ಗಲ್ಫ್ ರಾಷ್ಟ್ರಗಳ ಮೇಲೆ ಸಮರ ಸಾರಿದ ಇರಾನ್‌ – ಯುಎಇ ಮೇಲೆ 208 ಡ್ರೋನ್‌, 137 ಬ್ಯಾಲಿಸ್ಟಿಕ್‌ ಕ್ಷಿಪಣಿ ದಾಳಿ

1 Min Read

ಅಬುಧಾಬಿ: ಆಯತೊಲ್ಲಾ ಅಲಿ ಖಮೇನಿ (Ayatollah Khamenei) ಹೆಸರು ಕೇಳಿದರೆ ಅರ್ಧ ಇರಾನ್‌ಗೆ (Iran) ಹೆಮ್ಮೆ, ಇನ್ನರ್ಧ ಇರಾನ್‌ಗೆ ಕುದಿ. ಅರ್ಧ ಇರಾನಿಯನ್ನರ ಪಾಲಿಗೆ ಆರಾಧ್ಯದೈವ, ಇನ್ನರ್ಧ ಇರಾನಿಯನ್ನರ ಪಾಲಿಗೆ ರಾಕ್ಷಸ. ಹೀಗೆ ಒಂದು ಮುಖದ 2 ಅನುಭವ ಉಂಟು ಮಾಡಿದ್ದ ಖಮೇನಿ ಅಮೆರಿಕ-ಇರಾನ್‌ ಜಂಟಿ ದಾಳಿಯಲ್ಲಿ ಹತ್ಯೆಗೀಡಾಗಿದ್ದಾರೆ. ಆದ್ರೆ ಖಮೇನಿ ಹತ್ಯೆ ಬಳಿಕವೂ ಇರಾನ್‌ನ‌ ಪಡೆಗಳು ಕೊಲ್ಲಿ ರಾಷ್ಟ್ರಗಳ ವಿರುದ್ಧ ಸಮರ ಸಾರಿವೆ.

ಪ್ರತೀಕಾರ ತೀರಿಸಿಕೊಳ್ಳಲು ಆಕ್ರಮಣ ಹೆಜ್ಜೆಯನ್ನಿಟ್ಟಿರುವ ಇರಾನ್‌, ಅಮೆರಿಕದ ಸೇನಾ ನೆಲೆಗಳಿರುವ ಯುಎಇ, ಕತಾರ್‌, ಬಹ್ರೇನ್‌ ರಾಷ್ಟ್ರಗಳ ಮೇಲೆ ಡ್ರೋನ್‌ ಮತ್ತು ಮಿಸೈಲ್‌ ದಾಳಿ (Ballistic Missiles) ಮುಂದುವರಿಸಿದೆ. ಇದನ್ನೂ ಓದಿ: 30 ಬಾಂಬ್‌ಗಳಿಂದ ದಾಳಿ – ತನ್ನ ಮನೆಯಲ್ಲೇ ಖಮೇನಿ ಹತ್ಯೆಗೆ ಅಮೆರಿಕ-ಇಸ್ರೇಲ್‌ ರೂಪಿಸಿದ್ದ ರಣತಂತ್ರ ಹೇಗಿತ್ತು?

ಡ್ರೋನ್‌, ಕ್ಷಿಪಣಿಗಳ ಬೆಂಕಿ ಮಳೆ
ಇಲ್ಲಿಯವರೆಗೆ ಅಮೆರಿಕ ಸೇನಾ ನೆಲೆಗಳನ್ನು ಹೊಂದಿರುವ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಮೇಲೆ 208 ಡ್ರೋನ್‌ಗಳು ಮತ್ತು 137 ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ದಾಳಿ ನಡೆಸಿದೆ. ಕತಾರ್ ಮೇಲೆ 66 ಡ್ರೋನ್‌ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳು (ಬಹುಪಾಲು ಕ್ಷಿಪಣಿಗಳು), ಬಹ್ರೇನ್‌ ಮೇಲೆ 9 ಡ್ರೋನ್‌ ಮತ್ತು 45 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನ ಉಡಾಯಿಸಿದೆ. ಇದನ್ನೂ ಓದಿ: Iran Israel War | ಮಂಗಳೂರು ಏರ್‌ಪೋರ್ಟ್‌ನಿಂದ ವಿಮಾನಗಳ ಹಾರಾಟ ಹಠಾತ್‌ ರದ್ದು!

ಇರಾನ್‌ ದಾಳಿಗೆ ಯುಎಇ ರಕ್ಷಣಾ ಸಚಿವರು ಪ್ರತಿಕ್ರಿಯಿಸಿದ್ದು, ದಾಳಿಯ ಪ್ರಮಾಣವನ್ನ ಪ್ರಕಟಿಸಿದ್ದಾರೆ. ಇರಾನ್‌ ಇಂದು ಯುಎಇ ಕಡೆಗೆ 137 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು 209 ಡ್ರೋನ್‌ಗಳನ್ನು (Drones) ಉಡಾಯಿಸಿತು. ಆದ್ರೆ ನಮ್ಮ ಧೈರ್ಯಶಾಲಿ ಸಶಸ್ತ್ರ ಪಡೆಗಳು 132 ಕ್ಷಿಪಣಿಗಳು ಮತ್ತು 195 ಡ್ರೋನ್‌ಗಳನ್ನ ಹೊಡೆದುರುಳಿಸಿವೆ. ಕೇವಲ 14 ಮಾತ್ರ ದಾಳಿ ನಡೆಸಿ ಹಾನಿಯನ್ನುಂಟು ಮಾಡಿವೆ ಎಂದು ತಿಳಿಸಿದ್ದಾರೆ.

ರಾಷ್ಟ್ರವನ್ನ ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

Share This Article