ಸೌದಿ ಅರೇಬಿಯಾದಲ್ಲಿರುವ ಅಮೆರಿಕದ ವಾಯುನೆಲೆಯ ಮೇಲೆ ಇರಾನ್ ದಾಳಿ

1 Min Read

ಟೆಹ್ರಾನ್: ಯುಎಸ್ ಮಿಲಿಟರಿ ಬಳಸುತ್ತಿದ್ದ ಸೌದಿ‌ ಅರೇಬಿಯಾದ (Saudi Arabia) ಅಲ್ ಖಾರ್ಜ್ ವಾಯುನೆಲೆಯ ಮೇಲೆ ಇರಾನ್ (Iran Stricks) ಕ್ಷಿಪಣಿ ದಾಳಿಗಳನ್ನು ನಡೆಸಿದೆ.

ಇಂದು ಬೆಳಗ್ಗೆ ಮಧ್ಯ ಇಸ್ರೇಲ್‌ನಲ್ಲೂ ಜೋರಾಗಿ ಸ್ಫೋಟಗಳು ಕೇಳಿಬಂದಿವೆ. ಇರಾನ್‌ ಕ್ಷಿಪಣಿ ದಾಳಿಯ ಹಿನ್ನೆಲೆಯಲ್ಲಿ ವಾಯುದಾಳಿ ಸೈರನ್‌ಗಳು ಮೊಳಗಿವೆ. ಇದನ್ನೂ ಓದಿ: ನೆತನ್ಯಾಹು ಕ್ಷೇಮವಾಗಿದ್ದಾರೆ: ಪ್ರಧಾನಿ ಸಾವಿನ ವರದಿ ಸುಳ್ಳು ಎಂದ ಇಸ್ರೇಲ್‌

ಕೆಲವು ದಿನಗಳ ಹಿಂದೆ ಇರಾಕ್ ಮೇಲೆ ಇಂಧನ ತುಂಬುವ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಆರು ವಾಯುಪಡೆಯ ಸಿಬ್ಬಂದಿಯನ್ನು ಯುನೈಟೆಡ್ ಸ್ಟೇಟ್ಸ್ ರಕ್ಷಣಾ ಇಲಾಖೆ ಗುರುತಿಸಿದೆ. ಮಧ್ಯಪ್ರಾಚ್ಯದಲ್ಲಿ ಯುದ್ಧವು ಮೂರನೇ ವಾರಕ್ಕೆ ಕಾಲಿಡುತ್ತಿದ್ದಂತೆ, ಯುದ್ಧವನ್ನು ಕೊನೆಗೊಳಿಸಲು ಇರಾನ್ ಒಪ್ಪಂದಕ್ಕೆ ಮಾತುಕತೆ ನಡೆಸಲು ಸಿದ್ಧವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ. ಆದರೆ, ನೀಡಲಾದ ಷರತ್ತುಗಳ ವಿಚಾರವಾಗಿ ಟ್ರಂಪ್ ಇನ್ನೂ ಕದನ ವಿರಾಮಕ್ಕೆ ಒಪ್ಪಿಕೊಳ್ಳಲು ಸಿದ್ಧರಿಲ್ಲ.

ಫೆ.28 ರಂದು ಇಸ್ರೇಲ್ ಮತ್ತು ಅಮೆರಿಕ, ಇರಾನ್ ವಿರುದ್ಧ ಜಂಟಿ ದಾಳಿಗಳನ್ನು ನಡೆಸಿದವು. ಯುದ್ಧದ ಮೊದಲ ದಿನವೇ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆ ಮಾಡಲಾಯಿತು. ಇರಾನ್ ತನ್ನ ತೈಲ ರಫ್ತು ಮಾಡುವ ನೆರೆಹೊರೆಯವರ ವಿರುದ್ಧ ದಾಳಿಗಳ ಮೂಲಕ ಪ್ರತೀಕಾರ ತೀರಿಸಿಕೊಳ್ಳುತ್ತಿದೆ.

Share This Article