ಇರಾನ್‌ ಜೊತೆ ಕದನ ವಿರಾಮ ಇಲ್ಲ: ಡೊನಾಲ್ಡ್‌ ಟ್ರಂಪ್‌

1 Min Read

– ಅಮೆರಿಕವಿಲ್ಲದ NATO ಒಕ್ಕೂಟ ‘ಪೇಪರ್‌ ಹುಲಿ’ ಎಂದ ಯುಎಸ್‌ ಅಧ್ಯಕ್ಷ

ವಾಷಿಂಗ್ಟನ್‌: ಇರಾನ್‌ (Iran) ಜೊತೆ ಕದನ ವಿರಾಮ ಮಾಡಿಕೊಳ್ಳಲು ಬಯಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ತಿಳಿಸಿದ್ದಾರೆ.

ಇರಾನ್ ಮೇಲಿನ ತನ್ನ ಯುದ್ಧಕ್ಕೆ ಸರಿಯಾದ ಬೆಂಬಲ ಸಿಗದಿದ್ದಕ್ಕೆ NATO ಮಿತ್ರರಾಷ್ಟ್ರಗಳನ್ನು ಹೇಡಿಗಳು ಎಂದು ಟ್ರಂಪ್ ಕರೆದಿದ್ದಾರೆ. ಅಮೆರಿಕವಿಲ್ಲದ ಪಾಶ್ಚಿಮಾತ್ಯ ಮಿಲಿಟರಿ ಮೈತ್ರಿಕೂಟ ‘ಪೇಪರ್‌ ಹುಲಿ’ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಹಾರ್ಮುಜ್‌ ಜಲಸಂಧಿ ಬಳಿ ರಾಂಚಿ ವ್ಯಕ್ತಿ ಸಾವು – ಮೃತದೇಹ ತರಲು ಸಹಾಯ ಕೋರಿದ ಕುಟುಂಬ

ಅಮೆರಿಕ ತನ್ನ ಗುರಿ ಪೂರೈಸಲು ಬಹಳ ಸನಿಹದಲ್ಲಿದೆ. ಹೀಗಾಗಿ, ಮಧ್ಯಪ್ರಾಚ್ಯದಲ್ಲಿ ನಮ್ಮ ಮಿಲಿಟರಿ ಕಾರ್ಯಾಚರಣೆಯನ್ನು ಕೊನೆಗೊಳಿಸಲು ಪರಿಗಣಿಸುತ್ತಿದ್ದೇವೆ ಎಂದು ಟ್ರಂಪ್‌ ಮಾತನಾಡಿದ್ದಾರೆ.

ಇರಾನ್‌ ತನ್ನ ಶತ್ರುಗಳಿಗೆ ತಲೆ ತಿರುಗುವಂತಹ ಹೊಡೆತ ಕೊಟ್ಟಿದೆ. ನಮ್ಮ ದೇಶದ ಮೇಲೆ ಇಸ್ರೇಲ್‌-ಅಮೆರಿಕ ದಾಳಿ ತಪ್ಪು ಲೆಕ್ಕಾಚಾರವಾಗಿ ಎಂದು ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಹೇಳಿಕೆ ನೀಡಿದ್ದಾರೆ.

ಇರಾನ್ ವಿರುದ್ಧದ ಯುದ್ಧವನ್ನು ಉಲ್ಲೇಖಿಸಿ ಸ್ವಿಟ್ಜರ್ಲೆಂಡ್ ಅಮೆರಿಕಕ್ಕೆ ಶಸ್ತ್ರಾಸ್ತ್ರ ರಫ್ತು ನಿಲ್ಲಿಸಿರುವುದರಿಂದ ಎರಡು ಯುದ್ಧ ವಿಮಾನಗಳನ್ನು ಇಳಿಸುವ ಅಮೆರಿಕದ ಮನವಿಯನ್ನು ಶ್ರೀಲಂಕಾ ನಿರಾಕರಿಸಿದೆ. ಇದನ್ನೂ ಓದಿ: ವಿಶ್ವದ ಅತಿ ದೊಡ್ಡ LNG ಘಟಕ ದುರಸ್ತಿಗೆ 5 ವರ್ಷ ಬೇಕು!

Share This Article