ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಮದುವೆ ಆದ್ರಾ? ಹುಡುಗ ಯಾರು?

Public TV
1 Min Read

ಸ್ಯಾಂಡಲ್ ವುಡ್ ನ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಮದುವೆ ವಿಚಾರ ಆಗಾಗ್ಗೆ ಸ್ಯಾಂಡಲ್ ವುಡ್ ನಲ್ಲಿ ಗಿರಕಿ ಹೊಡೆಯುತ್ತಲೇ ಇರುತ್ತದೆ. ಹರ್ಷಿಕಾ ಜತೆ ಸದಾ ಸಮಾಜಮುಖಿ ಕೆಲಸಗಳನ್ನು ಮಾಡುವ ನಟ ಭುವನ್ ಜತೆ ಪ್ರೀತಿಸುತ್ತಿದ್ದಾರೆ ಎನ್ನುವ ಗಾಸಿಪ್ ಕೂಡ ಇತ್ತು. ಇವೆಲ್ಲವುಗಳನ್ನೂ ಹರ್ಷಿಕಾ ಅಲ್ಲಗಳೆಯುತ್ತಲೇ ಬಂದಿದ್ದಾರೆ. ಆದರೆ, ಇದೀಗ ಅವರಿಗೆ ಮದುವೆ ಆಗಿದೆಯಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಇದನ್ನೂ ಓದಿ : ಟರ್ಕಿಯಲ್ಲಿ ರಜಾಮಜಾ ಮಾಡುತ್ತಿರೋ ಬ್ಯೂಟಿಫುಲ್‌ ಗರ್ಲ್ ಕಾರುಣ್ಯ ರಾಮ್

ಸಾಮಾನ್ಯವಾಗಿ ಮದುವೆಯಾದವರನ್ನು ‘ಶ್ರೀಮತಿ’ ಎಂದು ಕರೆಯಲಾಗುತ್ತದೆ. ಮದುವೆ ಆಗದೇ ಇರುವ ಹುಡುಗಿಯರನ್ನು ‘ಕುಮಾರಿ’  ಎಂದು ಕರೆಯುವುದು ರೂಢಿ. ಕಾರ್ಯಕ್ರಮವೊಂದರ ಜಾಹೀರಾತಿನಲ್ಲಿ ಹರ್ಷಿಕಾ ಅವರನ್ನು ಶ್ರೀಮತಿ ಹರ್ಷಿಕಾ ಪೂಣಚ್ಚ ಎಂದು ಬರೆಯಲಾಗಿದೆ. ಈ ವಿಷಯವನ್ನು ಟ್ವಿಟರ್ ನಲ್ಲಿ ಟ್ಯಾಗ್ ಮಾಡಿ ಹರ್ಷಿಕಾ ಅವರ ಗಮನಕ್ಕೆ ತರಲಾಗಿದೆ. ಕೂಡಲೇ ಎಚ್ಚೆತ್ತುಕೊಂಡಿರುವ ಹರ್ಷಿಕಾ ‘ಸಚ್ ಬ್ಲಂಡರ್ಸ್’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ : ತಾಳಿಕಟ್ಟಿ ಹೆಂಡತಿಯನ್ನು ಎತ್ತಿಕೊಂಡ ರಣಬೀರ್ ಕಪೂರ್

ಸದ್ಯ ಹರ್ಷಿಕಾ ಅವರು ಭೋಜಪುರಿ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಎರಡು ಭೋಜಪುರಿ ಸಿನಿಮಾದಲ್ಲಿ ನಟಿಸಿ ಬಂದಿದ್ದಾರೆ. ಸಿನಿಮಾಗಳ ನಟನೆಯ ಜತೆ ಜತೆಗೆ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅದರಲ್ಲೂ ಕೋವಿಡ್ ಸಂದರ್ಭದಲ್ಲಿ ಅವರು ಮಾಡಿದ ಕೆಲಸವನ್ನು ಯಾರೂ ಮರೆಯುವಂತಿಲ್ಲ. ಇದನ್ನೂ ಓದಿ: ‘BOSS’ ಪಟ್ಟ ಅಲಂಕರಿಸಿದ ಯಶ್ : ಟ್ವಿಟರ್ ಟ್ರೆಂಡಿಂಗ್ ನಲ್ಲಿ #YASHBOSS

ಹರ್ಷಿಕಾ ಕನ್ನಡದಲ್ಲಿ ಮಾತ್ರವಲ್ಲ, ಮಲಯಾಳಂ, ಕೊಂಕಣಿ, ಕೊಡವ,  ಭೋಜಪುರಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಸಾಕಷ್ಟು ಜಾಹೀರಾತುಗಳಿಗೆ ರೂಪದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ. ಅಲ್ಲದೇ, ಸದ್ಯ ಕನ್ನಡದಲ್ಲಿ ಒಂದಷ್ಟು ಕಥೆಗಳನ್ನು ಕೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *