IRCTC Update: 445 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ

Public TV
1 Min Read

ನವದೆಹಲಿ: ರೈಲ್ವೆ ಕಾರ್ಯಾಚರಣೆ ಮತ್ತು ನಿರ್ವಹಣೆ ಕಾರಣದಿಂದಾಗಿ ಭಾರತೀಯ ರೈಲ್ವೆ ಇಂದು 445 ರೈಲುಗಳನ್ನು ರದ್ದುಗೊಳಿಸಿದೆ.

ಮಾರ್ಚ್ 18 ಹೊರಡಬೇಕಿದ್ದ 424 ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಮತ್ತು 21 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ಶುಕ್ರವಾರ ಹೊರಡಬೇಕಿದ್ದ ಏಳು ರೈಲುಗಳನ್ನು ಬೇರೆಡೆಗೆ ತಿರುಗಿಸಲಾಗಿದೆ ಮತ್ತು ಒಂದು ರೈಲಿನ ವೇಳಾಪಟ್ಟಿಯನ್ನು ಮರುಹೊಂದಿಸಲಾಗಿದೆ ಎಂದು ರೈಲ್ವೆ ಪ್ರಕಟಿಸಿದೆ. ಇದನ್ನೂ ಓದಿ: ಜೋಕರ್ ಹೋಲಿಕೆಗೆ ದಿ ಕಾಶ್ಮೀರ್ ಫೈಲ್ಸ್ ನಟ ಅನುಪಮ್ ಖೇರ್ ಮೆಚ್ಚುಗೆ

ದೂರದ ಊರುಗಳಿಗೆ ರೈಲಿನಲ್ಲಿ ಪ್ರಯಾಣಿಸಲು ಯೋಜಿಸುವ ಪ್ರಯಾಣಿಕರು  enquiry.indianrail.gov.in/mntes ಅಥವಾ NTES ಅಪ್ಲಿಕೇಶನ್ ಪರಿಶೀಲಿಸುವ ಮೂಲಕ ರೈಲುಗಳ ಆಗಮನ ಮತ್ತು ನಿರ್ಗಮನದ ವಿವರಗಳನ್ನು ಪಡೆಯುವಂತೆ ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಗುಜರಾತ್ ಶಾಲಾ, ಕಾಲೇಜ್‍ಗಳಲ್ಲಿ ಭಗವದ್ಗೀತೆ ಕಡ್ಡಾಯ

ಈ ಮುನ್ನ ಹೋಳಿ ವಿಶೇಷ ಮುಂಬೈ ಮತ್ತು ಬಲ್ಲಿಯಾ ನಡುವೆ ರೈಲುಗಳು 22 ಟ್ರಿಪ್‍ಗಳನ್ನು ನಡೆಸಲಿದೆ ಎಂದು ಕೇಂದ್ರ ರೈಲ್ವೆ ಹೇಳಿತ್ತು. ಮುಂಬೈ ಮತ್ತು ಮೌ/ಕರ್ಮಾಲಿ/ದಾನಪುರ್ ಮತ್ತು ಪುಣೆ ಮತ್ತು ಕರ್ಮಾಲಿ ನಡುವೆ ಹೋಳಿ ಹಬ್ಬದ ಸಮಯದಲ್ಲಿ ಹೆಚ್ಚುವರಿ ಪ್ರಯಾಣಿಕರು ತೆರಳಲು ಸೆಂಟ್ರಲ್ ರೈಲ್ವೆಯು 14 ಹೆಚ್ಚುವರಿ ಹೋಳಿ ವಿಶೇಷ ರೈಲುಗಳನ್ನು ಸಂಚರಿಸಲಿದೆ ಎಂದು ತಿಳಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *