ಲಾರಿ ಚಾಲಕನ ಯಡವಟ್ಟು – ರೈಲ್ವೆ ಹಳಿ ಮೇಲೆ ಬಿದ್ದ ಕಬ್ಬಿಣದ ಪ್ಲೇಟ್, ತಪ್ಪಿದ ಭಾರೀ ಅನಾಹುತ

Public TV
1 Min Read

ಬಳ್ಳಾರಿ: ಅತಿ ವೇಗವಾಗಿ ಬಂದು ಟರ್ನ್ ಮಾಡಿದ ಲಾರಿ ಚಾಲಕನ ಯಡವಟ್ಟನಿಂದಾಗಿ ಲಾರಿಯಲ್ಲಿದ್ದ ಕಬ್ಬಿಣದ ಪ್ಲೇಟ್‌ಗಳು ರೈಲ್ವೆ ಹಳಿ (Railway Track) ಮೇಲೆ ಬಿದ್ದ ಘಟನೆ ಬಳ್ಳಾರಿಯ (Bellary) ಹೊರ ವಲಯದ ಬೆಂಗಳೂರು ಮಾರ್ಗದಲ್ಲಿ ನಡೆದಿದೆ.

ಹಲಕುಂದಿ (Halkundi) ಗ್ರಾಮದ ಬಳಿ ಇರುವ ಐದನೇ ಗೇಟ್‌ನಲ್ಲಿ ನಡೆದ ಅವಘಡದಿಂದ ಬಹುದೊಡ್ಡ ಅನಾಹುತವೊಂದು ತಪ್ಪಿದೆ. 20ಕ್ಕೂ ಹೆಚ್ಚು ಕಬ್ಬಿಣದ ದೊಡ್ಡ ಪ್ಲೇಟ್‌ಗಳು ಲಾರಿಯಿಂದ ನೇರವಾಗಿ ರೈಲ್ವೆ ಹಳಿ ಮೇಲೆ ಬಿದ್ದಿವೆ. ಇದನ್ನೂ ಓದಿ: ಬೆಳಗಾವಿ ಹೆಚ್ಚುವರಿ ಎಸ್‌ಪಿ ವಿರುದ್ಧ ಸಿಎಂ ಗರಂ – ವೇದಿಕೆಯಲ್ಲೇ ತರಾಟೆ

ಸ್ಟೀಲ್ ಕಂಪನಿಯೊಂದರಿಂದ ಬೆಂಗಳೂರು ಕಡೆಗೆ ಕಬ್ಬಿಣದ ಪ್ಲೇಟ್‌ಗಳನ್ನ ಹೊತ್ತೊಯ್ಯುತ್ತಿದ್ದ ಲಾರಿಯು, ಕಿರಿದಾದ ಸರ್ವಿಸ್ ರಸ್ತೆಯಲ್ಲಿ 80 ಕಿ.ಮೀ ವೇಗದಲ್ಲಿ ಬಂದು ಟರ್ನ್ ಮಾಡಿದ್ದ ಪರಿಣಾಮ ಅವಾಂತರ ಸೃಷ್ಟಯಾಗಿದೆ. ಕೂಡಲೇ ಎಚ್ಚೆತ್ತ ಸ್ಥಳೀಯರು ರೈಲ್ವೆ ಹಳಿ ಮೇಲೆ ಬಿದ್ದ ಕಬ್ಬಿಣದ ಪ್ಲೇಟ್‌ಗಳ ತೆರವುಗೊಳಿಸಿದ್ದಾರೆ. ಒಂದು ವೇಳೆ ಅದೇ ಸಮಯದಲ್ಲಿ ರೈಲು ಬಂದಿದ್ದರೆ ದೊಡ್ಡ ಅನಾಹುತ ನಡೆಯುತ್ತಿತ್ತು.

Share This Article