ಸಿಎಂ ಡಿನ್ನರ್ ಮೀಟಿಂಗ್ ಸಿದ್ದರಾಮಯ್ಯ ಅಧಿಕಾರ ಅಂತ್ಯದ ಮುನ್ಸೂಚನೆಯಾ- ಛಲವಾದಿ ಪ್ರಶ್ನೆ

Public TV
2 Min Read

ಬೆಂಗಳೂರು: ಸಿಎಂ ಡಿನ್ನರ್ ಮೀಟಿಂಗ್ ಸಿದ್ದರಾಮಯ್ಯ (Siddaramaiah) ಅಧಿಕಾರ ಅಂತ್ಯದ ಮುನ್ಸೂಚನೆಯಾ? ಡಿಕೆ ಶಿವಕುಮಾರ್ ಸಿಎಂ ಆಗುವ ಆರಂಭವೇ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಪ್ರಶ್ನಿಸಿದ್ದಾರೆ.

ಸಿಎಂ ಡಿನ್ನರ್ ಮೀಟಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನವೆಂಬರ್ ಕ್ರಾಂತಿ ಅನ್ನೋದು ಬಹುದಿನಗಳ ಸುದ್ದಿ. 6 ತಿಂಗಳ ಹಿಂದೆಯೇ ಕಾಂತ್ರಿ ಆಗುತ್ತೆ ಎಂದು ಕಾಂಗ್ರೆಸ್ ನಾಯಕರೇ ಹೇಳಿದ್ರು. ಆ ಕ್ರಾಂತಿಗೆ ಇನ್ನೊಂದು ತಿಂಗಳು ಇದೆ. ಅದರ ಬೆಳವಣಿಗೆ ಈಗ ಶುರುವಾಗಿದೆ‌. ಸಿಎಂ ಅವರು ಬದಲಾವಣೆ ಆಗ್ತಾರೆ ಅನ್ನೋ ಸಮಯದಲ್ಲಿ ಡಿನ್ನರ್ ಮೀಟಿಂಗ್ ಮಾಡುತ್ತಿದ್ದಾರೆ. ಸಿಎಂ ಅಲ್ಲದೇ ಬೇರೆ ಮಂತ್ರಿಗಳು ಸಭೆ ಮಾಡ್ತಿದ್ದಾರೆ. ಇದು ಕ್ರಾಂತಿಯ ವಿಚಾರವೇ ಅಂತ ಅನುಮಾನ ವ್ಯಕ್ತಪಡಿಸಿದರು. ಇದನ್ನೂ ಓದಿ:  ನಾವು ಮಾಡಿರೋದು ಪೊಲಿಟಿಕಲ್ ಮೀಟಿಂಗ್ ಅಲ್ಲ: ಪರಮೇಶ್ವರ್

 

ಡಿನ್ನರ್ ಮೀಟಿಂಗ್ ಅಂದರೆ ಅದೇ ವಿಶೇಷತೆ. ಎರಡು ವರ್ಷಗಳಿಂದ ಡಿನ್ನರ್ ಮೀಟಿಂಗ್ ಸಿಎಂ ಮಾಡಿರಲಿಲ್ಲ.ಈಗ ಮಾಡ್ತಿದ್ದಾರೆ ಅಂದರೆ ಸಿದ್ದರಾಮಯ್ಯ (Siddaramaiah) ಅವರ ಅಧಿಕಾರ ಅಂತ್ಯವಾ? ಅಥವಾ ಡಿಕೆಶಿ (DK Shivakumar) ಗುಂಪು ಹೇಳು ರೀತಿ ನವೆಂಬರ್ ಗೆ ಡಿಕೆಶಿವಕುಮಾರ್ ಸಿಎಂ ಆಗ್ತಾರೆ ಅನ್ನೋದರ ಪ್ರಾರಂಭನಾ? ಅಥವಾ ದಲಿತ ಸಿಎಂ ಮಾಡ್ತೀನಿ ಅಂತ ಕಾಂಗ್ರೆಸ್ ಹೇಳ್ತಿದೆ. ಈಗಲಾದರೂ ದಲಿತ ಸಿಎಂ ಮಾಡಿ ಅದಕ್ಕೆ ತೆರೆ ಎಳೆಯುತ್ತಾರಾ ಅಂತ ಪ್ರಶ್ನೆ ಮಾಡಿದರು.

ನಿನ್ನೆಯಿಂದ ಸಿಎಂ ಆಗಿ ಪರಮೇಶ್ವರ್ ಅವರನ್ನ ಮಾಡುತ್ತಾರೆ. ಅವರನ್ನು ಬೆಂಬಲಿಸುತ್ತೇವೆ ಎಂದು ಸಿಎಂ ಜೊತೆ ಇರೋ ಮಂತ್ರಿಗಳು ಹೇಳುತ್ತಿದ್ದಾರೆ. ಸಿಎಂ ಅವರು ಪರಮೇಶ್ವರ್ ಸಿಎಂ ಮಾಡಿಸೋಕೆ ಪ್ರಯತ್ನ ಮಾಡ್ತಿದ್ದಾರಾ? ನವೆಂಬರ್ ಕ್ರಾಂತಿಗೂ ಸಿಎಂ ಡಿನ್ನರ್ ಮೀಟಿಂಗ್‌ಗೂ ನಿಕಟ ಸಂಬಂಧವಿದೆ. ಈ ಬೆಳವಣಿಗೆ ನೋಡ್ತಿದ್ದರೆ ಏನೋ ದೊಡ್ಡ ವಿಷಯ ಇದೆ ಅಂತ ಜನರು ಅನ್ನಿಸುತ್ತಿದೆ ಅಂತ ತಿಳಿಸಿದರು. ಇದನ್ನೂ ಓದಿ:  ಕುಕ್ಕರ್ ಬ್ರ್ಯಾಂಡ್ ಪ್ರೆಸ್ಟೀಜ್ ಸಂಸ್ಥಾಪಕ ಟಿಟಿ ಜಗನ್ನಾಥನ್ ನಿಧನ

ಈ ಬಾರಿಯ ದಸರಾ ಜನ ಸಾಮಾನ್ಯರ ದಸರಾ ಆಗಿರಲಿಲ್ಲ. ಕಾಂಗ್ರೆಸ್ ದಸರಾ ಆಗಿತ್ತು. ಈ ಬಾರಿ ದಸರಾ ಸಿದ್ದರಾಮಯ್ಯ, ಮಹದೇವಪ್ಪ ಅವರ ಅವರ ಮನೆ ಮದುವೆ ಸಮಾರಂಭ ನಡೆದ ಹಾಗೆ ಇತ್ತು. ಜನ ಸಾಮಾನ್ಯರು ಕಷ್ಟಪಟ್ಟರೂ ದಸರಾ ನೋಡಲು ಸಾಧ್ಯವಾಗಲಿಲ್ಲ. ಟಿಕೆಟ್ ಕಾಳಸಂತೆಯಲ್ಲಿ ಮಾರಾಟ ಆಗಿತ್ತು. ಸಿದ್ದರಾಮಯ್ಯ, ಮಹದೇವಪ್ಪ ಮೊಮ್ಮಕ್ಕಳ ಕಾರ್ಯಕ್ರಮದ ರೀತಿ ಇತ್ತು ಎಂದು ಹೇಳಿ ಯದುವೀರ್‌ ಒಡೆಯರ್‌ ಹೇಳಿಕೆಯನ್ನು ಸಮರ್ಥಿಸಿದರು.

Share This Article