IPL Auction 2023: ಸ್ಯಾಮ್, ಗ್ರೀನ್, ಬೆನ್ ಮೇಲೆ ಫ್ರಾಂಚೈಸ್ ಕಣ್ಣು – ಕನ್ನಡಿಗರಿಗೂ ಹೆಚ್ಚಿದ ಡಿಮ್ಯಾಂಡ್

Public TV
3 Min Read

ತಿರುವನಂತಪುರಂ: ಐಪಿಎಲ್‍ ಮಿನಿ ಹರಾಜು (IPL Mini Auction)  ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಕೊಚ್ಚಿಯಲ್ಲಿ 2023ರ ಐಪಿಎಲ್‍ಗೂ ಮುನ್ನ ಆಟಗಾರರ ಹರಾಜು ನಡೆಯಲಿದ್ದು, ಎಲ್ಲಾ ಫ್ರಾಂಚೈಸ್‍ಗಳ ಕಣ್ಣು ಆಲ್‍ರೌಂಡರ್‌ಗಳಾದ ಬೆನ್ ಸ್ಟೋಕ್ಸ್ (Ben Stokes), ಸ್ಯಾಮ್ ಕರ್ರನ್ (SamCurran) ಮತ್ತು ಕ್ಯಾಮರೂನ್ ಗ್ರೀನ್ (Cameron Green) ಮೇಲಿದೆ. ಈ ಮೂವರನ್ನು ಖರೀದಿಸಲು ಫ್ರಾಂಚೈಸ್‍ಗಳು ಮುಗಿ ಬೀಳುವ ಸಾಧ್ಯತೆ ಹೆಚ್ಚಿದೆ.

ಈಗಾಗಲೇ ಈ ಮೂವರ ಖರೀದಿಗೆ 10 ಫ್ರಾಂಚೈಸ್‍ಗಳು ಪೈಪೋಟಿ ನೀಡಲು ಸಿದ್ಧತೆ ಆರಂಭಿಸಿವೆ. ಇಂದಿನ ಮಿನಿ ಹರಾಜಿನಲ್ಲಿ ಈ ಮೂವರು ಟ್ರಂಪ್‍ಕಾರ್ಡ್ ಆಗಿದ್ದು, ಕೋಟಿ, ಕೋಟಿ ರೂ.ಗೆ ಬಿಕರಿ ಆಗುವ ಎಲ್ಲಾ ಸಾಧ್ಯತೆಗಳಿವೆ. ಈ ಮೂವರಿಗೂ 2 ಕೋಟಿ ರೂ. ಮೂಲ ಬೆಲೆ ನಿಗದಿಪಡಿಸಲಾಗಿದೆ. ಇವರೊಂದಿಗೆ ಕರ್ನಾಟಕದ ಇಬ್ಬರು ಆಟಗಾರರು ಈ ಬಾರಿ ಹೆಚ್ಚಿನ ಮೊತ್ತಕ್ಕೆ ಬಿಡ್ ಆಗುವ ಭರವಸೆ ಮೂಡಿಸಿದ್ದಾರೆ. ಕನ್ನಡಿಗರ ಪೈಕಿ ಮಯಾಂಕ್ ಅಗರ್ವಾಲ್‌ ಮತ್ತು ಮನೀಶ್ ಪಾಂಡೆ ಬೇಡಿಕೆಯ ಆಟಗಾರರಾಗಿ ಗುರುತಿಸಿಕೊಂಡಿದ್ದು, ಇವರಿಬ್ಬರೂ ಮೇಲು ಹಲವು ಫ್ರಾಂಚೈಸ್‍ಗಳು ಒಂದು ಕಣ್ಣಿಟ್ಟಿದೆ. ಇದನ್ನೂ ಓದಿ: ಐಪಿಎಲ್ ಮಿನಿ ಹರಾಜು ಹೈಲೈಟ್ಸ್ – ಸುತ್ತಿಗೆಯ ಹೊಡೆತಕ್ಕೆ ಕಾಯುತ್ತಿದ್ದಾನೆ 15ರ ಬಾಲಕ

ಹರಾಜಿನಲ್ಲಿ ಈಗಾಗಲೇ 405 ಆಟಗಾರರ ಅಂತಿಮ ಪಟ್ಟಿ ಸಿದ್ಧಗೊಂಡಿದೆ. ಈ ಪಟ್ಟಿಯಲ್ಲಿ 273 ಭಾರತೀಯ ಆಟಗಾರರು ಕಾಣಿಸಿಕೊಂಡರೆ, 132 ಮಂದಿ ವಿದೇಶಿ ಅಟಗಾರರು ಸೇರಿದ್ದಾರೆ. ಒಟ್ಟು 991 ಆಟಗಾರರು ಹೆಸರನ್ನು ನೋಂದಾಯಿಸಿಕೊಂಡಿದ್ದರು. ಆ ಬಳಿಕ 10 ಫ್ರಾಂಚೈಸ್‍ಗಳ ಜೊತೆ ಚರ್ಚಿಸಿ ಅಂತಿಮವಾಗಿ 369 ಆಟಗಾರರ ಪಟ್ಟಿ ಸಿದ್ಧಗೊಂಡಿತು. ನಂತರ 36 ಆಟಗಾರರ ಹೆಚ್ಚುವರಿ ಸೇರ್ಪಡೆಯೊಂದಿಗೆ ಒಟ್ಟು 405 ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂದು ಮಧ್ಯಾಹ್ನ 2:30 ರಿಂದ ಹರಾಜು ಪ್ರಕ್ರಿಯೆ ಆರಂಭಗೊಳ್ಳಲಿದೆ. ಇದನ್ನೂ ಓದಿ: ರೋಹಿತ್‍ಗೆ ಗೇಟ್‍ ಪಾಸ್ – ಪಾಂಡ್ಯ ಸೀಮಿತ ಓವರ್‌ಗಳ ನಾಯಕ?

IPL

ಯಾವ ತಂಡದಲ್ಲಿ ಎಷ್ಟು ಹಣ ಬಾಕಿ:
ಸನ್‍ರೈಸರ್ಸ್ ಹೈದರಾಬಾದ್ (SRH) – 42.25 ಕೋಟಿ ರೂ. ಬಾಕಿ ಇದ್ದು 4 ವಿದೇಶಿ ಆಟಗಾರರು ಸಹಿತ 13 ಆಟಗಾರರನ್ನು ಖರೀದಿಸಬಹುದು.
ಚೆನ್ನೈ ಸೂಪರ್ ಕಿಂಗ್ಸ್ (CSK) – 20.45 ಕೋಟಿ ರೂ. ಬಾಕಿ ಇದ್ದು, 2 ವಿದೇಶಿ ಸಹಿತ 7 ಆಟಗಾರರನ್ನು ಖರೀದಿ ಮಾಡಬಹುದು.

ಡೆಲ್ಲಿ ಕಾಪಿಟಲ್ಸ್ (DC) – 19.45 ಕೋಟಿ ರೂ. ಬಾಕಿ ಇದ್ದು, 2 ವಿದೇಶಿ ಸಹಿತ 5 ಆಟಗಾರ ಖರೀದಿಗೆ ಅವಕಾಶವಿದೆ.
ಗುಜರಾತ್ ಟೈಟಾನ್ಸ್ (GT) – 19.25 ಕೋಟಿ ರೂ. ಬಾಕಿ ಇದ್ದು, 3 ವಿದೇಶಿ ಸಹಿತ 7 ಆಟಗಾರನ್ನು ಈ ಬಾರಿ ಖರೀದಿ ಮಾಡಬಹುದು.

ಕೋಲ್ಕತ್ತಾ ನೈಟ್ ರೈಡರ್ಸ್ (KKR) – 7.05 ಕೋಟಿ ರೂ. ಬಾಕಿ ಇದ್ದು, 3 ವಿದೇಶಿ ಸಹಿತ 11 ಆಟಗಾರರನ್ನು ಖರೀದಿಸಬಹುದು
ಲಕ್ನೋ ಸೂಪರ್ ಜೈಂಟ್ಸ್ (LSG) – 23.35 ಕೋಟಿ ರೂ. ಬಾಕಿ ಇದ್ದು, 4 ವಿದೇಶಿ ಸಹಿತ 10 ಆಟಗಾರನ್ನು ಖರೀದಿಗೆ ಅವಕಾಶವಿದೆ.

ಮುಂಬೈ ಇಂಡಿಯನ್ಸ್ (MI) – 20.55 ಕೋಟಿ ರೂ. ಬಾಕಿ ಇದ್ದು, 3 ವಿದೇಶಿ ಸಹಿತ 9 ಆಟಗಾರರನ್ನು ಖರೀದಿ ಮಾಡಬಹುದು.
ಪಂಜಾಬ್ ಕಿಂಗ್ಸ್ (PBKS) – 32.2 ಕೋಟಿ ರೂ. ಬಾಕಿ ಇದ್ದು, 3 ವಿದೇಶಿ ಸಹಿತ 9 ಆಟಗಾರರನ್ನು ಖರೀದಿಸಬಹುದು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) – 8.75 ಕೋಟಿ ರೂ. ಬಾಕಿ ಇದ್ದು, 2 ವಿದೇಶಿ ಸಹಿತ ಒಟ್ಟು 7 ಆಟಗಾರ ಖರೀದಿಗೆ ಅವಕಾಶವಿದೆ.
ರಾಜಸ್ಥಾನ ರಾಯಲ್ಸ್ (RR) – 13.2 ಕೋಟಿ ರೂ. ಬಾಕಿ ಇದ್ದು, 4 ವಿದೇಶಿ ಸಹಿತ 13 ಆಟಗಾರರನ್ನು ಖರೀದಿಸಬಹುದು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *