ಡಾಲರ್‌ ವಿರುದ್ಧ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ

1 Min Read

ಮುಂಬೈ: ಭಾರತೀಯ ಆರ್ಥಿಕತೆಗೆ (Indian Economy) ಬಹುದೊಡ್ಡ ಆಘಾತ ಎದುರಾಗಿದ್ದು ಅಮೆರಿಕದ ಡಾಲರ್ (US Dollar) ಎದುರು ರೂಪಾಯಿ ಮೌಲ್ಯ (Rupee Value) ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇಂದು ಮಾರುಕಟ್ಟೆ ವಹಿವಾಟು ಆರಂಭವಾಗುತ್ತಿದ್ದಂತೆ ಒಂದೇ ದಿನಕುಸಿತ ಕಂಡು ಪ್ರತಿ ಡಾಲರ್‌ಗೆ 94.73 ರೂ.ಗಳ ಕನಿಷ್ಠ ಮಟ್ಟವನ್ನು ತಲುಪಿದೆ.

ಬುಧವಾರ 94.23 ರಷ್ಟಿದ್ದ ರೂಪಾಯಿ, ಏಕಾಏಕಿ ಪಾತಾಳಕ್ಕೆ ಕುಸಿದಿರುವುದು ಹೂಡಿಕೆದಾರರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಭೀಕರ ಯುದ್ಧವೇ ನಮ್ಮ ರೂಪಾಯಿಯ ಪಾಲಿಗೆ ಬಹುದೊಡ್ಡ ಶತ್ರುವಾಗಿದೆ. ಇದನ್ನೂ ಓದಿ: ಗುಜರಾತ್‌ಗೆ ಬಂತು 47,600 ಮೆಟ್ರಿಕ್ ಟನ್ LPG ಹೊತ್ತ `ಜಗ್ ವಸಂತ್’ ಹಡಗು

 

ಗಲ್ಫ್ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು ಎಂಬ ಭಯ ಜಾಗತಿಕ ಮಾರುಕಟ್ಟೆಯನ್ನು ನಡುಗಿಸುತ್ತಿದೆ. ಭಾರತವು ಅತಿಹೆಚ್ಚು ತೈಲ ಆಮದು ಮಾಡಿಕೊಳ್ಳುವುದರಿಂದ, ತೈಲ ಬೆಲೆ ಏರಿಕೆಯಾದಾಗ ನಾವು ಹೆಚ್ಚಿನ ಡಾಲರ್‌ಗಳನ್ನು ಪಾವತಿಸಬೇಕಾಗುತ್ತದೆ. ಇದರಿಂದ ನಮ್ಮ ವಿದೇಶಿ ವಿನಿಮಯ ಮೀಸಲು ಕರಗುತ್ತಿದ್ದು, ರೂಪಾಯಿ ದುರ್ಬಲಗೊಳ್ಳುತ್ತಿದೆ.

ಏರಿಕೆ ಕಂಡಿದ್ದ ಷೇರು ಮಾರುಕಟ್ಟೆ ಕೂಡ ಕುಸಿದಿದೆ. ಸೆನ್ಸೆಕ್ಸ್ 1690.23(-2.25%) ಅಂಕ ಕುಸಿತ ಕಂಡಿದ್ದರೆ, ನಿಫ್ಟಿ 486.85(-2.09%) ಅಂಕ ಪತನವಾಗಿದೆ.

Share This Article