Kalki 2 – ದೀಪಿಕಾ ಜಾಗಕ್ಕೆ ಆಲಿಯಾ ಭಟ್ ಬಂದ್ರಾ?

Public TV
1 Min Read

ಬಾಲಿವುಡ್ ಬೆಡಗಿಯರಾದ ದೀಪಿಕಾ ಪಡುಕೋಣೆ (Deepika Padukone) ಹಾಗೂ ಆಲಿಯಾ ಭಟ್ (Alia Bhatt) ಇಬ್ಬರೂ ಅಮ್ಮನಾದ ಬಳಿಕವೂ ನಟನೆ ವೃತ್ತಿ ಮುಂದುವರೆಸಿದ್ದಾರೆ. ಇಬ್ಬರೂ ಬೇಡಿಕೆಯನ್ನೂ ಉಳಿಸಿಕೊಂಡಿರುವುದು ವಿಶೇಷ. ಅಂದಹಾಗೆ ಇತ್ತೀಚೆಗಷ್ಟೇ ಅಮ್ಮನಾಗಿರುವ ದೀಪಿಕಾ ಪಡುಕೋಣೆ ಸಂಭಾವನೆ ಹಾಗೂ ಇನ್ನಿತರ ವಿಚಾರಕ್ಕೆ `ಕಲ್ಕಿ 2898 ಎಡಿ’ ಪಾರ್ಟ್ 2 (Kalki 2) ಚಿತ್ರದಿಂದ ಹೊರನಡೆದಿದ್ದರು. ಇದೀಗ ದೀಪಿಕಾ ಆಯ್ಕೆಯಾಗಿದ್ದ ಸುಮತಿ ಪಾತ್ರದ ನಟನೆಗೆ ಆಲಿಯಾ ಭಟ್‍ರನ್ನು ರಿಪ್ಲೇಸ್ಮೆಂಟ್ ಮಾಡುವ ಬಗ್ಗೆ ಸುದ್ದಿ ಕೇಳಿಬರುತ್ತಿದೆ.

ಎರಡನೇ ಭಾಗದಲ್ಲಿ ದೀಪಿಕಾ ಪಡುಕೋಣೆ ಕಂಟಿನ್ಯೂ ಮಾಡಬೇಕಿದ್ದ ತಮ್ಮ ಪಾತ್ರದಿಂದ ಹೊರನಡೆದ ಕಾರಣಕ್ಕೆ ಸಮಾನ ತೂಕದ ನಟಿಯೇ ಅವಶ್ಯಕತೆ ಇರುವ ಕಾರಣಕ್ಕೆ ಬಾಲಿವುಡ್‍ನ ಇನ್ನೋರ್ವ ಖ್ಯಾತ ನಟಿ ಆಲಿಯಾ ಭಟ್‍ರನ್ನು ನಿರ್ದೇಶಕ ನಾಗ್ ಅಶ್ವಿನ್ ಸಂಪರ್ಕಿಸಿದ್ದಾರೆ ಎನ್ನಲಾಗುತ್ತಿದೆ. ಆಲಿಯಾ ಕಡೆಯಿಂದಲೂ ಗ್ರೀನ್ ಸಿಗ್ನಲ್ ಬಂದಿದೆ ಎನ್ನಲಾಗುತ್ತಿದೆ. ಆದರೆ ಚಿತ್ರೀಕರಣ ಶುರುವಾಗದ ಕಾರಣ ಚಿತ್ರತಂಡದಿಂದ ಕಲ್ಕಿ ಪಾರ್ಟ್ 2 ಸಿನಿಮಾ ವಿಚಾರವಾಗಿ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇದನ್ನೂ ಓದಿ: ಥೈಲ್ಯಾಂಡ್‌ನಲ್ಲಿ ಶೂಟಿಂಗ್ ಆಗಿದ್ದ ದರ್ಶನ್ ಸಾಂಗ್ ರಿಲೀಸ್

ಈ ಚಿತ್ರ ಬಹುದೊಡ್ಡ ತಾರಾಗಣವನ್ನು ಹೊಂದಿದ್ದು, ಅಮಿತಾಬ್ ಬಚ್ಚನ್, ಪ್ರಭಾಸ್, ಕಮಲ್ ಹಾಸನ್ ಕೂಡ ನಟಿಸುತ್ತಿದ್ದಾರೆ. ಇದೀಗ ದೀಪಿಕಾ ಬಿಟ್ಟುಹೋಗಿರುವ ಗರ್ಭಿಣಿ ಸುಮತಿ ಪಾತ್ರಕ್ಕೆ ಆಲಿಯಾ ಜೀವ ತುಂಬಲಿದ್ದಾರೆ ಅನ್ನೋದೇ ಹೊಸ ವಿಚಾರ. ಇದನ್ನೂ ಓದಿ: ಕನಕರಾಜನಾದ ನಟ ಅನೂಪ್ ರೇವಣ್ಣ – ಇದು ಸಿಎಂ ಅಭಿಮಾನಿ ಸ್ಟೋರಿ

Share This Article