IPL Retention | ಲಕ್ನೋದಿಂದ ರಾಹುಲ್‌ ಔಟ್‌ – ಪೂರನ್‌, ರಾಕೆಟ್‌ ವೇಗಿ ಮಯಾಂಕ್‌ಗೆ ಬಂಪರ್‌ ಗಿಫ್ಟ್‌

Public TV
2 Min Read

ಲಕ್ನೋ: ಐಪಿಎಲ್‌ ಪ್ರವೇಶಿಸಿದ ಮೊದಲ ಎರಡು ಆವೃತ್ತಿಗಳಲ್ಲಿ ತಂಡವನ್ನು ಪ್ಲೇ ಆಫ್ಸ್‌ಗೆ ಕೊಂಡೊಯ್ದಿದ್ದ ನಾಯಕ ಕೆ.ಎಲ್‌ ರಾಹುಲ್‌ (KL Rahul) ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ಫ್ರಾಂಚೈಸಿ ರಿಲೀಸ್‌ ಮಾಡಿದೆ. ಈ ಬೆನ್ನಲ್ಲೇ ಸ್ಫೋಟಕ ಬ್ಯಾಟರ್‌ ನಿಕೋಲಸ್‌ ಪೂರನ್‌ ಅವರಿಗೆ ದುಬಾರಿ ಸಂಭಾವನೆ ನೀಡಿ ತಂಡದಲ್ಲೇ ಉಳಿಸಿಕೊಂಡಿದೆ.

ಓರ್ವ ವಿದೇಶಿ ಆಟಗಾರ ಸೇರಿದಂತೆ 5 ಐವರನ್ನು ಉಳಿಸಿಕೊಂಡಿರುವ ಲಕ್ನೋ ಫ್ರಾಂಚೈಸಿ ಒಂದು ಆರ್‌ಟಿಎಂ ಕಾರ್ಡ್‌ ಬಾಕಿ ಉಳಿಸಿಕೊಂಡಿದೆ. ಇದನ್ನೂ ಓದಿ: IPL Retention | 2025ರ ಐಪಿಎಲ್‌ಗೆ ಲೆಜೆಂಡ್‌ ಮಹಿ ಫಿಕ್ಸ್‌ – ರುತುರಾಜ್‌, ಜಡ್ಡುಗೆ ಬಂಪರ್‌

ಲಕ್ನೋ ತಂಡದಲ್ಲಿ ಉಳಿದವರ‍್ಯಾರು?
* ನಿಕೋಲಸ್‌ ಪೂರನ್‌ – 21 ಕೋಟಿ ರೂ.
* ರವಿ ಬಿಷ್ಣೋಯಿ – 11 ಕೋಟಿ ರೂ.
* ಮಯಾಂಕ್‌ ಯಾದವ್‌ – 11 ಕೋಟಿ ರೂ.
* ಮೊಹ್ಶಿನ್‌ ಖಾನ್‌ – 4 ಕೋಟಿ ರೂ.
* ಆಯುಶ್‌ ಬದೋನಿ – 4 ಕೋಟಿ ರೂ.

ಪೂರನ್‌ ಮುಂದಿನ ಕ್ಯಾಪ್ಟನ್‌?
29 ವರ್ಷದ ನಿಕೋಲಸ್‌ ಪೂರನ್‌ (Nicholas Pooran) 2017ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ 30 ಲಕ್ಷಕ್ಕೆ ಬಿಕರಿಯಾಗಿದ್ದರು. ಆ ಬಳಿಕ 2019ರ ಹರಾಜಿನಲ್ಲಿ ಪಂಜಾಬ್‌ ಕಿಂಗ್ಸ್‌ ಅವರನ್ನ 4.2 ಕೋಟಿ ರೂ.ಗೆ ಖರೀದಿ ಮಾಡಿತ್ತು. ಆದ್ರೆ 2022ರ ಮೆಗಾ ಹರಾಜಿನಲ್ಲಿ 10.72 ಕೋಟಿ ರೂ.ಗೆ ಪೂರನ್‌ ಅವರನ್ನು ಖರೀದಿ ಮಾಡಿದ್ದ ಸನ್‌ ರೈಸರ್ಸ್‌ ಹೈದರಾಬಾದ್‌ ಫ್ರಾಂಚೈಸಿ 2023ರಲ್ಲಿ ತಂಡದಿಂದ ರಿಲೀಸ್‌ ಮಾಡಿತು. ನಂತರ ಲಕ್ನೋ ಫ್ರಾಂಚೈಸಿ 16 ಕೋಟಿ ರೂ.ಗೆ ಪೂರನ್‌ ಅವರನ್ನ ಖರೀದಿ ಮಾಡಿತು. ಇದೀಗ 2025ರ ಆವೃತ್ತಿಗೆ 21 ಕೋಟಿ ರೂ.ಗಳಿಗೆ ರೀಟೆನ್‌ ಮಾಡಿಕೊಂಡಿದೆ. ಇದೀಗ ರಾಹುಲ್‌ ಅವರನ್ನು ಬಿಡುಗಡೆಗೊಳಿಸಿದ್ದು, ಪೂರನ್‌ ತಂಡದ ನಾಯಕನಾಗಲಿದ್ದಾರೆ ಎಂದು ತಿಳಿದುಬಂದಿದೆ. 2019 ರಿಂದ 2024ರ ವರೆಗೆ 76 ಪಂದ್ಯಗಳನ್ನಾಡಿರುವ ನಿಕೋಲಸ್‌ ಪೂರನ್‌, 1,769 ರನ್‌ ಗಳಿಸಿದ್ದಾರೆ. ಇದರಲ್ಲಿ 9 ಅರ್ಧಶತಕ, 113 ಬೌಂಡರಿ, 127 ಭರ್ಜರಿ ಸಿಕ್ಸರ್‌ಗಳೂ ಸೇರಿವೆ.

2025 ರಿಂದ 2027ರ ಐಪಿಎಲ್‌ ಆವೃತ್ತಿಗಳಿಗೆ ಹೊಸ ನಿಯಮ ಘೋಷಣೆ ಮಾಡಿರುವ ಬಿಸಿಸಿಐ, ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಮೆಗಾ ಹರಾಜು ನಡೆಸಲು ತೀರ್ಮಾನಿಸಿದೆ. ಇದನ್ನೂ ಓದಿ: IPL Retention | ರಿಷಬ್‌ ಪಂತ್‌ ಸೇರಿ ಸ್ಟಾರ್‌ ಆಟಗಾರರೇ ಔಟ್‌ – ಆಲ್‌ರೌಂಡರ್‌ಗೆ ಮಣೆ ಹಾಕಿದ ಡೆಲ್ಲಿ

Share This Article