ಅಮೆರಿಕದ ಮತ್ತೊಂದು F-16 ಜೆಟ್‌ ಹೊಡೆದುರುಳಿಸಿದ ಇರಾನ್‌; ವಿಶ್ವವಿದ್ಯಾಲಯಗಳನ್ನ ಉಡಾಯಿಸೋದಾಗಿ ಬೆದರಿಕೆ

1 Min Read

ಟೆಹ್ರಾನ್‌: ಇಸ್ರೇಲ್ – ಅಮೆರಿಕ Vs ಇರಾನ್ ನಡುವಿನ ಯುದ್ಧ 30ನೇ ದಿನವೂ ಮುಂದುವರಿದಿದೆ. ಈ ಮಧ್ಯೆ ಅಮೆರಿಕದ (America) ಮತ್ತೊಂದು ಎಫ್-16 ಫೈಟರ್ ಜೆಟ್ (F16 Fighter Jet) ಇರಾನ್ ಹೊಡೆದುರುಳಿಸಿದೆ.

ದಕ್ಷಿಣ ಫರ್ಸ್‌ ಪ್ರಾಂತ್ಯದಲ್ಲಿ ಐಆರ್‌ಜಿಸಿ (IRGC) ಅಮೆರಿಕ ಶಕ್ತಿಶಾಲಿ ಯುದ್ಧವಿಮಾನವಾದ ಎಫ್-16 ಅನ್ನು ಹೊಡೆದುರಳಿಸಿದೆ. ಅಮೆರಿಕದ ಸೇನಾನೆಲೆಗಳ ಬಳಿಕ ಇರಾನ್ ಈಗ ವಿವಿಗಳ ಟಾರ್ಗೆಟ್ ಮಾಡಿದೆ. ಕೊಲ್ಲಿರಾಷ್ಟ್ರಗಳಲ್ಲಿ ಅಮೆರಿಕದ ವಿವಿಗಳನ್ನು ಉಡಾಯಿಸೋದಾಗಿ ಇರಾನ್ (Iran) ಬೆದರಿಕೆ ಹಾಕಿದೆ. ಇದನ್ನೂ ಓದಿ: ಹಾರ್ಮುಜ್‌ ದಾಟಲು ಗ್ರೀನ್‌ ಸಿಗ್ನಲ್‌ – ಭಾರತಕ್ಕೆ ಬಂತು LPG ಟ್ಯಾಂಕರ್‌, ಪೈನ್‌ ಗ್ಯಾಸ್‌ ಹೊತ್ತ ಮತ್ತೆರಡು ಹಡಗು

ಇರಾನ್‌ಗೆ ಹೌತಿಗಳ ಬೆಂಬಲ
ಇರಾಕ್‌ನ ಎರ್ಬಿಲ್ ಏರ್‌ಪೋರ್ಟ್ ಮೇಲೂ ಇರಾನ್ ಡ್ರೋನ್ ದಾಳಿ ನಡೆಸಿದೆ. ಇರಾನ್‌ಗೆ ಹೆಜ್ಬೊಲ್ಲಾ ಬಳಿಕ ಹೌತಿ ಉಗ್ರರ ಬಲ ಸಿಕ್ಕಿದೆ. ಇರಾನ್ ಬೆಂಬಲಿಸಿ ಇಸ್ರೇಲ್ ಮೇಲೆ ಹೌತಿ ಅಟ್ಯಾಕ್ ಮಾಡಿದೆ. ಲೆಬನಾನ್‌ನಲ್ಲಿ ಹೆಜ್ಬೊಲ್ಲಾ, ಯೆಮೆನ್‌ನಲ್ಲಿ ಹೌತಿ ದಾಳಿ ನಡೆಸಿದೆ. ಇದನ್ನೂ ಓದಿ: 80 ಲಕ್ಷ ಜನರಿಂದ ʻNo Kingsʼ ಚಳವಳಿ – ಅಮೆರಿಕದಲ್ಲಿ ಟ್ರಂಪ್‌ ವಿರುದ್ಧವೇ ಭುಗಿಲೆದ್ದ ಆಕ್ರೋಶ

ಇಸ್ರೇಲ್‌ನ ಏರ್‌ಡಿಫೆನ್ಸ್ ಗುರಿಯಾಗಿಸಿ ಹೌತಿ ದಾಳಿ ನಡೆಸ್ತಿದೆ. ಇಸ್ರೇಲ್ ರಾಜಧಾನಿ ಟೆಲ್‌ಅವಿವ್ ಅಕ್ಷರಶಃ ಸ್ಮಶಾನದಂಥಾಗಿದೆ. ಕೊಲ್ಲಿ ಯುದ್ಧಕ್ಕೆ ಯೆಮನ್‌ನ ಹೌತಿ ಉಗ್ರರು ಪ್ರವೇಶಿಸಿದ ಬೆನ್ನಲ್ಲೇ ಮತ್ತಷ್ಟು ಹಡಗುಗಳಿಗೆ ಕುತ್ತು ಬರುವ ಸಾಧ್ಯತೆಯಿದೆ. ಕೆಂಪು ಸಮುದ್ರದಲ್ಲಿರುವ ಮಂಡೆಬ್ ಜಲಸಂಧಿ, ಸೂಯೆಲ್ ಕಾಲುವೆ ಬಂದ್ ಆತಂಕ ಎದುರಾಗಿದೆ.

Share This Article