IPL 2023: ಮಾಸ್ ಲುಕ್‌ನಲ್ಲಿ ಹಾಲಿ ಚಾಂಪಿಯನ್ಸ್ – ಮುಂಬೈ, ಟೈಟಾನ್ಸ್ ಹೊಸ ಜೆರ್ಸಿ ಅನಾವರಣ

Public TV
2 Min Read

ಮುಂಬೈ: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇದೇ ಮಾರ್ಚ್ 31 ರಿಂದ ಆರಂಭವಾಗುತ್ತಿದ್ದು, ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ (Gujarat Titans) ಹಾಗೂ 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಮುಂಬೈ ಇಂಡಿಯನ್ಸ್ (Mumbai Indians) ತಂಡಗಳು ಹೊಸ ಜೆರ್ಸಿ ಅನಾವರಣಗೊಳಿಸಿವೆ.

ಮೊದಲ ಪಂದ್ಯದಲ್ಲೇ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಲಿರುವ ಗುಜರಾತ್ ಟೈಟಾನ್ಸ್ ಮಾಸ್ ಲುಕ್‌ನಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ತನ್ನ 2ನೇ ಆವೃತ್ತಿಯಲ್ಲೆ ಜೆರ್ಸೆಯ ಲುಕ್ ಬದಲಿಸಿರುವ ಹಾರ್ದಿಕ್ ಪಾಂಡ್ಯ (Hardik Pandya) ಹೊಸ ಅವತಾರದಲ್ಲಿ ಕಣಕ್ಕಿಳಿಯಲಿದೆ. ಇದನ್ನೂ ಓದಿ: ಕೊನೆಯ ಓವರ್‌ನಲ್ಲಿ ಮಿಲ್ಲರ್‌ ಹ್ಯಾಟ್ರಿಕ್‌ ಸಿಕ್ಸ್‌ – ಫೈನಲ್‌ಗೆ ಗುಜರಾತ್‌ ಎಂಟ್ರಿ

ಗಾಢ ನೀಲಿ ಮತ್ತು ತಿಳಿ ನೀಲಿ ಮಿಶ್ರಿತ ಸಮವಸ್ತ್ರದ ವಿನ್ಯಾಸದಲ್ಲಿ ಕೊಂಚ ಬದಲಾವಣೆಗಳನ್ನು ಮಾಡಲಾಗಿದ್ದು, ಅಲ್ಲಲ್ಲಿ ಗೋಲ್ಡನ್ ಕಲರ್‌ಗೆ ಮಣೆಹಾಕಲಾಗಿದೆ. ಕಾಲರ್ ವಿನ್ಯಾಸ ಕೂಡ ಬದಲಾಗಿದೆ. ಇದು ಗೆಲುವಿಗೆ ಮತ್ತಷ್ಟು ಹುಮ್ಮಸ್ಸು ತರಲಿದೆ. ಈ ಕುರಿತ ವೀಡಿಯೋ ತುಣುಕು ಹಾಗೂ ಹೊಸ ಜೆರ್ಸಿಯನ್ನು ಟೈಟಾನ್ಸ್ ತಂಡ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ: ಗುಜರಾತ್ ಗುನ್ನಕ್ಕೆ ಚೆನ್ನೈ ಚಿಂದಿ –  ಟೈಟಾನ್ಸ್‌ಗೆ 7 ವಿಕೆಟ್‌ಗಳ ಜಯ

IPL2022 GT VS RR HARDIK AND MILLAR

2022ರ 15ನೇ ಆವೃತ್ತಿಯಲ್ಲಿ ಐಪಿಎಲ್‌ಗೆ ಎಂಟ್ರಿ ಕೊಟ್ಟ ಟೈಟಾನ್ಸ್ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟಕ್ಕೇರಿತು. ಲೀಗ್ ಹಂತದ 14 ಪಂದ್ಯಗಳಲ್ಲಿ 10 ರಲ್ಲಿ ಜಯ ಸಾಧಿಸಿತು. ಬಳಿಕ ನಾಕೌಟ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟಕೇರಿತು.

ಭರ್ಜರಿ ತಾಲೀಮು: ಆಸ್ಟ್ರೇಲಿಯಾ ಟೆಸ್ಟ್ ನಿಂದ ಹೊರಗುಳಿಸಿರುವ ಹಾರ್ದಿಕ್ ಪಾಂಡ್ಯ ಟೈಟಾನ್ಸ್ ತಂಡದೊಂದಿಗೆ ಸೇರಿಕೊಂಡು ಬಿಡುವಿನ ಸಮಯದಲ್ಲಿ ಭರ್ಜರಿ ತಾಲೀಮು ನಡೆಸುತ್ತಿದ್ದಾರೆ. ಟೂರ್ನಿ ಆರಂಭಕ್ಕೆ ಒಂದು ತಿಂಗಳು ಮೊದಲೇ ಲಭ್ಯವಿರುವ ಆಟಗಾರರನ್ನು ಒಗ್ಗೂಡಿಸಿ ಗುಜರಾತ್ ಟೈಟಾನ್ಸ್ ತಂಡ ಅಭ್ಯಾಸ ನಡೆಸುತ್ತಿದ್ದಾರೆ.

ರೋಹಿತ್‌ ಶರ್ಮಾ (Rohit Sharma) ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಕೂಡ ಹೊಸ ಲುಕ್ ಜೆರ್ಸಿಯನ್ನು ಅನಾವರಣಗೊಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *