Iran-US-Israel War | ಮಧ್ಯಪ್ರಾಚ್ಯ ಯುದ್ಧಕ್ಕೆ 4.62 ಲಕ್ಷ ಕೋಟಿ ಡಾಲರ್‌ ನೆರವು ಅಗತ್ಯ: ಐಎಂಎಫ್‌

1 Min Read

ವಾಷಿಂಗ್ಟನ್‌: ಮಧ್ಯಪ್ರಾಚ್ಯ ಯುದ್ಧದಿಂದ ಸಂಕಷ್ಟಕ್ಕೆ ಸಿಲುಕಿರುವ ದೇಶಗಳಿಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯು (IMF) 50 ಶತಕೋಟಿ ಡಾಲರ್‌ ಅಂದ್ರೆ ಸುಮಾರು 4.62 ಲಕ್ಷ ಕೋಟಿ ರೂಪಾಯಿಗಳಷ್ಟು ಆರ್ಥಿಕ ಸಹಾಯ (Financial Assistance) ನೀಡಬೇಕಾಗುತ್ತದೆ ಎಂದು ಐಎಂಎಫ್‌ ವ್ಯವಸ್ಥಾಪಕ ನಿರ್ದೇಶಕರಾದ ಕ್ರಿಸ್ಟಲಿನಾ ಜಾರ್ಜಿವಾ ಹೇಳಿದ್ದಾರೆ.

ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಮಧ್ಯಪ್ರಾಚ್ಯ ಯುದ್ಧದ (Middle East War) ಪರಿಣಾಮಗಳನ್ನ ಗಮನಿಸಿದರೆ, ಐಎಂಎಫ್ ಪಾವತಿ ಸಮತೋಲನ ಬೆಂಬಲಕ್ಕಾಗಿ ಅಲ್ಪಾವಧಿಯ ಬೇಡಿಕೆಯು 20 ಶತಕೋಟಿಯಿಂದ ಡಾಲರ್‌ನಿಂದ 50 ಶತಕೋಟಿಗೆ ಡಾಲರ್‌ಗೆ ಏರುವ ನಿರೀಕ್ಷೆಯಿದೆ. ಕದನ ವಿರಾಮ ಮುಂದುವರಿದರೆ ಆರ್ಥಿಕ ಸಹಾಯದ ಮಿತಿ ಕಡಿಮೆ ಇರುತ್ತದೆ ಎಂದು ಕ್ರಿಸ್ಟಲಿನಾ ತಿಳಿಸಿದ್ದಾರೆ.

ಮೇ 3ರ ವರೆಗೆ ಮಧ್ಯಪ್ರಾಚ್ಯ ವಿಮಾನಗಳ ಹಾರಾಟ ಸ್ಥಗಿತ
ಇರಾನ್‌-ಅಮೆರಿಕ ಮಧ್ಯೆ ಕದನ ವಿರಾಮ ಘೋಷಣೆಯಾದ ಬಳಿಕವೂ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಈ ಹಿನ್ನೆಲೆಯಲ್ಲಿ ಭದ್ರತಾ ಅಪಾಯಗಳನ್ನ ಉಲ್ಲೇಖಿಸಿ ಏರ್ ಫ್ರಾನ್ಸ್ ಮಧ್ಯಪ್ರಾಚ್ಯದ ಪ್ರಮುಖ ತಾಣಗಳಿಗೆ ವಿಮಾನ ಹಾರಾಟ ಸ್ಥಗಿತಗೊಳಿಸುವಿಕೆಯನ್ನು ಮೇ 3 ರವರೆಗೆ ವಿಸ್ತರಿಸಿದೆ ಎಂದು ಮೂಲಗಳು ತಿಳಿಸಿವೆ.

Share This Article