ದಿಸ್ಪುರ್: ಗುವಾಹಟಿಯ (Guwahati) ಬರ್ಸಪರ ಕ್ರೀಡಾಂಗಣದಲ್ಲಿ (Barsapara Stadium) ನಡೆಯಬೇಕಿದ್ದ ರಾಜಸ್ಥಾನ ರಾಯಲ್ಸ್ (Rajasthan Royals) ಹಾಗೂ ಮುಂಬೈ ಇಂಡಿಯನ್ಸ್ (Mumbai Indians) ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ.
ಸಂಜೆ 6:40ರ ಸುಮಾರಿಗೆ ಆರಂಭವಾದ ಮಳೆ ಟಾಸ್‌ಗೂ ಅವಕಾಶ ನೀಡದೇ ಕೆಲಕಾಲ ಬಂದು ನಿಂತಿತ್ತು. ಆದರೆ ಮತ್ತೆ ಶುರುವಾಗಿ ಪಂದ್ಯಕ್ಕೆ ಅಡ್ಡಿಯನ್ನುಂಟು ಮಾಡಿದೆ. ಸದ್ಯ ರಾತ್ರಿ 10:50ಕ್ಕೆ 5 ಓವರ್‌ಗೆ ಕಟ್ ಆಫ್ ಸಮಯ ಘೋಷಿಸಿದ್ದು, ಅದಾದ ಬಳಿಕವೂ ಮಳೆ ನಿಲ್ಲದಿದ್ದರೆ ಎರಡು ತಂಡಕ್ಕೆ ತಲಾ 1 ಅಂಕ ನೀಡಲಾಗುತ್ತದೆ.ಇದನ್ನೂ ಓದಿ: ಮಳೆಯಿಂದ ಕೋಲ್ಕತ್ತಾ vs ಪಂಜಾಬ್ ಪಂದ್ಯ ರದ್ದು – ಆರ್‌ಸಿಬಿ ಹಿಂದಿಕ್ಕಿ ನಂ.1 ಸ್ಥಾನಕ್ಕೆ ಜಿಗಿದ ಶ್ರೇಯಸ್ ಪಡೆ
🚨 Update 🚨
Toss is delayed in Guwahati.
Next update to follow once the rain stops.#TATAIPL | #KhelBindaas | #RRvMI pic.twitter.com/cheEGdXSEz
— IndianPremierLeague (@IPL) April 7, 2026
ಎರಡು ತಂಡಗಳು ಈಗಾಗಲೇ ತಲಾ ಎರಡೆರಡು ಪಂದ್ಯ ಆಡಿದ್ದು, ರಾಜಸ್ಥಾನ ರಾಯಲ್ಸ್ ಎರಡು ಪಂದ್ಯಗಳಲ್ಲಿ ಗೆದ್ದಿದೆ. ಮುಂಬೈ ಇಂಡಿಯನ್ಸ್ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಿದೆ.

