ಬದಲಾಯ್ತು ರೈಲ್ವೇ ವೆಬ್‍ಸೈಟ್: ಈಗ ಸುಲಭವಾಗಿ ಟಿಕೆಟ್ ಬುಕ್ ಮಾಡಿ-ಹೊಸ ವಿಶೇಷತೆಗಳು ಏನು?

Public TV
1 Min Read

ನವದೆಹಲಿ: ಭಾರತೀಯ ರೈಲ್ವೇಯ ಐಆರ್ ಸಿಟಿಸಿ ವೆಬ್‍ಸೈಟ್ ಅಪ್‍ಡೇಟ್ ಆಗಿದ್ದು, ಟಿಕೆಟ್ ಬುಕ್ಕಿಂಗ್ ಸುಲಭವಾಗಲಿದೆ.

ಪರಿಷ್ಕೃತಗೊಂಡ ವೆಬ್‍ಸೈಟ್ ನಲ್ಲಿ ಯಾವುದೇ ರೀತಿ ಅಡೆ ತಡೆಗಳಿಲ್ಲದೆ ಬೇಗ ಟಿಕೆಟ್ ಅನ್ನು ಕಾಯ್ದಿರಿಸಬಹುದಾಗಿದೆ. ಹೊಸ ವೆಬ್‍ಸೈಟ್ ಎಲ್ಲಾ ಫ್ಲಾಟ್‍ಫಾರಂ ಗಳಲ್ಲೂ ಕೆಲಸ ಮಾಡಲಿದೆ. ಉದಾಹರಣೆಗೆ ಮೊಬೈಲ್, ಡೆಸ್ಕ್ ಟಾಪ್, ಲ್ಯಾಪ್ ಟಾಪ್ ಮತ್ತು ಟ್ಯಾಬ್ಲೆಟ್ ಗಳಲ್ಲಿ ಸುಲಭವಾಗಿ ಕೆಲಸ ಮಾಡಬಹುದು.

ಗ್ರಾಹಕರು ರೈಲುಗಳ ಇಲ್ಲ ಸೀಟ್ ಗಳ ಲಭ್ಯತೆ ತಿಳಿಯಲು, ವಿಚಾರಣೆ ಮಾಡಲು ವೆಬ್ ಸೈಟ್ ಗೆ ಲಾಗ್ ಇನ್ ಆಗಬೇಕಾದ ಅವಶ್ಯಕತೆ ಇಲ್ಲ. ರೈಲು ಗಳ ಹೊರಡುವ, ಬರುವ ಸಮಯ, ದಿನಾಂಕ, ಕ್ಲಾಸ್, ಕೋಟಾ ಗಳ ಆಧಾರದಲ್ಲಿ ರೈಲು, ಸೀಟ್ ಗಳ ಲಭ್ಯತೆ ತಿಳಿಯಬಹುದಾಗಿದೆ.

ವೇಟಿಂಗ್ ಲಿಸ್ಟ್ ನಲ್ಲಿರುವವರಿಗೆ ಧೃಢೀಕರಣದ ಸಾಧ್ಯತೆಗಳನ್ನು ತಿಳಿಸುವ ವ್ಯವಸ್ಥೆ ಇದೆ. ಗ್ರಾಹಕರು ಸೀಟ್ ಕ್ಯಾನ್ಸಲ್ ಮಾಡಲು, ಟಿಕೆಟ್ ಪ್ರಿಂಟ್ ಮಾಡಲು, ಎಸ್‍ಎಮ್‍ಎಸ್ ಕಳುಹಿಸಿಕೊಳ್ಳಲು ಆಯ್ಕೆ ಕಲ್ಪಿಸಲಾಗಿದೆ.

ಅಷ್ಟೇ ಅಲ್ಲದೇ ಬುಕ್ ಮಾಡಿದ ಸಮಯದಲ್ಲಿ ಪ್ರಯಾಣ ಮಾಡಲು ಸಾಧ್ಯವಿಲ್ಲದಿದ್ದರೆ ಆ ಟಿಕೆಟ್ ದರದಲ್ಲಿ ಬೇರೆ ಸಮಯದಲ್ಲಿ ಆ ಸ್ಥಳಕ್ಕೆ ಹೋಗುವ ರೈಲಿನಲ್ಲಿ ಲಭ್ಯತೆ ಇದ್ದಲ್ಲಿ ಟಿಕೆಟ್ ಬುಕ್ ಮಾಡಲು ಅವಕಾಶವಿದೆ.

ಪ್ರತಿ ಗ್ರಾಹಕನಿಗೂ ಪ್ರತ್ಯೇಕ ಕಾರ್ಡ್ ಇದ್ದು ಗ್ರಾಹಕ ಸಂಬಂಧಿ ಮಾಹಿತಿಯನ್ನು ಕಲೆಹಾಕಲಾಗಿರುತ್ತದೆ. ಕಾಯ್ದಿರಿಸುವ ವೇಳೆ ಈ ಮಾಹಿತಿಯನ್ನು ಬಳಸುವುದರಿಂದ ಕಾಯ್ದಿರಿಸುವ ಸಮಯ ಕೊಂಚ ಕಡಿಮೆಯಾಗಲಿದೆ. ಹಣ ಪಾವತಿಸಲು 6 ಆದ್ಯತಾ ಬ್ಯಾಂಕ್ ಗಳನ್ನು ನಮೂದಿಸಬಹುದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *