ಟೆಹ್ರಾನ್: ಅಮೆರಿಕ – ಇಸ್ರೇಲ್ ದಾಳಿಯಲ್ಲಿ ಇರಾನ್‌ನ (Iran-US-Israel War) ನೌಕಾಪಡೆಯ ಉಪ ಗುಪ್ತಚರ ಮುಖ್ಯಸ್ಥ ಬೆಹ್ನಾಮ್ ರೆಝಾಯ್ (Behnam Rezaei) ಅವರ ಹತ್ಯೆಯಾಗಿದೆ. ಈ ಬಗ್ಗೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ದೃಢಪಡಿಸಿದೆ.
ಬೆಹ್ನಾಮ್ ರೆಝಾಯ್ ಅವರು ಇರಾನ್‌ನ ಮಿಲಿಟರಿ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಸಮುದ್ರ ಬೆದರಿಕೆಗಳನ್ನು ಮೇಲ್ವಿಚಾರಣೆ ಮಾಡುವ ಮತ್ತು ಪ್ರಾದೇಶಿಕ ಸಮುದ್ರದಾದ್ಯಂತ ಕಾರ್ಯತಂತ್ರದ ಮಾಹಿತಿಯನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ಹಾಗೂ ಗುಪ್ತಚರ ಕಾರ್ಯಾಚರಣೆಗಳನ್ನು ಮುನ್ನಡೆಸಿದ್ದರು. ಇದನ್ನೂ ಓದಿ: ಯುದ್ಧದಿಂದ ಪಾಕಿಸ್ತಾನಕ್ಕೂ ತಟ್ಟಿದ ಬೆಲೆ ಏರಿಕೆ ಬಿಸಿ – ಪೆಟ್ರೋಲ್ 458 ರೂ., ಡೀಸೆಲ್ 520 ರೂ.ಗಳಿಗೆ ಏರಿಕೆ
ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚುತ್ತಿರುವ ನಡುವೆ ಅವರ ಸಾವು ಸಂಭವಿಸಿದೆ. ಇರಾನ್‌ನಲ್ಲಿ ಇಲ್ಲಿವರೆಗೆ ಯುದ್ಧದಿಂದ ಹಿರಿಯ ಅಧಿಕಾರಿಗಳು ಮತ್ತು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ 1,340 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ಸಹ ಇಸ್ರೇಲ್, ಜೋರ್ಡಾನ್, ಇರಾಕ್ ಮತ್ತು ಅಮೆರಿಕದ ಮಿಲಿಟರಿ ಸ್ವತ್ತುಗಳನ್ನು ಹೊಂದಿರುವ ಹಲವಾರು ಗಲ್ಫ್ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸುತ್ತಿದೆ. ಇದರಿಂದಾಗಿ ಸಾವುನೋವುಗಳು, ಮೂಲಸೌಕರ್ಯ ಹಾನಿ ಮತ್ತು ಜಾಗತಿಕ ಮಾರುಕಟ್ಟೆಗಳು ಮತ್ತು ವಿಮಾನ ಯಾನಕ್ಕೆ ತೀವ್ರ ಸಮಸ್ಯೆ ಎದುರಾಗಿದೆ. ಇದನ್ನೂ ಓದಿ: ಫಾರ್ಮಾ ಕಂಪನಿಗಳಿಗೆ ಟ್ರಂಪ್ ಶಾಕ್ – ಬ್ರಾಂಡೆಡ್ ಔಷಧಗಳಿಗೆ 100% ಸುಂಕ

