89 ಸಾವಿರ ಕೋಟಿ ತಲುಪಿತು ಐಪಿಎಲ್‌ ಬ್ರ್ಯಾಂಡ್‌ ಮೌಲ್ಯ- ಯಾವ ತಂಡದ್ದು ಎಷ್ಟು?

Public TV
2 Min Read

ಮುಂಬೈ: ವಿಶ್ವ ಕ್ರಿಕೆಟ್‌ನಲ್ಲಿ ಸದ್ದು ಮಾಡಿ ಸುದ್ದಿಯಾಗಿರುವ ಐಪಿಎಲ್‌ ಬ್ರ್ಯಾಂಡ್‌ ಮೌಲ್ಯ (IPL Brand Value) ಭಾರೀ ಏರಿಕೆಯಾಗಿದೆ. 2023ರ ಆವೃತ್ತಿಯ ನಂತರ 23% ಏರಿಕೆಯಾಗಿ ಈಗ 10.7 ಶತಕೋಟಿ ಡಾಲರ್‌ಗೆ (ಅಂದಾಜು 89,232 ಕೋಟಿ ರೂ.) ಏರಿಕೆಯಾಗಿದೆ.

ಬ್ರ್ಯಾಂಡ್‌ ಕನ್ಸಲ್ಟೆನ್ಸಿ ಕಂಪನಿ ಬ್ರ್ಯಾಂಡ್‌ ಫೈನಾನ್ಸ್‌ ವರದಿ ಪ್ರಕಾರ 2008ರಲ್ಲಿ ಐಪಿಎಲ್‌ ಆರಂಭಗೊಂಡ ಬಳಿಕ ಅದರ ಮೌಲ್ಯ 433% ಏರಿಕೆಯಾಗಿದೆ.

ಸ್ಟೇಡಿಯಂ ಸಾಮರ್ಥ್ಯ, ಇಂಟರ್‌ನೆಟ್‌ನಲ್ಲಿ ಐಪಿಎಲ್‌ ವೀಕ್ಷಣೆ, ತಂಡಗಳ ಮೀಡಿಯಾ ಪ್ರಾಯೋಜಕತ್ವ ಇತ್ಯಾದಿ ವಿಚಾರಗಳನ್ನು ಅಧ್ಯಯನ ಮಾಡಿ ಬ್ರ್ಯಾಂಡ್‌ ಮೌಲ್ಯಮಾಪನ ಮಾಡಲಾಗಿದೆ.

ತಂಡಗಳ ಪೈಕಿ ಮುಂಬೈ ಇಂಡಿಯನ್ಸ್‌ (MI) ಮೊದಲ ಸ್ಥಾನದಲ್ಲಿದ್ದರೆ, ಚೆನ್ನೈ ಸೂಪರ್‌ ಕಿಂಗ್ಸ್‌ (CSK) ಎರಡನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್‌ ಮೌಲ್ಯ 87 ದಶಲಕ್ಷ ಡಾಲರ್‌ (725 ಕೋಟಿ ರೂ.), ಚೆನ್ನೈ ಸೂಪರ್‌ ಕಿಂಗ್ಸ್‌ 81 ದಶಲಕ್ಷ ಡಾಲರ್‌ (674 ಕೋಟಿ ರೂ.) ಇದೆ.

ಕೋಲ್ಕತ್ತಾ ನೈಟ್‌ ರೈಡರ್ಸ್‌ (KKR) 78.6 ದಶಲಕ್ಷ ಡಾಲರ್‌ (ಅಂದಾಜು 655 ಕೋಟಿ ರೂ.) ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) 69.8 ದಶಲಕ್ಷ ಡಾಲರ್‌ (581 ಕೋಟಿ ರೂ.) ಬ್ರ್ಯಾಂಡ್‌ ಮೌಲ್ಯವನ್ನು ಹೊಂದಿದೆ.

ಮಹಿಳಾ ಪ್ರೀಮಿಯರ್‌ ಲೀಗ್‌ (WPL) ಪರಿಚಯಿಸಿದ ನಂತರ ತಂಡಗಳ ಜೊತೆ ಐಪಿಎಲ್‌ ಬ್ರ್ಯಾಂಡ್‌ ಮೌಲ್ಯ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.  ಇದನ್ನೂ ಓದಿ: ಅರ್ಜುನ ಪ್ರಶಸ್ತಿಗೆ ಶಮಿ ಹೆಸರು ಶಿಫಾರಸು

ಯಾವ ತಂಡ ಮೌಲ್ಯ ಎಷ್ಟು?
1. ಮುಂಬೈ ಇಂಡಿಯನ್ಸ್‌ – 725 ಕೋಟಿ ರೂ.
2. ಚೆನ್ನೈ ಸೂಪರ್‌ ಕಿಂಗ್ಸ್‌ – 674 ಕೋಟಿ ರೂ.
3. ಕೋಲ್ಕತ್ತಾ ನೈಟ್‌ ರೈಡರ್ಸ್‌ – 655 ಕೋಟಿ ರೂ.
4. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು – 581 ಕೋಟಿ ರೂ.
5. ಗುಜರಾತ್‌ ಟೈಟಾನ್ಸ್‌ – 545 ಕೋಟಿ ರೂ.
6. ಡೆಲ್ಲಿ ಕ್ಯಾಪಿಟಲ್ಸ್‌ – 534 ಕೋಟಿ ರೂ.
7. ರಾಜಸ್ಥಾನ ರಾಯಲ್ಸ್‌ – 520 ಕೋಟಿ ರೂ.
8 ಸನ್‌ರೈಸರ್ಸ್‌ ಹೈದರಾಬಾದ್‌- 401 ಕೋಟಿ ರೂ.
9. ಲಕ್ನೋ ಸೂಪರ್‌ ಜೈಂಟ್ಸ್‌ – 392 ಕೋಟಿ ರೂ.
10. ಪಂಜಾಬ್‌ ಕಿಂಗ್ಸ್‌ – 377 ಕೋಟಿ ರೂ.

 

Share This Article