ ಅಧಿಕಾರ ಕಳೆದುಕೊಂಡ ಸಿದ್ದರಾಮಯ್ಯ ಹರಕೆ ತೀರಿಸುವ ಗೋಜಿಗೇ ಹೋಗಿಲ್ಲ. ಈ ವಿಚಾರ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Share This Article
Leave a Comment

Leave a Reply

Your email address will not be published. Required fields are marked *