ಗುವಾಹಟಿ: ಇಲ್ಲಿನ (Guwahati) ಬರ್ಸಪರ ಕ್ರೀಡಾಂಗಣದಲ್ಲಿ (Barsapara Stadium) ನಡೆಯಬೇಕಿದ್ದ ರಾಜಸ್ಥಾನ ರಾಯಲ್ಸ್ (Rajasthan Royals) ಹಾಗೂ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು, ಟಾಸ್ ವಿಳಂಬವಾಗಿದೆ.
🚨 UPDATE 🚨
Toss is delayed. Stay tuned for further updates.#TATAIPL | #KhelBindaas | #RRvRCB
— IndianPremierLeague (@IPL) April 10, 2026
ಟಾಸ್‌ಗೂ ಮುನ್ನ ಸ್ವಲ್ಪ ಮಳೆಯಾಗಿದ್ದು, ಪಿಚ್‌ನಲ್ಲಿ ಕವರ್‌ನಿಂದ ಮುಚ್ಚಲಾಗಿದೆ. ಹಗುರವಾಗಿ ಆರಂಭವಾಗಿದ್ದ ಮಳೆ ಇದೀಗ ಜೋರಾಗಿದೆ.
ಈವರೆಗೂ ಆರ್‌ಸಿಬಿ ಎರಡು ಪಂದ್ಯಗಳನ್ನಾಡಿದ್ದು, ಆ ಪೈಕಿ ಎರಡಲ್ಲೂ ಗೆಲುವು ಸಾಧಿಸಿದೆ. ಇನ್ನೂ ಆರ್‌ಆರ್ ಮೂರು ಪಂದ್ಯಗಳನ್ನಾಡಿದ್ದು, ಹ್ಯಾಟ್ರಿಕ್ ಗೆಲುವನ್ನು ಕಂಡಿದೆ. ಸದ್ಯ ಆರ್‌ಆರ್ 6 ಪಾಯಿಂಟ್‌ನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಆರ್‌ಸಿಬಿ 4 ಅಂಕಗಳೊಂದಿಗೆ ತೃತೀಯ ಸ್ಥಾನದಲ್ಲಿದೆ.
ಈವರೆಗೂ ಎರಡು ತಂಡಗಳು ಒಂದೇ ಒಂದು ಪಂದ್ಯದಲ್ಲಿಯೂ ಸೋಲದೇ ಮುನ್ನಡೆಯುತ್ತಿದ್ದು, ಇಂದು ಒಂದು ತಂಡ ಸೋಲನುಭವಿಸುವುದಂತು ಖಂಡಿತ.

