ನೆರೆ ರಾಷ್ಟ್ರಗಳ ಮೇಲಿನ ದಾಳಿಗೆ ಕ್ಷಮೆಯಾಚಿಸುತ್ತೇನೆ: ಇರಾನ್‌ ಅಧ್ಯಕ್ಷ ಮಸೌದ್‌

2 Min Read

– ನಿಮ್ಮಿಂದ ದಾಳಿಯಾಗದ ಹೊರತು ನಾವು ಯಾವುದೇ ದಾಳಿ ನಡೆಸಲ್ಲ ಅಂತ ಇರಾನ್‌ ಸ್ಪಷ್ಟನೆ

ಟೆಹ್ರಾನ್:‌ ಇಸ್ರೇಲ್ ಮತ್ತು ಅಮೆರಿಕದೊಂದಿಗಿನ ಯುದ್ಧದ ಸಮಯದಲ್ಲಿ ನಡೆಸಲಾದ ದಾಳಿಗಳಿಗೆ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ (Masoud Pezeshkian), ನೆರೆಯ ರಾಷ್ಟ್ರಗಳಿಗೆ ಕ್ಷಮೆಯಾಚಿಸಿದ್ದಾರೆ.

‘ಇರಾನ್ ದಾಳಿ ಮಾಡಿದ ನೆರೆಯ ರಾಷ್ಟ್ರಗಳಿಗೆ ನಾನು ನನ್ನ ಪರವಾಗಿ ಮತ್ತು ಇರಾನ್ ಪರವಾಗಿ ಕ್ಷಮೆಯಾಚಿಸಬೇಕು. ಆ ದೇಶಗಳಿಂದ ದಾಳಿಯಾಗದಿದ್ದರೆ, ನೆರೆ ರಾಷ್ಟ್ರಗಳ ಮೇಲೆ ಇನ್ಮುಂದೆ ನಾವು ಯಾವುದೇ ದಾಳಿ ಮಾಡಲ್ಲ. ಯಾವುದೇ ಕ್ಷಿಪಣಿಗಳನ್ನು ಹಾರಿಸುವುದಿಲ್ಲ ಎಂದು ನಿನ್ನೆ ಮಧ್ಯಂತರ ನಾಯಕತ್ವ ಮಂಡಳಿ ಒಪ್ಪಿಕೊಂಡಿತು’ ಎಂದು ಇರಾನ್ ರಾಜ್ಯ ಟಿವಿ ಪ್ರಸಾರ ಮಾಡಿದ ಭಾಷಣದಲ್ಲಿ ಪೆಜೆಶ್ಕಿಯನ್ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ದುಬೈ ವಿಮಾನ ನಿಲ್ದಾಣದ ಮೇಲೆಯೇ ಇರಾನ್‌ ಡ್ರೋನ್‌ ದಾಳಿ

ನಾವು ಯಾವುದೇ ಕಾರಣಕ್ಕೂ ಶರಣಾಗುವುದಿಲ್ಲ. ಇರಾನ್ ಜನರ ಶರಣಾಗತಿಯ ಆಶಯವನ್ನು ಶತ್ರುಗಳು ತಮ್ಮ ಸಮಾಧಿಗೆ ಕೊಂಡೊಯ್ಯಬೇಕು ಎಂದು ಇರಾನ್‌ ಅಧ್ಯಕ್ಷ ಖಡಕ್‌ ಮಾತುಗಳನ್ನಾಡಿದ್ದಾರೆ.

ಪರಮಾಣು ಮಾತುಕತೆಗಳು ಸ್ಥಗಿತಗೊಂಡು, ಇರಾನ್ ತನ್ನ ಪರಮಾಣು ಚಟುವಟಿಕೆಗಳನ್ನು ಪುನರಾರಂಭಿಸಿದೆ ಎಂದು ಹೇಳಿಕೊಂಡ ಬೆನ್ನಲ್ಲೇ ಫೆ.28 ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್‌ನಾದ್ಯಂತ ಸಂಘಟಿತ ವೈಮಾನಿಕ ದಾಳಿಗಳನ್ನು ನಡೆಸಿದವು. ‘ಆಪರೇಷನ್ ಎಪಿಕ್ ಫ್ಯೂರಿ’ ಎಂದು ಹೆಸರಿಸಲಾದ ಈ ದಾಳಿಗಳು ರಾಜಧಾನಿ ಟೆಹ್ರಾನ್ ಸೇರಿದಂತೆ ಅನೇಕ ಇರಾನಿನ ನಗರಗಳನ್ನು ಗುರಿಯಾಗಿಸಿಕೊಂಡು ನಡೆದವು. ದಾಳಿಯಲ್ಲಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ, ಅವರ ಪತ್ನಿ, ಮಗಳು, ಅಳಿಯ ಮತ್ತು ಮೊಮ್ಮಗಳು ಹತ್ಯೆಯಾಗಿದ್ದಾರೆ. ಇದನ್ನೂ ಓದಿ: ದೇಶದಲ್ಲಿ 250 ಮಿಲಿಯನ್ ಬ್ಯಾರಲ್‌ಗೂ ಹೆಚ್ಚು ಕಚ್ಚಾ ತೈಲ ಸಂಗ್ರಹ – ಇಂಧನ ಬಿಕ್ಕಟ್ಟು ವದಂತಿ ತಳ್ಳಿ ಹಾಕಿದ ಕೇಂದ್ರ

ಅಂದಿನಿಂದ ಇರಾನ್, ಇಸ್ರೇಲ್ ಮತ್ತು ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಮೂಲಕ ಪ್ರತಿಕ್ರಿಯಿಸಿದೆ. ದುಬೈ, ಅಬುಧಾಬಿ, ಕತಾರ್, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ಪ್ರದೇಶಗಳಲ್ಲಿ ತೀವ್ರತರ ದಾಳಿ ನಡೆಸಿದೆ. ವಿಶ್ವದ ಅತ್ಯಂತ ಜನನಿಬಿಡ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಡೆದ ದಾಳಿಗಳಲ್ಲಿ ಕಳೆದ ವಾರ ನಾಲ್ಕು ಜನರನ್ನು ಗಾಯಗೊಂಡಿದ್ದರು.

Share This Article