ಇರಾನ್‌ ಡೆಡ್‌ಲೈನ್‌| ಅಮೆರಿಕದ ಭಾರತೀಯ ರಾಯಭಾರಿಯನ್ನು ಶ್ವೇತಭವನಕ್ಕೆ ಆಹ್ವಾನಿಸಿದ ಟ್ರಂಪ್‌

2 Min Read

ವಾಷಿಂಗ್ಟನ್‌: ಕದನ ವಿರಾಮಕ್ಕೆ ಸಂಬಂಧಿಸಿದಂತೆ ಇರಾನ್‌ಗೆ (Iran) ನೀಡಿದ ಕೊನೆಯ ಡೆಡ್‌ಲೈನ್‌ (Deadline) ಮುಗಿಯಲು ಕೆಲವೇ ಗಂಟೆಗಳಿರುವಾಗ ಅಮೆರಿಕದ ಭಾರತೀಯ ರಾಯಭಾರಿಯನ್ನು ಟ್ರಂಪ್‌ (Donald Trump) ಶ್ವೇತಭವನಕ್ಕೆ ಆಹ್ವಾನಿಸಿದ್ದು ಭಾರೀ ಕುತೂಹಲ ಮೂಡಿಸಿದೆ.

ಹೌದು ಹಾರ್ಮುಜ್ ಜಲಸಂಧಿಯನ್ನು (Strait of Hormuz) ಮುಕ್ತಗೊಳಿಸಬೇಕು ಅಥವಾ ಒಪ್ಪಂದಕ್ಕೆ ಸಹಿ ಹಾಕಲು ಡೊನಾಲ್ಡ್‌ ಟ್ರಂಪ್ ಇರಾನ್‌ಗೆ ಅಮೆರಿಕ ಕಾಲಮಾನ ಮಂಗಳವಾರ ರಾತ್ರಿ 8 ಗಂಟೆ(ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ 6:30) ಡೆಡ್‌ಲೈನ್‌ ನೀಡಿದ್ದಾರೆ. ಈ ಗಡುವು ಮೀರಿದರೆ ಇರಾನ್‌ನ ವಿದ್ಯುತ್ ಸ್ಥಾವರ ಮತ್ತು ಸೇತುವೆಗಳ ಮೇಲೆ ದಾಳಿ ನಡೆಸುವುದಾಗಿ ಎಚ್ಚರಿಸಿದ್ದಾರೆ

ಈ ಡೆಡ್‌ಲೈನ್‌ಗೂ ಮುನ್ನ ಅಂದರೆ ಮಂಗಳವಾರ ರಾತ್ರಿ 7 ಗಂಟೆಗೆ ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿರುವ ಸರ್ಜಿಯೋ ಗೋರ್ (Sergio Gor) ಅವರನ್ನು ಶ್ವೇತಭವನದಲ್ಲಿ (White House) ವಿಶೇಷ ಭೋಜನಕೂಟಕ್ಕೆ (Closed Door Dinner) ಟ್ರಂಪ್‌ ಆಹ್ವಾನಿಸಿದ್ದಾರೆ. ಇರಾನಿಗೆ ನೀಡಿದ ಡೆಡ್‌ಲೈನ್‌ ಸಮಯದಲ್ಲೇ ಈ ಮಹತ್ವದ ಮಾತುಕತೆ ನಡೆಯುತ್ತಿರುವುದು ಭಾರತದ ಮಧ್ಯಸ್ಥಿಕೆಯ ಬಗ್ಗೆ ಊಹಾಪೋಹದ ಸುದ್ದಿಗಳಿಗೆ ಕಾರಣವಾಗಿದೆ. ಇದನ್ನೂ ಓದಿ: ಇರಾನ್‌ನ ಯುರೇನಿಯಂ ಮೇಲೆ ಟ್ರಂಪ್‌ ಕಣ್ಣಿಟ್ಟಿದ್ದೇಕೆ? – 32 ವರ್ಷಗಳ ಹಿಂದಿನ ʻಸಫೈರ್ʼ ಸೀಕ್ರೆಟ್ ಆಪರೇಷನ್ ರಿಪೀಟ್ ಆಗುತ್ತಾ?

ಈ ಹಿಂದೆ ಇರಾನ್ ರಾಯಭಾರಿ ಭಾರತದ ರಾಜತಾಂತ್ರಿಕತೆಯನ್ನು ಶ್ಲಾಘಿಸಿದ್ದು, ಈ ಸಂಘರ್ಷವನ್ನು ತಡೆಯಲು ಭಾರತ ಮಹತ್ವದ ಪಾತ್ರ ವಹಿಸಬಹುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಅಮೆರಿಕದ 45 ದಿನಗಳ ಕದನ ವಿರಾಮದ ಪ್ರಸ್ತಾವನೆಗಳ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಇರಾನ್ ಇದನ್ನು ತಿರಸ್ಕರಿಸಿದೆ ಎನ್ನಲಾಗುತ್ತಿದೆ.  ಇದನ್ನೂ ಓದಿ:  ಇರಾನ್‌ನ ಹಿಟ್‌ ಲಿಸ್ಟ್‌ ಸಿದ್ಧಪಡಿಸಿದ ಅಮೆರಿಕ – ಮಧ್ಯಪ್ರಾಚ್ಯದಲ್ಲಿ ಇಂದು ರಾತ್ರಿಯೇ ರಣಭೀಕರ ಕಾಳಗ?

ಭಾರತ ಅಮೆರಿಕ, ಇಸ್ರೇಲ್‌ ಜೊತೆಗೆ ಉತ್ತಮ ಸಂಬಂಧ ಹೊಂದಿದೆ. ಅದೇ ರೀತಿ ಇರಾನ್‌ ಜೊತೆಗೂ ಉತ್ತಮ ಸ್ನೇಹವನ್ನು ಹೊಂದಿದೆ. ಇರಾನ್‌ ಭಾರತವನ್ನು ಸ್ನೇಹಿತ ರಾಷ್ಟ್ರ ಎಂದು ಕರೆದಿದ್ದು ಭಾರತ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯನ್ನು ತೆರೆದಿದೆ.
Share This Article