ಕೊಲ್ಲಿ ಯುದ್ಧದ ಬಳಿಕ 2.20 ಲಕ್ಷ ಮಂದಿ ಭಾರತಕ್ಕೆ ರಿಟರ್ನ್‌: ಕೇಂದ್ರ ಸರ್ಕಾರ

2 Min Read

– ಟೆಹ್ರಾನ್‌ನಲ್ಲಿರುವ ರಾಯಭಾರ ಕಚೇರಿಯಿಂದ ನಿರಂತರ ಸಹಾಯ
– 45 ವಿಮಾನಗಳಲ್ಲಿ ಭಾರತಕ್ಕೆ ಮರಳಲಿದ್ದಾರೆ ಜನ

ನವದೆಹಲಿ: ಕೊಲ್ಲಿ ಯುದ್ಧ ಆರಂಭವಾದ ಫೆ.28ರ ಬಳಿಕ ಗಲ್ಫ್‌ ರಾಷ್ಟ್ರಗಳಿಂದ (Gulf Nations) 2,20,000 ಮಂದಿ ದೇಶಕ್ಕೆ ಮರಳಿದ್ದಾರೆ ಎಂದು ಭಾರತ ಸರ್ಕಾರ (Indian Government) ತಿಳಿಸಿದೆ.

ಯುಎಇ, ಸೌದಿ ಅರೇಬಿಯಾ, ಓಮನ್ ಮತ್ತು ಕತಾರ್ ಸೇರಿದಂತೆ ಗಲ್ಫ್ ಪ್ರದೇಶದ ವಿವಿಧ ದೇಶಗಳಿಂದ ನಲವತ್ತೈದು ವಿಮಾನಗಳು ಸೋಮವಾರ ಭಾರತದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಇಳಿಯುವ ನಿರೀಕ್ಷೆಯಿದೆ ವಿದೇಶಾಂಗ ಇಲಾಖೆಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಕತಾರ್‌ನ(Qatar) ವಾಯುಪ್ರದೇಶವು ಭಾಗಶಃ ಮತ್ತೆ ತೆರೆದಿರುವುದರಿಂದ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ. ಇಂದು ಮತ್ತು ನಾಳೆ ಭಾರತದ ವಿವಿಧ ಸ್ಥಳಗಳಿಗೆ ಮೂರು ವಿಮಾನಗಳು ಹಾರಾಟ ನಡೆಸುವ ನಿರೀಕ್ಷೆಯಿದೆ ಎಂದು ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ (ಗಲ್ಫ್) ಅಸೀಮ್ ಮಹಾಜನ್ ಹೇಳಿದ್ದಾರೆ.

550 ಭಾರತೀಯ ಪ್ರಜೆಗಳು ಭೂ ಗಡಿಯ ಮೂಲಕ ಅರ್ಮೇನಿಯಾವನ್ನು ದಾಟಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದರು. 90 ಭಾರತೀಯರು ಇರಾನ್‌ನಿಂದ ಭೂ ಗಡಿಯ ಮೂಲಕ ಅಜೆರ್ಬೈಜಾನ್‌ಗೆ ಪ್ರಯಾಣಿಸಿದ್ದಾರೆ. ಇದನ್ನೂ ಓದಿ: ಕೊಲ್ಲಿ ಯುದ್ಧದ ನಡುವೆ ಭಾರತಕ್ಕೆ 45,000 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತು ತಂದ ಶಿವಾಲಿಕ್‌ ಹಡಗು

ಕುವೈತ್‌ನ ವಾಯುಪ್ರದೇಶವು ಮುಚ್ಚಲ್ಪಟ್ಟಿದೆ ಮತ್ತು ವಿಶೇಷ ನಿಗದಿತವಲ್ಲದ ವಿಮಾನಗಳು ಶೀಘ್ರದಲ್ಲೇ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಬಹ್ರೇನ್ ಮತ್ತು ಇರಾಕ್‌ನಲ್ಲಿರುವ ಪ್ರಯಾಣಿಕರಿಗೆ ಸೌದಿ ಅರೇಬಿಯಾ ಮೂಲಕ ಸಾರಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಮಾರ್ಚ್ 13 ರಂದು, ಒಮಾನ್‌ನ ಸೊಹಾರ್ ನಗರದಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಭಾರತೀಯ ಪ್ರಜೆಗಳು ಪ್ರಾಣ ಕಳೆದುಕೊಂಡಿದ್ದಾರೆ. ಮಸ್ಕತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಮೃತ ಭಾರತೀಯ ಪ್ರಜೆಗಳ ಕುಟುಂಬಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಮತ್ತು ಸಂಬಂಧಪಟ್ಟ ಒಮಾನಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ. ಅವರ ಮೃತದೇಹಗಳನ್ನು ಶೀಘ್ರದಲ್ಲೇ ಭಾರತಕ್ಕೆ ವಾಪಸ್ ಕಳುಹಿಸುವ ನಿರೀಕ್ಷೆಯಿದೆ. ಯಾವುದೇ ಭಾರತೀಯ ಪ್ರಜೆಗಳು ಗಂಭೀರವಾಗಿ ಗಾಯಗೊಂಡಿಲ್ಲ ಮಹಾಜನ್ ತಿಳಿಸಿದರು. ಇದನ್ನೂ ಓದಿ: RSS, RAW ಬ್ಯಾನ್‌ ಮಾಡಿ – ಟ್ರಂಪ್‌ಗೆ ಅಮೆರಿಕ ಧಾರ್ಮಿಕ ಸ್ವಾತಂತ್ರ್ಯ ಆಯೋಗ ಶಿಫಾರಸು

ಇರಾನ್‌ನಿಂದ (Iran) ಅರ್ಮೇನಿಯಾಗೆ ದಾಟಿದ ಸುಮಾರು 90 ಮಂದಿ ನಮ್ಮ ಪ್ರಜೆಗಳು ಭೂ ಗಡಿಯ ಮೂಲಕ ಅಜೆರ್ಬೈಜಾನ್‌ಗೆ ದಾಟಿದ್ದಾರೆ. ಟೆಹ್ರಾನ್‌ನಲ್ಲಿರುವ ನಮ್ಮ ರಾಯಭಾರ ಕಚೇರಿ ವೀಸಾ ಸೇರಿದಂತೆ ಅಗತ್ಯ ಸಹಾಯ ಮಾಡಿದೆ. ಟೆಹ್ರಾನ್‌ನಲ್ಲಿರುವ ನಮ್ಮ ರಾಯಭಾರ ಕಚೇರಿ ಎಲ್ಲಾ ತೊಂದರೆಗಳ ನಡುವೆಯೂ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ. ಕಳೆದ ಕೆಲವು ದಿನಗಳಿಂದ, ಟೆಹ್ರಾನ್‌ನ ಹೊರಗೆ ಇದ್ದ ವಿದ್ಯಾರ್ಥಿಗಳನ್ನು ಅವರಿಗೆ ಸುರಕ್ಷಿತವಾದ ನಗರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
Share This Article