ಮುಂಬೈ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧಗಳು ((Middle East War) ತೀವ್ರಗೊಳ್ಳುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ (Share Market) ರಕ್ತಪಾತವಾಗಿದ್ದು ಹೂಡಿಕೆದಾರರ (Investors) ಸಂಪತ್ತು ಇಂದು ಒಂದೇ ದಿನದಲ್ಲಿ 10 ಲಕ್ಷ ಕೋಟಿ ರೂ. ಕರಗಿದೆ.
ಬಾಂಬೆ ಷೇರು ಮಾರುಕಟ್ಟೆ(BSE) ಸಂವೇದಿ ಸೂಚಂಕ್ಯ ಸೆನ್ಸೆಕ್ಸ್(Sensex) ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ(NSE) ಸೂಚಂಕ್ಯ ನಿಫ್ಟಿ(Nifty), ಬ್ಯಾಂಕ್ ನಿಫ್ಟಿ ಅಂಕಗಳು ಭಾರೀ ಇಳಿಕೆಯಾಗಿದ್ದರಿಂದ ಒಂದೇ ದಿನ ಹೂಡಿಕೆದಾರರು ಸುಮಾರು 10 ಲಕ್ಷ ಕೋಟಿ ರೂ. ಕಳೆದುಕೊಂಡಿದ್ದಾರೆ.
ಯಾವುದು ಎಷ್ಟು ಇಳಿಕೆ?
ಸೆನ್ಸೆಕ್ಸ್ 1,635(-2.22%) ಅಂಕ ಕುಸಿದು 82.497.1ರಲ್ಲಿ ಕೊನೆಯಾದರೆ ನಿಫ್ಟಿ 488 (-2.1%) ಅಂಕ ಇಳಿಕೆಯಾಗಿ 22,331.40 ರಲ್ಲಿ ಕೊನೆಯಾಯಿತು. ಬ್ಯಾಂಕ್ ನಿಫ್ಟಿ 1,999.25(-3.82%) ಅಂಕ ಕುಸಿದು 50,275.35 ರಲ್ಲಿ ವ್ಯವಹಾರ ಮುಗಿಸಿದೆ. ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಬಿತ್ತು ಹೆಣ – ಮಹಿಳೆಯನ್ನ ಕೊಂದು ಅರ್ಧ ದೇಹವನ್ನ ಫ್ರಿಡ್ಜ್‌ನಲ್ಲಿಟ್ಟಿದ್ದ ನೌಕಾಪಡೆ ಉದ್ಯೋಗಿ
ರಕ್ತಪಾತಕ್ಕೆ ಕಾರಣ ಏನು?
ಅಮೆರಿಕ ಭೂದಾಳಿ ನಡೆಸಲು ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಇಂದು ಮೊದಲೇ ಕುಸಿತವಾಗಲಿದೆ ಎನ್ನುವ ನಿರೀಕ್ಷೆ ಇತ್ತು. ಪ್ರತಿ ಮಂಗಳವಾರ ನಿಫ್ಟಿ ಕಾಂಟ್ರಾಕ್ಟ್ ಎಕ್ಸ್‌ಪೈರಿಯಾಗುತ್ತದೆ. ಬ್ಯಾಂಕ್ ನಿಫ್ಟಿಯ ವಾರ ಮತ್ತು ತಿಂಗಳ ಫ್ಯೂಚರ್ ಕಾಂಟ್ರಾಕ್ಟ್ ಮಂಗಳವಾರವೇ ಕೊನೆಯಾಗುತ್ತದೆ.
ನಾಳೆ ಮಂಗಳವಾರ(ಮಾ.31) ಮಹಾವೀರ ಜಯಂತಿ ಹಿನ್ನೆಲೆಯಲ್ಲಿ ಬಿಎಸ್‌ಇ ಮತ್ತು ಎನ್‌ಎಸ್‌ಇಗೆ ರಜೆ ಇದೆ. ಮಂಗಳವಾರ ರಜೆ ಇರುವ ಕಾರಣ ಇಂದೇ ನಿಫ್ಟಿ ಮತ್ತು ಬ್ಯಾಂಕ್ ನಿಫ್ಟಿ ಫ್ಯೂಚರ್ ಕಾಂಟ್ರಾಕ್ಟ್ ಕೊನೆಗೊಗುವುದರಿಂದ ಹೂಡಿಕೆದಾರರು ಇಂದು ಹೂಡಿಕೆಯನ್ನು ಮಾರಾಟ ಮಾಡಿ ಭಾರೀ ಪ್ರಮಾಣದಲ್ಲಿ ಹಣವನ್ನು ಹಿಂದಕ್ಕೆ ಪಡೆದಿದ್ದಾರೆ.
ಇಂದು ಒಂದು ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲದ ಬೆಲೆ 115 ಡಾಲರ್(10,880 ರೂ.) ತಲುಪಿದೆ. ಕಚ್ಚಾ ತೈಲದ ದರ ಏರಿಕೆಯಾದರೆ ಅದು ನೇರವಾಗಿ ಷೇರು ಮಾರಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣದ ಜೊತೆ ಭಾರತೀಯ ರಿಸರ್ವ್ ಬ್ಯಾಂಕ್ ಡಾಲರ್ ಮುಂದೆ ಕುಸಿಯುತ್ತಿರುವ ರೂಪಾಯಿ ಮೌಲ್ಯವನ್ನು ವೃದ್ಧಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ. ಈ ನಿರ್ಧಾರದಿಂದ ಬ್ಯಾಂಕ್‌ಗಳಿಗೆ ಭಾರೀ ನಷ್ಟವಾಗಲಿದೆ ಎಂದು ಎಂಬ ಸುದ್ದಿಗಳು ಪ್ರಕಟವಾದ ಬೆನ್ನಲ್ಲೇ ಇಂದು ಒಂದೇ ದಿನ ಬ್ಯಾಂಕ್ ನಿಫ್ಟಿ 1,999.25 ಅಂಕ ಕುಸಿದಿದೆ.
ನಿಫ್ಟಿ ಎಕ್ಸ್‌ಪೈರಿ ದಿನ ಮಾರುಕಟ್ಟೆ ಬೀಳುವುದು ಹೊಸದೆನಲ್ಲ. ಆದರೆ ಈಗ ಟ್ರಂಪ್ ನಿರ್ಧಾರ, ಟ್ರಂಪ್ ನಿರ್ಧಾರಕ್ಕೆ ಇರಾನ್ ಪ್ರತಿಕ್ರಿಯೆ, ಕಚ್ಚಾ ತೈಲ ದರ ಏರಿಕೆಯಿಂದ ಷೇರು ಮಾರುಕಟ್ಟೆ ಪತನಗೊಳ್ಳುತ್ತಿದೆ.

