ಗದಗ | ಪೊಲೀಸ್‌ ಅಧಿಕಾರಿಯ ಸಹೋದರನ ದರ್ಪ – ಕುಡಿದ ಮತ್ತಲ್ಲಿ ಠಾಣೆಗೆ ನುಗ್ಗಿ ರಂಪಾಟ

Public TV
1 Min Read

ಗದಗ: ಪೊಲೀಸ್‌ ಅಧಿಕಾರಿ (Police Officers) ಸಹೋದರನೋರ್ವ ರಾತ್ರಿ ಕುಡಿದ ಮತ್ತಿನಲ್ಲಿ ಪೊಲೀಸ್ ಠಾಣೆಗೆ ನುಗ್ಗಿ, ಪೊಲೀಸರಿಗೆ ಅವಾಜ್ ಹಾಕಿ, ಕರ್ತವ್ಯಕ್ಕೆ ಅಡ್ಡಿಪಡಿಸಿ ಕಿರಿಕ್ ಮಾಡಿಕೊಂಡ ಘಟನೆ ಬೆಟಗೇರಿ ಪೊಲೀಸ್ ಠಾಣೆಯಲ್ಲಿ (Betageri Police Station) ನಡೆದಿದೆ.

ಪೊಲೀಸ್ ಠಾಣೆಯಲ್ಲಿ ರೌಡಿ ರೀತಿ ವರ್ತಿಸಿದ ಅಕ್ಷತ್ ಹಾಗೂ ಸಹಚರನನ್ನು ಸ್ಥಳಿಯರು ತರಾಟೆಗೆ ತೆಗೆದುಕೊಂಡರು. ಪೊಲೀಸ್‌ ಅಧಿಕಾರಿಯ ಸಹೋದರ ಅಕ್ಷತ್ ಹದ್ದಣ್ಣವರ್‌ನಿಂದ ಈ ಎಲ್ಲಾ ರಂಪಾಟ ನಡೆದಿದೆ. ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಅಕ್ಷತ್ ಹದ್ದಣ್ಣವರ್ ಹಾಗೂ ಸಹಚರನಿಂದ ರಾತ್ರಿಯಿಡೀ ಹೈಡ್ರಾಮಾ ನಡೆದಿದೆ. ಇದನ್ನೂ ಓದಿ: ಆಪರೇಷನ್ ಅಖಾಲ್ | ಭದ್ರತಾ ಸಿಬ್ಬಂದಿ, ಉಗ್ರರ ನಡುವೆ ಗುಂಡಿನ ಚಕಮಕಿ – ಇಬ್ಬರು ಯೋಧರು ಹುತಾತ್ಮ

ಕುಡಿದ ಮತ್ತಿನಲ್ಲಿ ಏಕಾಏಕಿ ಕಾರ್‌ನಲ್ಲಿ ಬಂದು ಪೊಲೀಸ್ ಠಾಣೆಗೆ ನುಗ್ಗಿ, ನಾನು ವಕೀಲ ಯಾರು ಏನು ಮಾಡ್ತಿರಿ ಎಂದು ಠಾಣೆಯ ಬಳಿಯಿದ್ದ ಸ್ಥಳಿಯರೊಂದಿಗೆ ಗಲಾಟೆ ಮಾಡಿಕೊಂಡಿದ್ದ. ಸಿಪಿಐ, ಪಿಎಸ್‌ಐ ವಾಹನ ನಿಲ್ಲಿಸುವ ಸ್ಥಳದಲ್ಲಿ ಅಕ್ಷತ್ ತನ್ನ ಕಾರ್ ಪಾರ್ಕಿಂಗ್ ಮಾಡಿದ್ದ. ಅಧಿಕಾರಿಗಳ ಕಾರು ನಿಲ್ಲಿಸಲು ಸ್ಥಳವಿಲ್ಲದ ಕಾರಣ ಠಾಣೆಯ ಹೊರಗೆ ರಸ್ತೆ ಬದಿ ನಿಲ್ಲಿಸಿದ್ದರು. ಬೆಟಗೇರಿ ಪೊಲೀಸ್ ಠಾಣೆ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಏಕವಚನ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಆರೋಪವಿದೆ. ಇದನ್ನೂ ಓದಿ: ಬುದ್ಧಿಮಾಂದ್ಯ ಯುವತಿ ಮೇಲೆ ಗ್ಯಾಂಗ್ ರೇಪ್ – ವೀಡಿಯೋ ಮಾಡಿ ಯುವತಿಯ ಸಹೋದರನಿಗೆ ಕಳುಹಿಸಿದ ಕೀಚಕರು

ಇಷ್ಟೆಲ್ಲಾ ನಡೆದರೂ ಪೊಲೀಸರು ಕೇವಲ ಡ್ರಿಂಕ್ & ಡ್ರೈವ್ ಟೆಸ್ಟ್ ಮಾಡಿ ಕಳುಹಿಸಿದ್ರಾ? ಅಕಸ್ಮಾತ್ ಜನಸಾಮಾನ್ಯರು ಹೀಗೆ ಮಾಡಿದ್ರೆ ಪೊಲೀಸರು ಸುಮ್ಮನೆ ಬಿಡ್ತಿದ್ರಾ? ಅಧಿಕಾರಿ ಸಹೋದರನಿಗೆ ಒಂದು ನ್ಯಾಯ, ಜನ ಸಾಮಾನ್ಯರಿಗೊಂದು ಕಾನೂನಾ? ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ರೂ ಪೊಲೀಸರು ಸುಮ್ಮನಿರೋದಾದ್ರೂ ಯಾಕೆ? ಐಪಿಎಸ್ ಅಧಿಕಾರಿ ಸಹೋದರನ ಆಟಾಟೋಪ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article