ಇರಾನ್‌ ನಾವಿಕರ ಶವಗಳನ್ನು ಹೊತ್ತುಕೊಂಡು ಕೊಚ್ಚಿಯಿಂದ ಅರ್ಮೇನಿಯಾಗೆ ವಿಮಾನ ಟೇಕಾಫ್‌

1 Min Read

ಕೊಚ್ಚಿ: ನಾವಿಕರ ಶವವನ್ನು (Iranian sailors) ಹೊತ್ತುಕೊಂಡು ಇರಾನ್ ವ್ಯವಸ್ಥೆ ಮಾಡಿದ ಚಾರ್ಟರ್ಡ್ ವಿಮಾನವು ಶುಕ್ರವಾರ ತಡರಾತ್ರಿ ಕೊಚ್ಚಿಯಿಂದ(Kochi) ಅರ್ಮೇನಿಯಾಗೆ ಹೊರಟಿತು.

ಕಳೆದ ವಾರ ಕೇರಳ ಬಂದರಿನಲ್ಲಿ ಲಂಗರು ಹಾಕಿರುವ ಇರಾನ್ ಯುದ್ಧನೌಕೆ ಐಆರ್‌ಐಎಸ್‌ ಲವನ್‌ನ(IRIS Lavan) ಹೆಚ್ಚಿನ ಸಿಬ್ಬಂದಿಯೂ ಈ ವಿಮಾನದಲ್ಲಿ ತೆರಳಿದ್ದಾರೆ.

ಮಾರ್ಚ್ 4 ರಂದು ಶ್ರೀಲಂಕಾ ಬಳಿ ಅಮೆರಿಕ ತನ್ನ ಜಲಾಂತರ್ಗಾಮಿಯಿಂದ(US Submarine) ಟಾರ್ಪಿಡೊ ಹಾರಿಸಿ ಐಆರ್‌ಐಎಸ್ ದೇನಾವನ್ನು ಮುಳುಗಿಸಿತ್ತು. ದೇನಾದಲ್ಲಿ 32 ಸಿಬ್ಬಂದಿಯನ್ನು ರಕ್ಷಿಸಿದ ಶ್ರೀಲಂಕಾ ನೌಕಾ ಪಡೆ 84 ಇರಾನಿನ ನಾವಿಕರ ಶವವನ್ನು ವಶಕ್ಕೆ ಪಡೆದಿತ್ತು.  ಇದನ್ನೂ ಓದಿ: ರಷ್ಯಾದಿಂದ ಕಚ್ಚಾ ತೈಲ ಖರೀದಿಸುವಂತೆ ಅಮೆರಿಕ ಭಾರತದ ಜೊತೆ ಬೇಡಿಕೊಂಡಿದೆ: ಇರಾನ್‌

 

ಚಾರ್ಟರ್ಡ್‌ ವಿಮಾನ ಮೊದಲು ಕೊಲಂಬೋಗೆ ಲ್ಯಾಂಡ್‌ ಆಗಿತ್ತು. ಅಲ್ಲಿ ಮೃತ ನಾವಿಕರ ಮೃತದೇಹಗಳನ್ನು ಹೊತ್ತು ಕೊಚ್ಚಿಯಲ್ಲಿ ಇಳಿಯಿತು. ಕೊಚ್ಚಿಯಲ್ಲಿದ್ದ ನಾವಿಕರನ್ನು ಹೊತ್ತುಕೊಂಡು ತಡ ರಾತ್ರಿ ಅರ್ಮೇನಿಯಾಗೆ ತೆರಳಿತು. ಲವನ್‌ ಸಿಬ್ಬಂದಿ ಮತ್ತು ದೇನಾದ ನಾವಿಕರ ಶವಗಳನ್ನು ರಸ್ತೆ ಮೂಲಕ ಇರಾನ್‌ಗೆ ಸಾಗಿಸಲಾಗುತ್ತದೆ.

ತಾಂತ್ರಿಕ ಸಮಸ್ಯೆಯ ಕಾರಣದಿಂದ ಐಆರ್‌ಐಎಸ್‌ ಲವನ್‌ ಈಗಲೂ ಕೊಚ್ಚಿ ಬಂದರಿನಲ್ಲೇ ಲಂಗರು ಹಾಕಿದ್ದು ಕೆಲ ಸಿಬ್ಬಂದಿ ಭಾರತದಲ್ಲೇ ಉಳಿದುಕೊಂಡಿದ್ದಾರೆ. ಉಳಿದಿರುವ ಸಿಬ್ಬಂದಿಗೆ ಕೊಚ್ಚಿಯಲ್ಲಿರುವ ನೌಕಾ ಸೌಲಭ್ಯಗಳಲ್ಲಿ ವಸತಿ ಕಲ್ಪಿಸಲಾಗಿದೆ.  ಇದನ್ನೂ ಓದಿ: ನೌಕಾಪಡೆಯ ಬೆಂಗಾವಲಿನೊಂದಿಗೆ ಹಾರ್ಮುಜ್ ಜಲಸಂಧಿ ದಾಟಿ ಭಾರತದತ್ತ ಬರುತ್ತಿದೆ ಎಲ್‌ಪಿಜಿ ಟ್ಯಾಂಕರ್‌

ಮಾರ್ಚ್ 1 ರಂದು ಇರಾನ್‌ ತುರ್ತು ಮನವಿಗೆ ಸ್ಪಂದಿಸಿ  ಯುದ್ಧನೌಕೆಗಳಾದ ಐಆರ್‌ಐಎಸ್ ದೇನಾ, ಐಆರ್‌ಐಎಸ್ ಲವನ್ ಮತ್ತು ಐಆರ್‌ಐಎಸ್ ಬೂಶೆಹರ್‌ಗಳಿಗೆ ದೇಶದ ಬಂದರುಗಳಲ್ಲಿ ಡಾಕ್ ಮಾಡಲು ಭಾರತ ಅನುಮತಿ ನೀಡಿತ್ತು.   ಈ ಪೈಕಿ ಲವನ್ ಭಾರತದ ಕೊಚ್ಚಿಯಲ್ಲಿ ಡಾಕ್‌  ಆಗಿದ್ದರೆ ಉಳಿದ ಎರಡು ಯುದ್ಧ ನೌಕೆಗಳು ಪ್ರಯಾಣ ಬೆಳೆಸಿದ್ದವು.

ಈ ಪೈಕಿ ಐಆರ್‌ಐಎಸ್ ದೇನಾವನ್ನು ಅಮೆರಿಕ ಮುಳುಗಿಸಿದ್ದರೆ ಐಆರ್‌ಐಎಸ್ ಬೂಶೆಹರ್‌ ಶ್ರೀಲಂಕಾದಲ್ಲಿ ಡಾಕ್‌ ಆಗಿದೆ.

Share This Article