ಅಶೋಕ್ ಲಾಜಿಕ್ ಪ್ರಕಾರ ಸಿ.ಟಿ ರವಿ ಭಯೋತ್ಪಾದಕರಾ? – ಪ್ರಿಯಾಂಕ್ ಖರ್ಗೆ ತಿರುಗೇಟು

Public TV
3 Min Read

ಬೆಂಗಳೂರು: ಆರ್.ಅಶೋಕ್ ಅವರ ಲಾಜಿಕ್ ಪ್ರಕಾರ ಸಿ.ಟಿ ರವಿ (C T Ravi) ಭಯೋತ್ಪಾದಕರಾ? ವಿ.ಸೋಮಣ್ಣ ಟೆರರಿಸ್ಟಾ? ಸುಮ್ಮನೆ ಮಾತಾಡ್ಬಾರ್ದು, ವಿರೋಧ ಪಕ್ಷದ ನಾಯಕರ ಮಾತಿಗೆ ತೂಕ ಇರಬೇಕು ಎಂದು ಪ್ರಿಯಾಂಕ್ ಖರ್ಗೆ (Priyank Kharge) ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಅಶೋಕ್ ಲಾಜಿಕ್ ಇಲ್ಲದೆ ಸುಮ್ಮನೆ ಮಾತನಾಡಬಾರದು, ವಿರೋಧ ಪಕ್ಷದ ನಾಯಕರ ಮಾತಿಗೆ ತೂಕ ಇರಬೇಕು. ನಾವು ಟೆರರಿಸ್ಟಿನಿಂದ ಹೇಗೆ ಸಲಹೆ ತಗೋತಿವಿ? ಬಲವಾದ ಮೂಲ ಇದ್ರೆ ಅಮಿತ್ ಶಾಗೆ ದೂರು ಕೊಡಲಿ. 10 ವರ್ಷದಿಂದ ಅವರದೇ ಸರ್ಕಾರ ಇತ್ತಲ್ವಾ? ಭಯೋತ್ಪಾದನೆ ನಿರ್ಮೂಲನೆಗೆ ಏನು ಮಾಡಿದ್ದಾರೆ ಬೆಂಗಳೂರಿಗೆ ಪಾಕಿಸ್ತಾನಿಗಳು ಹೇಗೆ ಬರ್ತಾರೆ? ಇಸ್ಲಾಂ ಅಹಮದಾಬಾದ್‌ನಿಂದ್ ಏರ್ ಡ್ರಾಫ್ಟ್ ಆಗ್ತಿದ್ದಾರಾ? ನಮಗೆ ಇಲ್ಲಿ ಪಾಠ ಮಾಡ್ತಿರಾ. ಕೆಲಸಕ್ಕೆ ಬಾರದೇ ಇರುವ ವಿದೇಶಾಂಗ ಸಚಿವ ಜೈಶಂಕರ್ ಜೊತೆಗೆ ಮಾತಾಡಿ. ಹೆಂಗ್ರಿ ಭಾರತಕ್ಕೆ ಬಂದ್ರು ಇವರು? ನಮ್ಮ ಮೇಲೆ ಆರೋಪ ಮಾಡ್ತೀರಾ ಅಲ್ವಾ ಅದಕ್ಕೆ ದಾಖಲೆ ಕೊಡಿ ಎಂದು ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: Secunderabad| ಮುತ್ಯಾಲಮ್ಮ ದೇವಸ್ಥಾನದ ವಿಗ್ರಹ ಧ್ವಂಸ – ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ

ಕ್ಯಾಬಿನೆಟ್‌ನಲ್ಲಿ ಕೇಸ್ ವಾಪಸ್ ಪಡೆದ ಹಿನ್ನೆಲೆ, ಸರ್ಕಾರದ ಸಚಿವರು ಭಯೋತ್ಪಾದಕರು ಎಂಬ ಬಿಜೆಪಿ ನಾಯಕರ ಆರೋಪ ವಿಚಾರವಾಗಿ ಮಾತನಾಡಿ, 60 ಪ್ರಕರಣದಲ್ಲಿ 43 ಪ್ರಕರಣವನ್ನು ಕ್ಯಾಬಿನೆಟ್ ಉಪಸಮಿತಿಯ ನಿರ್ಧಾರದ ಮೇಲೆ ಕೇಸ್ ಪಡೆದಿದ್ದೇವೆ. ಎಲ್ಲವೂ ಕೂಲಂಕುಷವಾಗಿ ಚರ್ಚೆ ಮಾಡಿ ತೀರ್ಮಾನ ಮಾಡಿ ವಾಪಸ್ ಪಡೆದಿದ್ದೇವೆ. ಇದರಲ್ಲಿ ತಪ್ಪೇನಿದೆ? ವಿ.ಸೋಮಣ್ಣ ಅವರದು ನಾಲ್ಕೈದು ಕೇಸ್ ವಾಪಸ್ ಪಡೆದಿದ್ದೇವೆ. ಸಿ.ಟಿ ರವಿ ಹಾಗೂ ಸುಕುಮಾರ್ ಶೆಟ್ಟಿ ಅವರ ಕೇಸ್, ಮೈಸೂರು ಮಹಿಳಾ ಮೋರ್ಚಾ ಕೇಸ್ ವಾಪಸ್ ಪಡೆದಿದ್ದೇವೆ. ಇವರೆಲ್ಲರೂ ದೇಶದ್ರೋಹಿಗಳಾ? ಇವರೆಲ್ಲರೂ ಭಯೋತ್ಪಾದನೆ ನಡೆಸುತ್ತಾರಾ? ಏನಾದರೂ ಲಾಜಿಕ್ ಇರಬೇಕಲ್ವಾ? ಬಿಜೆಪಿಗೆ ಯಾವುದೇ ವಿಷಯ ಸಿಗುತ್ತಿಲ್ಲ. ಸುಮ್ಮನೆ ಹಿಟ್ ಅಂಡ್ ರನ್ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.

ಅವರ ಒಳಜಗಳ ಮುಚ್ಚಿ ಹಾಕಲು ಈ ರೀತಿಯಾಗಿ ಮಾತಾಡುತ್ತಾರೆ. ಹಿಂದಿನ ಸರ್ಕಾರದಲ್ಲಿ ಯಾರೆಲ್ಲ ಎಷ್ಟು ಕೇಸ್ ವಾಪಸ್ ಪಡೆದಿದ್ದಾರೆ ಪಟ್ಟಿ ಮಾಡ್ಲಿ. ಯಡಿಯೂರಪ್ಪ ಸರ್ಕಾರ 100ಕ್ಕಿಂತ ಹೆಚ್ಚು ಕೇಸ್ ಪಡೆದಿದ್ದಾರೆ. ಈಗ ಬಿಜೆಪಿ ಮಾಡಿದ್ದು ಎಷ್ಟು ಪ್ರತಿಭಟನೆ ಆಯ್ತು? ರಾಜ್ಯ ಸರ್ಕಾರ ಹಾಗೂ ಗೃಹ ಇಲಾಖೆಗೆ ಶಕ್ತಿ ಇದೆ. ಗೃಹ ಇಲಾಖೆ ಹಾಕಿದರು ಅವರೇ ತೆಗೀತಾರೆ ಬಿಜೆಪಿಗೆ ಕಾನೂನು ಗೊತ್ತಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ 5ವರ್ಷ ಸಿಎಂ ಎನ್ನುವವರೆಲ್ಲ ಸಿಎಂ ಆಕಾಂಕ್ಷಿಗಳೇ ಆಗಿದ್ದಾರೆ: ಬಿವೈವಿ

ಛಲವಾದಿ ನಾರಾಯಣಸ್ವಾಮಿ ವಿರುದ್ಧ ಪ್ರತಿಕ್ರಿಯಿಸಿ, ಶೆಡ್ ನಾರಾಯಣಸ್ವಾಮಿ ಅಂತಾ ನಾನು ಹೇಳಿಲ್ಲ. ಹಿರಿಯರು, ಕಿರಿಯರು ಅನ್ನೋದನ್ನ ನಾನು ರಾಜಕೀಯದಲ್ಲಿ ನೋಡಿದ್ದೇನೆ. ಚುನಾವಣೆಯಲ್ಲಿ ನಿಂತು ಬಂದಿದ್ದೇನೆ. ನಾರಾಯಣಸ್ವಾಮಿ ಎಷ್ಟು ಸಲ ಚುನಾವಣೆಯಲ್ಲಿ ನಿಂತು ಬಂದಿದ್ದಾರೆ? ಅವರು ಖರ್ಗೆ ಅವರ ಬಗ್ಗೆ ಮಾತಾಡಿದ್ರೆ ಮಾಸ್ಟರ್ ಸ್ಟ್ರೋಕ್. ಅವರೆಲ್ಲ ಮಾತಾಡಬಹುದು. ಪ್ರಿಯಾಂಕ್ ಖರ್ಗೆ ಮಾತಾಡಬಾರದಾ? ಲೀಗಲ್ ಆಗಿ ಸೈಟ್ ವಾಪಸ್ ನೀಡಿದರೂ ಕಷ್ಟ. ಇವರ ಬಿರಿಯಾನಿ ಅಂಗಡಿ ಏನಾಯ್ತು? 10 ವರ್ಷದಿಂದ ಹಾಗೆ ಇಟ್ಕೊಂಡ್ರಲ್ವಾ. ಏನು ಮಾಡಿದ್ರು? ನನಗೆ ಪಾಠ ಮಾಡುವ ಅವಶ್ಯಕತೆ ಇಲ್ಲ. ವೈಯಕ್ತಿಕ ಟೀಕೆ ಬಿಟ್ಟು, ಲಾಜಿಕಲ್ ಮಾತಾಡಬೇಡಿ. ಬಿಜೆಪಿಯವರ ಹತ್ತಿರ ಪಾಠ ಕಲಿಯುವ ಅವಶ್ಯಕತೆ ಇಲ್ಲ. ನಮ್ಮ ಪಾರ್ಟಿಯವರು ಹೇಳಿದಂತೆ ಕೇಳುತ್ತೇವೆ. ಕೆಣಕೋದು ನಿಲ್ಲಿಸಿ ಎಂದು ಗುಡುಗಿದರು. ಇದನ್ನೂ ಓದಿ: ದುರ್ಗಾದೇವಿ ಮೂರ್ತಿ ವಿರ್ಸಜನೆ| ಮಸೀದಿ ಎದುರು ಹಾಡು ಹಾಕಿದ್ದಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ

ಖರ್ಗೆ ಸಿಎಂ ಆಗಲು ಟ್ರೈ ಮಾಡ್ತಾರೆ, ಹೀಗಾಗಿ ಸೈಟ್ ವಾಪಸ್ ಮಾಡ್ತಾರೆ ಎಂಬ ಬಿಜೆಪಿ ಆರೋಪ ವಿಚಾರವಾಗಿ ಮಾತನಾಡಿ, ಮೊದಲು ರಾಜ್ಯಪಾಲರ (Governer) ಭೇಟಿಗೆ ಹೋದಾಗ ಮೇಲ್ಮನೆ ಸದಸ್ಯರ ಬಗ್ಗೆ ದೂರು ಕೊಟ್ಟಿದ್ದೇವೆ. ಅದರ ಬಗ್ಗೆ ಚರ್ಚೆ ಮಾಡೋಕೆ ಹೇಳಿ. ಅದರ ಬಗ್ಗೆ ಬಿಜೆಪಿ ನಾಯಕರು ರಾಜ್ಯಪಾಲರ ಹತ್ತಿರ ಉತ್ತರ ತಗೊಂಡು ಬನ್ನಿ. ಪದೇ ಪದೇ ರಾಜ್ಯಪಾಲರ ಮುಂದೆ ಹೋಗಿ ಕೈ ಕಟ್ಕೊಂಡು ನಿಲ್ಲುತ್ತಾರೆ. ಪಾಪ ಅನ್ನಿಸುತ್ತದೆ. ಮೊದಲು ಹೋಗಿ ಸೈಟ್ ಲೀಗಲ್ ಆಗಿ ತೆಗೆದುಕೊಂಡಿಲ್ಲ ಅಂದಿದ್ದರು. ಈಗ ಏನ್ ಹೇಳ್ತಾರೆ. ಈ ವಿಚಾರದಲ್ಲಿ ಬಿಜೆಪಿಯವರು ಎಷ್ಟಾದ್ರೂ ಕೂಗಾಡಲಿ. ಬಟ್ಟೆ ಹರ್ಕೊಳ್ಳಲಿ. ನಾನು ತಲೆ ಕೆಡಿಸಿಕೊಳ್ಳಲ್ಲ. ರಾಜ್ಯಪಾಲರ ಹತ್ತಿರ ಯಾಕೆ ಹೋಗ್ತೀರಾ? ಪ್ರಧಾನಿ ಹಾಗೂ ರಾಷ್ಟ್ರಪತಿ ಹತ್ತಿರ ಹೋಗಿ ದೂರು ಕೊಡಲಿ. ನಿಜವಾಗಿಯೂ ಕುತೂಹಲ ಇದೆ. ಇವರು ಹೇಗೆ ಅಕ್ರಮ ಅಂತ ಸಾಭೀತು ಮಾಡ್ತಾರೆ ನೋಡೋಣ ಎಂದರು. ಇದನ್ನೂ ಓದಿ: Uttar Pradesh | ದುರ್ಗಾದೇವಿ ಮೂರ್ತಿ ವಿರ್ಸಜನೆ ವೇಳೆ ಕೋಮು ಸಂಘರ್ಷ – ಲಾಠಿ ಚಾರ್ಜ್, 30 ಮಂದಿ ಬಂಧನ

Share This Article