Iran Israel War | ಮಂಗಳೂರು ಏರ್‌ಪೋರ್ಟ್‌ನಿಂದ ವಿಮಾನಗಳ ಹಾರಾಟ ಹಠಾತ್‌ ರದ್ದು!

1 Min Read

ಮಂಗಳೂರು: ಇಸ್ರೇಲ್ ಇರಾನ್ ಸಂಘರ್ಷದ ಹಿನ್ನೆಲೆ ಮಂಗಳೂರು ವಿಮಾನ ನಿಲ್ದಾಣದಿಂದ (Mangaluru Airport) ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದೆ. ನಿಗದಿಯಾಗಿದ್ದ ಏರ್‌ ಇಂಡಿಯಾ, ಇಂಡಿಗೋ ವಿಮಾನಗಳ ಹಾರಾಟವನ್ನ ಹಠಾತ್‌ ರದ್ದುಗೊಳಿಸಲಾಗಿದೆ.

ಪ್ರಮುಖವಾಗಿ ದುಬೈಗೆ ತೆರಳುವ ವಿಮಾನಗಳ ಹಾರಾಟ ಸ್ಥಗಿತಗೊಂಡಿದ್ದು (Flights Cancell), ಪ್ರಯಾಣಿಕರು ಪರದಾಡುವಂತಾಗಿದೆ. ವಿದೇಶಕ್ಕೆ ಪ್ರಯಾಣ ಮಾಡುವ ಪ್ರಯಾಣಿಕರು ಆಯಾ ವಿಮಾನ ಸಂಸ್ಥೆಗಳು ಖಚಿತಪಡಿಸಿದ ಬಳಿಕವಷ್ಟೇ ವಿಮಾನ ನಿಲ್ದಾಣಕ್ಕೆ ಆಗಮಿಸಿ ಎಂದು ವಿಮಾನ ನಿಲ್ದಾಣ ಪ್ರಾಧಿಕಾರಿಗಳು ಮನವಿ ಮಾಡಿವೆ. ಇದನ್ನೂ ಓದಿ:  ಇರಾನ್‌ ಸುಪ್ರೀಂ ಲೀಡರ್‌ ಖಮೇನಿ ಖತಂ – ಚಿಕ್ಕಬಳ್ಳಾಪುರದ ಅಲೀಪುರದಲ್ಲಿ 3 ದಿನ ʻಬ್ಲಾಕ್ ಡೇʼ ಆಚರಣೆ

ಸಾಂದರ್ಭಿಕ ಚಿತ್ರ

ಮಂಗಳೂರು ಏರ್‌ಪೋರ್ಟ್‌ನಿಂದ ರದ್ದಾದ ವಿಮಾನಗಳು 

– 9.25 ರ ಮಂಗಳೂರು – ಮಸ್ಕತ್ ಏರ್ ಇಂಡಿಯಾ ಎಕ್ಸ್‌ಪ್ರೆಸ್‌
– ಮಧ್ಯಾಹ್ನ 1.20 ರ ಮಂಗಳೂರು – ದುಬೈ ಏರ್ ಇಂಡಿಯಾ ಎಕ್ಸ್‌ಪ್ರೆಸ್‌
– ರಾತ್ರಿ 7.15ರ ಮಂಗಳೂರು – ದುಬೈ ಇಂಡಿಗೊ
– ರಾತ್ರಿ 8.15ರ ಮಂಗಳೂರು – ದುಬೈ ಏರ್ ಇಂಡಿಯಾ ಎಕ್ಸ್‌ಪ್ರೆಸ್‌
– ರಾತ್ರಿ 8.55ರ ಮಂಗಳೂರು – ಬಹರೇನ್ ಏರ್ ಇಂಡಿಯಾ ಎಕ್ಸ್‌ಪ್ರೆಸ್‌
– ರಾತ್ರಿ 9.05ರ ಮಂಗಳೂರು – ಅಬುಧಾಬಿ ಇಂಡಿಗೊ

ಇರಾನ್‌ ವಾಯು ಮಾರ್ಗದಲ್ಲಿ ವಿಮಾನ ಹಾರಾಟ ನಿಷೇಧ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ. ಗಲ್ಪ್‌ ರಾಷ್ಟ್ರಗಳಿಗೆ ತೆರಳುವ ಎಲ್ಲ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ. ಪ್ರಯಾಣಿಕರಿಗೆ ಮಾಹಿತಿ ನೀಡಿದ್ದು, ಹೆಚ್ಚಿನ ವಿವರಗಳಿಗಾಗಿ ಸಂಸ್ಥೆಯ ವೆಬ್‌ಸೈಟ್‌ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ: ಸುಪ್ರೀಂ ಲೀಡರ್‌ ಖತಂ – ಇರಾನ್ ಉತ್ತರಾಧಿಕಾರಿ ರೇಸ್‌ನಲ್ಲಿ ಖಮೇನಿ ಪುತ್ರನ ಹೆಸರು

Share This Article