ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಸೋದೇಕೆ ಗೊತ್ತಾ – ಚಿಯರ್‌ ಗರ್ಲ್ಸ್‌ ಸಂಭಾವನೆ ಕೇಳಿದ್ರೆ ಶಾಕ್‌ ಆಗ್ತೀರಾ

Public TV
2 Min Read

ಕೋಲ್ಕತ್ತಾ: 3 ವರ್ಷಗಳ ಬಳಿಕ ಅದ್ಧೂರಿ ಐಪಿಎಲ್‌ (IPL 2023) ಆವೃತ್ತಿ ಆರಂಭಗೊಂಡಿದ್ದು, ಅಭಿಮಾನಿಗಳಲ್ಲಿ ದಿನದಿಂದ ದಿನಕ್ಕೆ ಸಂಭ್ರಮ ಹೆಚ್ಚಾಗಿದೆ. ಪ್ರತಿ ಪಂದ್ಯದಲ್ಲೂ ಕ್ರಿಕೆಟಿಗರು ಒಂದಿಲ್ಲೊಂದು ದಾಖಲೆ ಬರೆಯುತ್ತಿದ್ದು, ಐತಿಹಾಸಿಕ ಗೆಲುವಿನ ದಾಖಲೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬ್ಯಾಟರ್‌ಗಳು ಗ್ರೌಂಡ್‌ನಲ್ಲಿ ನಿಂತು ಸಿಕ್ಸರ್‌, ಬೌಂಡರಿ ಅಬ್ಬರಿಸುತ್ತಿದ್ದರೆ, ಇತ್ತ‌ ವಿಶೇಷ ವೇದಿಕೆಯಲ್ಲಿ ಮಿರಿಮಿರಿ ಮಿಂಚುವ ಉಡುಗೆಯಲ್ಲಿ ಹೆಜ್ಜೆ ಹಾಕುತ್ತಾ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿದ್ದಾರೆ ಚಿಯರ್‌ ಗರ್ಲ್ಸ್‌ (Cheer Girls) ಅಥವಾ ಚಿಯರ್‌ ಲೀಡರ್ಸ್‌.

ಕಳೆದ 3 ವರ್ಷಗಳಿಂದ ಐಪಿಎಲ್‌ ನಡೆದರೂ ಕೋವಿಡ್‌ ಕಾರಣದಿಂದಾಗಿ ಚಿಯರ್‌ಗರ್ಲ್ಸ್‌ ತಂಡಕ್ಕೆ ಕಡಿವಾಣ ಹಾಕಲಾಗಿತ್ತು. ಇದರಿಂದ ಪ್ರೇಕ್ಷಕರ ಕೊರತೆ ಎದುರಾಗಿತ್ತು. ಆದರೀಗ ಅದ್ಧೂರಿ ಐಪಿಎಲ್ ‌ಆವೃತ್ತಿಯಲ್ಲಿ ಚಿಯರ್‌ ಗರ್ಲ್ಸ್‌ ಕಮಾಲ್‌ ಜೋರಾಗಿಯೇ ನಡೆದಿದೆ. ಕಡಿಮೆ ಬಟ್ಟೆ, ಹುರುಪಿನ ಕುಣಿತ ಮುಂತಾದವುಗಳಿಂದ ಪ್ರೇಕ್ಷಕರನ್ನ ತಮ್ಮತ್ತ ಸೆಳೆಯುತ್ತಿದ್ದಾರೆ. ಎಷ್ಟೋ ಕ್ರಿಕೆಟ್‌ ಅಭಿಮಾನಿಗಳು ಐಪಿಎಲ್ ಕ್ರೀಡಾಂಗಣದಲ್ಲಿ ಇವರ ಕುಣಿತ ನೋಡಲೆಂದೇ ನೆರೆಯುತ್ತಿದ್ದಾರೆ. ಆದರೆ ಈ ಚಿಯರ್‌ ಗರ್ಲ್ಸ್‌ಗಳಿಗೆ ನೀಡುವ ಸಂಭಾವನೆ ಕಡಿಮೆಯೇನಿಲ್ಲ ಬಿಡಿ. ಇದನ್ನೂ ಓದಿ: IPL 2023 – ಚಿಯರ್‌ ಗರ್ಲ್ಸ್‌ ಝಲಕ್‌ ನೋಡಿ

ಹಿಂದೆಲ್ಲ ಚಿಯರ್‌ ಲೀಡರ್ಸ್‌ ತಂಡದಲ್ಲಿ ವಿದೇಶಿಗರೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಪ್ರತಿ ಪಂದ್ಯಕ್ಕೆ ಸುಮಾರು 3 ಸಾವಿರ ರೂ. ನೀಡಲಾಗುತ್ತಿತ್ತು. ಈಗ ಭಾರತೀಯರೂ ಕಾಣಿಸಿಕೊಳ್ಳುತ್ತಿದ್ದು, ದುಬಾರಿ ಬೆಲೆ ಪಾವತಿಸಬೇಕಿದೆ. ಇದನ್ನೂ ಓದಿ: IPL 2023: ಬ್ಯೂಸಿ ಶೆಡ್ಯೂಲ್‌ನಲ್ಲೂ ತವರಿನಲ್ಲಿ ಐಪಿಎಲ್ ವೀಕ್ಷಿಸಿದ ಬಾಲಿವುಡ್ ಬಾದ್ ಷಾ

ಚಿಯರ್‌ ಗರ್ಲ್ಸ್‌ಗೆ ಸಂಭಾವನೆ ಎಷ್ಟು?
ಚೀಯರ್‌ ಗರ್ಲ್ಸ್‌ 16ನೇ ಐಪಿಎಲ್‌ ಆವೃತ್ತಿಯಲ್ಲಿ 14 ರಿಂದ 17 ಸಾವಿರ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಚೆನ್ನೈ ಸೂಪರ್‌ ಕಿಂಗ್ಸ್‌ (CSK), ಕಿಂಗ್ಸ್‌ ಪಂಜಾಬ್‌ (PBKS), ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals), ಸನ್‌ ರೈಸರ್ಸ್‌ ಹೈದರಾಬಾದ್‌ ತಂಡಗಳು ತಮ್ಮ ಚಿಯರ್‌ ಗರ್ಲ್ಸ್‌ಗೆ ಪ್ರತಿ ಪಂದ್ಯಕ್ಕೆ 12 ಸಾವಿರ ರೂ. ಪಾವತಿಸಿದರೆ, ಮುಂಬೈ ಇಂಡಿಯನ್ಸ್‌ ಹಾಗೂ ಆರ್‌ಸಿಬಿ ತಂಡಗಳು ಸುಮಾರು 20 ಸಾವಿರ ರೂ. ಪಾವತಿಸುತ್ತಾರೆ. ಆದ್ರೆ ಕೆಕೆರ್‌ ತಂಡವು 24 ಸಾವಿರ ರೂ. ಪಾವತಿಸುತ್ತಿದ್ದು, ಅತಿಹೆಚ್ಚು ಸಂಭಾವನೆ ಪಾವತಿಸುವ ತಂಡವಾಗಿದೆ. ಪ್ರತಿ ತಂಡ ಲೀಗ್‌ನಲ್ಲಿ 14 ಪಂದ್ಯಗಳನ್ನು ಆಡುವುದರಿಂದ ಚಿಯರ್‌ ಗರ್ಲ್ಸ್‌ ಒಬ್ಬರಿಗೇ ಸುಮಾರು 2 ರಿಂದ 5 ಲಕ್ಷದಷ್ಟು ಹಣ ಪಾವತಿಸಬೇಕಾಗುತ್ತೆ. ಅಷ್ಟೇ ಅಲ್ಲದೇ ಭರ್ಜರಿ ಡಾನ್ಸ್‌ ಪ್ರದರ್ಶನ ನೀಡಿದವರಿಗೆ ಬೋನಸ್‌ ನೀಡಲಾಗುತ್ತೆ. ಜೊತೆಗೆ ಗೆದ್ದ ತಂಡಗಳಿಂದ ಐಷಾರಾಮಿ ಉಡುಗೊರೆಗಳೂ ಸಿಗುತ್ತೆ ಎಂದು ಆಪ್ತ ಮೂಲಗಳು ತಿಳಿಸಿವೆ.

ಚಿಯರ್‌ ಗರ್ಲ್ಸ್‌ ಆಯ್ಕೆ ಹೇಗೆ?
ಸಾಮಾನ್ಯವಾಗಿ ಚಿಯರ್‌ ಗರ್ಲ್ಸ್‌ ಆಗಿ ಆಯ್ಕೆಯಾಗುವುದು ಅಷ್ಟು ಸುಲಭವಲ್ಲ. ಅದಕ್ಕೆ ಪ್ರತ್ಯೇಕ ಸಂದರ್ಶನಗಳನ್ನ ನಡೆಸಿ, ಮೌಲ್ಯಮಾಪನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಚಿಯರ್‌ ಗರ್ಲ್ಸ್‌ ಆಗಬೇಕೆನ್ನುವವರು ನೃತ್ಯ, ಮಾಡೆಲಿಂಗ್‌ ಜೊತೆಗೆ ಬಾರೀ ಪ್ರೇಕ್ಷಕರ ಮುಂದೆ ಡಾನ್ಸ್‌ ಮಾಡಿದ ಅನುಭವ ಹೊಂದಿರಬೇಕಾಗುತ್ತದೆ.

Share This Article