3,000 ರೂ.ಗೆ ಆಧಾರ್‌ – ಅಕ್ರಮ ವಾಸಿಗಳಿಗೆ ಸ್ವರ್ಗವಾಗಿದ್ಯಾ ಬೆಂಗಳೂರು? ʻಪಬ್ಲಿಕ್ ಟಿವಿʼ ರಿಯಾಲಿಟಿಯಲ್ಲಿ ಸತ್ಯ ಬಟಾಬಯಲು!

2 Min Read

– ಬಾಂಗ್ಲಾದಿಂದ ಕಳ್ಳದಾರಿಯಲ್ಲಿ ಬಂದು ನೆಲೆಸಿದ್ರಾ ವಲಸಿಗರು?

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರಾಜ್ಯದ ಭದ್ರತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೀಗ ಬೆಂಗಳೂರು ನಗರದಲ್ಲಿಯೇ ಸುಮಾರು 2 ಲಕ್ಷಕ್ಕೂ ಅಧಿಕ ಅಕ್ರಮ ಬಾಂಗ್ಲಾ ಪ್ರಜೆಗಳು ನೆಲೆಸಿರುವ ಶಂಕೆ ಇತ್ತೀಚೆಗಷ್ಟೇ ವ್ಯಕ್ತವಾಗಿತ್ತು. ಈ ಕುರಿತು ವಿಪಕ್ಷಗಳು ಕ್ರಮ ಕೈಗೊಳ್ಳುವಂತೆ ಗೃಹಸಚಿವರನ್ನ ಆಗ್ರಹಿಸಿದ್ದವು. ಇದೀಗ ನಿಮ್ಮ ʻಪಬ್ಲಿಕ್‌ ಟಿವಿʼ (Public TV) ರಿಯಾಲಿಟಿ ಚೆಕ್‌ನಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಕಳ್ಳದಾರಿ ಬಟಾಬಯಲಾಗಿದೆ. ಇದು ಅಕ್ರಮ ವಲಸಿಗರಿಗೆ ಬೆಂಗಳೂರು ಸ್ವರ್ಗವಾಗ್ತಿದ್ಯಾ? ಅನ್ನೋ ಅನುಮಾನವನ್ನೂ ಮೂಡಿಸಿದೆ.

ಏನಾಗ್ತಿದೆ ಬೆಂಗಳೂರಿನಲ್ಲಿ?
ಅತ್ತ ಬಾಂಗ್ಲಾದಲ್ಲಿ ಹಿಂದೂಗಳ (Hindu) ಸರಣಿ ಹತ್ಯೆ ನಡೆಯುತ್ತಿದೆ. ಆದ್ರೆ ರಾಜ್ಯ ರಾಜಧಾನಿಯಲ್ಲಿ ನೆಲೆಸಿರುವ ಅಗ್ರಮ ವಲಸಿಗರು ರಾಜರೋಷವಾಗಿಯೇ ಜೀವನ ಮಾಡ್ತಿದ್ದಾರೆ. ಕೆ.ಆರ್‌ ಪುರಂನ (KR Pura) ಶಾಂತಿಲೇಔಟ್‌ನಲ್ಲಿ ಅಕ್ರಮ ಶೆಡ್‌ಗಳು ತಲೆ ಎತ್ತಿರೋದು ಇದಕ್ಕೆ ಸಾಕ್ಷಿಯಾಗಿದೆ. ನೂರಾರು ಸಂಖ್ಯೆಯ ವಲಸಿಗರು, ಆಧಾರ್‌ ಕಾರ್ಡ್‌, ವಿದ್ಯುತ್‌ ಸಂಪರ್ಕ ಪಡೆದು ರಾಜರೋಷವಾಗಿ ಸ್ಥಳೀಯರಂತೆ ಜೀವನ ನಡೆಸುತ್ತಿದ್ದಾರೆ. ಅಸ್ಸಾಂ, ಕೋಲ್ಕತ್ತಾ ಮೂಲದವರು ಸಹ ಶೆಡ್‌ಗಳನ್ನ ನಿರ್ಮಾಣ ಮಾಡಿಕೊಂಡಿದ್ದಾರೆ ಎದೆಲ್ಲವೂ ʻಪಬ್ಲಿಕ್‌ ಟಿವಿʼ ರಿಯಾಲಿಟಿ ಚೆಕ್‌ನಲ್ಲಿ ಬಯಲಾಗಿದೆ.

3 ಸಾವಿರಕ್ಕೆ ಆಧಾರ್ ಪಡೆದು ಬೆಂಗಳೂರಲ್ಲಿ ವಾಸ
ಅಕ್ರಮ ವಲಸಿಗರ (Bangladeshi Immigrants) ವಿರುದ್ಧ ರಿಯಾಲಿಟಿ ಚೆಕ್‌ ನಡೆಸಿದ ʻಪಬ್ಲಿಕ್‌ ಟಿವಿʼ ರೋಚಕ ಸಂಗತಿಗಳನ್ನ ಬಯಲಿಗೆಳೆದಿದೆ. ಢಾಕಾ ಬಳಿಯ ಕೂನ್ಲಾ ಗ್ರಾಮದ ವೃದ್ಧ ಕೇವಲ 3 ಸಾವಿರ ರೂಪಾಯಿಗೆ ಆಧಾರ್‌ ಕಾರ್ಡ್‌ ಪಡೆದು ಹೆಂಡತಿ, ಮಕ್ಕಳೊಂದಿಗೆ ವಾಸವಾಗಿರುವುದು ಕಂಡುಬಂದಿದೆ. ಕಳೆದ 15 ವರ್ಷಗಳಿಂದ ಈತ ಬೆಂಗಳೂರಿನಲ್ಲೇ ರಾಜಾರೋಷವಾಗಿ ಜೀವನ ನಡೆಸುತ್ತಿದ್ದಾನೆ. ಎಂ.ಎಸ್ ಪಾಳ್ಯದ ಲಕ್ಷ್ಮಿದೇವಿನಗರದ ವಿಳಾಸಕ್ಕೆ 3 ರೂ.ಗೆ ಆಧಾರ್‌ ಪಡೆದುಕೊಂಡಿರುವ ಈತ ಬಾಂಗ್ಲಾದ ವೋಟರ್‌ ಐಡಿ ಕೂಡ ಹೊಂದಿದ್ದಾನೆ.

ಈ ಬಗ್ಗೆ ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿರುವ ಅಕ್ರಮ ವಲಸಿಗ ಜೋಸಿಂ, ನಮ್ಮದು ಮೂಲತಃ ಢಾಕಾ ಬಳಿಯ ಕೂನ್ಲಾ ಗ್ರಾಮ. ಕಳೆದ 15 ವರ್ಷಗಳಿಂದ ಇಲ್ಲಿ ನೆಲೆಸಿದ್ದೀನಿ, ಮೊದಲು ಮಾರುತಿ ನಗರದಲ್ಲಿದ್ದೆವು, ನಂತರ ವಿಳಾಸ ಬಸಲಿಸಿದ್ದೇವೆ. ನಾನು, ಹೆಂಡತಿ, ಮಕ್ಕಳು ಸೇರಿ 4 ಜನ ಇದ್ದೇವೆ. ಬಾಂಗ್ಲಾದ ವೋಟರ್‌ ಐಡಿ ಇದೆ. ಇಲ್ಲಿನ ಆಧಾರ್‌ ಕಾರ್ಡ್‌ ಇದೆ. ಆಧಾರ್‌ 3,000 ರೂಪಾಯಿ ಕೊಟ್ಟು ಎಂ.ಎಸ್‌ ಪಾಳ್ಯದಲ್ಲಿ ಮಾಡಿಸಿದ್ದು, ಆಧಾರ್‌ ಮಾಡಿಕೊಟ್ಟ ವ್ಯಕ್ತಿ ಈಗ ಇಲ್ಲ ಅಂತ ಹೇಳಿದ್ದಾರೆ.

ಇನ್ನೂ ಅಕ್ರಮ ವಲಸಿಗರ ಶೆಡ್‌ಗಳ ಬಳಿಕ ʻಪಬ್ಲಿಕ್ ಟಿವಿʼ ಕ್ಯಾಮರಾ ಹೋಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ಅಕ್ರಮ ವಾಸಿಗಳನ್ನ ವಶಕ್ಕೆ ಪಡೆದು ಹೊಯ್ಸಳ ವಾಹನದಲ್ಲಿ ಕರೆದೊಯ್ದಿದ್ದಾರೆ.

Share This Article