ಶ್ರೀಲಂಕಾ ಬಳಿ ಅಮೆರಿಕದ ಸಬ್‌ಮೆರಿನ್ ದಾಳಿ; ಇರಾನ್‌ ನೌಕೆ ಮುಳುಗಡೆ – 148 ಮಂದಿ ನಾಪತ್ತೆ

0 Min Read

ಕೊಲಂಬೊ: ಶ್ರೀಲಂಕಾದ (Sri Lanka) ಬಳಿ ಅಮೆರಿಕದ ಜಲಾಂತರ್ಗಾಮಿ ದಾಳಿಯಿಂದ ಇರಾನ್‌ನ (Iran) ಯುದ್ಧನೌಕೆ ಐರಿಸ್‌ ದೇನಾ (IRIS Dena) ಮುಳುಗಡೆಯಾಗಿದೆ.

- Advertisement -

ನೌಕೆ ಮುಳುಗಿದ ಪರಿಣಾಮ ಕನಿಷ್ಠ 148 ನಾವಿಕರು ನಾಪತ್ತೆಯಾಗಿದ್ದಾರೆ. 78 ಮಂದಿ ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡ 32 ಸಿಬ್ಬಂದಿಯನ್ನು ಶ್ರೀಲಂಕಾದ ಅಧಿಕಾರಿಗಳು ರಕ್ಷಿಸಿದ್ದಾರೆ. ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ.

- Advertisement -

- Advertisement -

ಭಾರತದ ವಿಶಾಖಪಟ್ಟಣದಲ್ಲಿ ಆಯೋಜಿಸಿದ್ದ ‘ಅಂತರರಾಷ್ಟ್ರೀಯ ಫ್ಲೀಟ್ ರಿವ್ಯೂ / ಮಿಲನ್ 2026’ ಅಭ್ಯಾಸದಲ್ಲಿ ನೌಕೆ ಭಾಗವಹಿಸಿತ್ತು. ಬಳಿಕ ಇರಾನ್‌ಗೆ ವಾಪಸ್‌ ಆಗುತ್ತಿದ್ದಾಗ ಮುಳುಗಡೆಯಾಗಿದೆ. ಡ್ರೋನ್‌ ಮೂಲಕ ರಾಸ್ ತನುರಾ ದಾಳಿ ನಡೆಸಲಾಗಿದ್ದು, ಯಾವುದೇ ಹಾನಿಯಾಗಿಲ್ಲ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ.

- Advertisement -

Share This Article