ವಾಷಿಂಗ್ಟನ್: ಅಮೆರಿಕ ಇರಾನ್(Iran) ಮೇಲೆ ಪರಮಾಣು ದಾಳಿ(Nuclear Attack ) ನಡೆಸುತ್ತಾ ಎಂಬ ಪ್ರಶ್ನೆ ಹುಟ್ಟಿದ್ದು ಭಾರೀ ಸಂಚಲನ ಮೂಡಿಸಿದೆ.
ಇಂದು ರಾತ್ರಿ ಇರಾನ್ ನಾಗರಿಕತೆಯೇ ಅಂತ್ಯವಾಗಬಹುದು ಎಂದು ಟ್ರಂಪ್ (Donald Trump) ನೀಡಿದ ಹೇಳಿಕೆ ಜಾಗತಿಕವಾಗಿ ಪರಮಾಣು ಯುದ್ಧದ ಆತಂಕ ಸೃಷ್ಟಿಸಿದೆ.
ಟ್ರಂಪ್ ಹೇಳಿಕೆಗೆ ಪೂರಕ ಎಂಬಂತೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ನಿಲ್ಲಿಸದಿದ್ದರೆ ಮತ್ತು ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡದಿದ್ದರೆ ಅಮೆರಿಕವು ʻನಿರ್ಣಾಯಕ ಕ್ರಮʼ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ಇಂದು ರಾತ್ರಿ ಒಂದು ಇಡೀ ನಾಗರಿಕತೆಯೇ ಅಂತ್ಯವಾಗಲಿದೆ: ಇರಾನಿಗೆ ಟ್ರಂಪ್ ವಾರ್ನಿಂಗ್
JUST IN: 🇺🇸 🇮🇷 US Vice President JD Vance says “we got tools in our toolkit that we so far haven’t decided to use.”
President Trump “will decide to use them if the Iranian’s don’t change their course of conduct.” pic.twitter.com/G8bGfRReXz
— BRICS News (@BRICSinfo) April 7, 2026
ನಮ್ಮ ಟೂಲ್ಕಿಟ್ನಲ್ಲಿ ನಾವು ಇಲ್ಲಿಯವರೆಗೆ ಬಳಸಲು ನಿರ್ಧರಿಸದ ಸಾಧನಗಳಿವೆ ಎಂದು ಹೇಳುವ ಮೂಲಕ ನಮ್ಮ ಬಳಿ ಇನ್ನೂ ದೊಡ್ಡ ಮಟ್ಟದ ವಿನಾಶಕಾರಿ ಶಕ್ತಿ ಇದೆ, ಪರಿಸ್ಥಿತಿ ಮಿತಿ ಮೀರಿದರೆ ನಾವು ಅವುಗಳನ್ನು ಬಳಸಲು ಹಿಂಜರಿಯುವುದಿಲ್ಲ ಎಂಬ ಸಂದೇಶವನ್ನು ವ್ಯಾನ್ಸ್ ಇರಾನ್ಗೆ ಕಳುಹಿಸಿದ್ದರು. ಇದನ್ನೂ ಓದಿ: ಇರಾನ್ ಮೇಲೆ ಪರಮಾಣು ದಾಳಿಗೆ ಸಿದ್ಧತೆ: ವಿಶ್ವಸಂಸ್ಥೆಯ ರಾಜತಾಂತ್ರಿಕ ರಾಜೀನಾಮೆ
ಟ್ರಂಪ್ ಹೇಳಿಕೆಯ ಬಳಿಕ ವ್ಯಾನ್ಸ್ ನೀಡಿದ ಹೇಳಿಕೆಯಿಂದಾಗಿ ಇರಾನ್ ಮೇಲೆ ಅಮೆರಿಕ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಸಾಧ್ಯತೆಯಿದೆ ಎಂಬ ಸುದ್ದಿ ಹರಡಿತ್ತು.
ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಗುತ್ತಿರುವ ಬೆನ್ನಲ್ಲೇ ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತಭವನ ಸ್ಪಷ್ಟನೆ ನೀಡಿದೆ. ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ಇರಾನ್ ವಿರುದ್ಧ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಯಾವುದೇ ಯೋಜನೆ ಅಮೆರಿಕಕ್ಕಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ಇರಾನ್ ಡೆಡ್ಲೈನ್| ಅಮೆರಿಕದ ಭಾರತೀಯ ರಾಯಭಾರಿಯನ್ನು ಶ್ವೇತಭವನಕ್ಕೆ ಆಹ್ವಾನಿಸಿದ ಟ್ರಂಪ್
ಪರಮಾಣು ಬಾಂಬ್ ಬಳಸದಿದ್ದರೂ, ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ನ ಇಸ್ಫಹಾನ್ ಮತ್ತು ಬುಶೆಹರ್ನಲ್ಲಿರುವ ಪರಮಾಣು ಸಂಸ್ಕರಣಾ ಘಟಕಗಳ ಮೇಲೆ ಬಂಕರ್ ಬಸ್ಟರ್ (Bunker Buster) ಬಾಂಬ್ಗಳಿಂದ ದಾಳಿ ನಡೆಸಿವೆ.

