ಇಂಡಕ್ಷನ್‌ ಸ್ಟವ್‌ ಖರೀದಿ ಮುನ್ನ ಈ ಅಂಶಗಳನ್ನು ತಿಳಿದುಕೊಳ್ಳಿ

1 Min Read

ಲ್‌ಪಿಜಿ ಗ್ಯಾಸ್‌ (LPG Gas) ಸಮಸ್ಯೆಯಾಗಿ ಹೊಸ ಇಂಡಕ್ಷನ್ ಸ್ಟವ್ (Induction Stove) ಖರೀದಿಸಬೇಕೆಂದು ಯೋಚಿಸುತ್ತಿದ್ದೀರಾ? ಹಾಗಾದರೆ ನೀವು ಕೆಲವೊಂದು ಅಂಶಗಳನ್ನು ತಿಳಿದುಕೊಳ್ಳುವುದು ಉತ್ತಮ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಇಂಡಕ್ಷನ್ ಸ್ಟವ್ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ಆನ್‌ಲೈನ್‌ನಲ್ಲೂ ಹಲವರು ಕಂಪನಿಗಳು ಪ್ರಚಾರ ನೀಡುತ್ತಿವೆ. ಬೆಲೆ ಕಡಿಮೆ ಇದೆ ಎನ್ನುವ ಕಾರಣಕ್ಕೆ ಇಂಡಕ್ಷನ್ ಸ್ಟವ್ ಖರೀಸಬೇಡಿ.  ಇದನ್ನೂ ಓದಿ: ಶೀಘ್ರವೇ ಸೌದಿ, ಯುಎಇ ಸೇರಿ 5 ದೇಶಗಳ 8 ದೊಡ್ಡ ಸೇತುವೆಗಳ ಮೇಲೆ ದಾಳಿ – ಇರಾನ್‌ನಿಂದ ಹಿಟ್‌ ಲಿಸ್ಟ್‌ ರಿಲೀಸ್‌

ಇಂಡಕ್ಷನ್‌ ಸ್ಟವ್‌ ಖರೀದಿ ಸಂಬಂಧ ಬೆಸ್ಕಾಂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಪ್ರಕಟಿಸಿ ಸಲಹೆ ನೀಡಿದೆ. ಈ ಸಲಹೆಯನ್ನು ಇಲ್ಲಿ ನೀಡಲಾಗಿದೆ.

ಐಎಸ್‌ಐ ಪ್ರಮಾಣಿತ ಹಾಗೂ ಉತ್ತಮ ವಿದ್ಯುತ್ ದಕ್ಷತೆಯುಳ್ಳ (3 ಸ್ಟಾರ್ ಅಥವಾ ಹೆಚ್ಚಿನ ರೇಟಿಂಗ್) ಇಂಡಕ್ಷನ್ ಸ್ಟವ್ ಖರೀದಿಸಿ. ಇಂಡಕ್ಷನ್ ಸ್ಟವ್ ಬಳಸಲು ಪ್ರತ್ಯೇಕ (15A ಅಥವಾ ಹೆಚ್ಚಿನ ಲೋಡ್) ಸಾಕೆಟ್ ಅಳವಡಿಸಿ. ಇದನ್ನೂ ಓದಿ: Electric Car Market| ಫಸ್ಟ್‌ ಟೈಂ ಎಂಜಿ ಹಿಂದಿಕ್ಕಿದ ಮಹೀಂದ್ರಾ – ಟಾಟಾ ಮೋಟಾರ್ಸ್‌ಗೆ ಅಗ್ರಸ್ಥಾನ

ಮನೆಯ ವೈರಿಂಗ್ ದೋಷಪೂರಿತವಾಗಿದ್ದಲ್ಲಿ ಅಥವಾ ಸಮರ್ಪಕ ಅರ್ಥಿಂಗ್ ವ್ಯವಸ್ಥೆ ಇಲ್ಲದಿದ್ದಲ್ಲಿ, ಇಂಡಕ್ಷನ್ ಸ್ಟವ್ ಬಳಸದಿರಿ. ಆಟೋಮ್ಯಾಟಿಕ್ ಆಫ್ ಹಾಗೂ ಚೈಲ್ಡ್ ಲಾಕ್ ಸೌಲಭ್ಯ ಮತ್ತು 3-ಪಿನ್ ಪ್ಲಗ್ ಇರುವ ಇಂಡಕ್ಷನ್ ಸ್ಟವ್‌ಗಳನ್ನೇ ಖರೀದಿಸಿ.

Share This Article