ಟೆಲ್ ಅವೀವ್: ಪರಮಾಣು ಸೌಲಭ್ಯವಿರುವ ಇಸ್ರೇಲಿ (Israel) ಪಟ್ಟಣಗಳಾದ ಡಿಮೋನಾ ಮತ್ತು ಅರಾದ್ ಮೇಲೆ ಇರಾನ್ (Iran) ಕ್ಷಿಪಣಿ ದಾಳಿ ನಡೆಸಿದೆ. ದಾಳಿಯಲ್ಲಿ 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ನಟಾಂಜ್‌ನಲ್ಲಿರುವ ತನ್ನ ಪರಮಾಣು ತಾಣದ ಮೇಲೆ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇರಾನ್ ಅಟ್ಯಾಕ್ ಮಾಡಿದೆ.
ಡಿಮೋನಾದಲ್ಲಿರುವ ಶಿಮೊನ್ ಪೆರೆಸ್ ನೆಗೆವ್ ಪರಮಾಣು ಸಂಶೋಧನಾ ಕೇಂದ್ರವು ಇರಾನ್‌ನ ಟಾರ್ಗೆಟ್ ಆಗಿದೆ. ಎರಡು ನೇರ ದಾಳಿಗಳು ವಸತಿ ಕಟ್ಟಡಗಳ ಮುಂಭಾಗಗಳನ್ನು ನಾಶಗೊಳಿಸಿವೆ. ಇದನ್ನೂ ಓದಿ: ಚೀನಾಗೆ ತೆರಳುತ್ತಿದ್ದ ಟ್ಯಾಂಕರ್ ಯೂಟರ್ನ್ – ಮಂಗಳೂರಿಗೆ ಬರ್ತಿದೆ 7.7 ಲಕ್ಷ ಬ್ಯಾರೆಲ್ ಕಚ್ಚಾ ತೈಲವಿರುವ ಹಡಗು
ಡಿಮೋನಾ ಮತ್ತು ಅರಾದ್ ಎರಡರ ಮೇಲೂ ದಾಳಿ ಮಾಡಲಾಗಿದೆ. ಇದರ ಪರಿಣಾಮ ನೂರಾರು ಕಿಲೋಗ್ರಾಂಗಳಷ್ಟು ತೂಕದ ಸಿಡಿತಲೆಗಳನ್ನು ಹೊಂದಿರುವ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ಎರಡು ನೇರ ಹೊಡೆತಗಳು ಸಂಭವಿಸಿದವು” ಎಂದು ಅಗ್ನಿಶಾಮಕ ದಳದವರನ್ನು ಉಲ್ಲೇಖಿಸಿ AFP ವರದಿ ಮಾಡಿದೆ.
ಇಸ್ರೇಲ್‌ನ ರಾಷ್ಟ್ರೀಯ ತುರ್ತು ವೈದ್ಯಕೀಯ, ವಿಪತ್ತು, ಅಂಬುಲೆನ್ಸ್ ಮತ್ತು ರಕ್ತ ನಿಧಿ ಸೇವೆಯಾದ ಮ್ಯಾಗೆನ್ ಡೇವಿಡ್ ಅಡೋಮ್‌ನ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಅರಾದ್‌ನಲ್ಲಿ 84 ಜನರು ಗಾಯಗೊಂಡಿದ್ದಾರೆ. ಅವರಲ್ಲಿ 10 ಮಂದಿ ಗಂಭೀರವಾಗಿದ್ದಾರೆ. ಡಿಮೋನಾದಲ್ಲಿ 33 ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ವ್ಯಾಪಕ ಹಾನಿ ಮತ್ತು ಅವ್ಯವಸ್ಥೆ ಇತ್ತು ಎಂದು ಅರೆವೈದ್ಯ ಕಾರ್ಮೆಲ್ ಕೊಹೆನ್ ತಿಳಿಸಿದ್ದಾರೆ. ಇದನ್ನೂ ಓದಿ: ಮಧ್ಯಪ್ರಾಚ್ಯ ಬಿಕ್ಕಟ್ಟು; ಭಾರತಕ್ಕೆ ʻಕರೆಂಟ್ ಶಾಕ್ʼ ಎದುರಾಗುತ್ತಾ? – ವಿದ್ಯುತ್ ಕಾರ್ಯದರ್ಶಿ ಹೇಳಿದ್ದೇನು?

