ಅನ್‌ಕ್ಯಾಪ್‌ ಪ್ಲೇಯರ್‌ ಮಂಗೇಶ್‌ ಯಾದವ್‌ಗೆ 5.20 ಕೋಟಿ – ಆರ್‌ಸಿಬಿ ಖರೀದಿಸಿದ ಆಟಗಾರರು ಯಾರು?

2 Min Read

ಅಬುಧಾಬಿ: ಅನ್‌ಕ್ಯಾಪ್‌ ಪ್ಲೇಯರ್‌, ಆಲ್‌ರೌಂಡರ್‌ ಆಟಗಾರ ಮಂಗೇಶ್ ಯಾದವ್ (Mangesh Yadav) ಅವರನ್ನು ರಾಯಲ್‌ ಚಾಲೆಂರ್ಜಸ್‌ ಬೆಂಗಳೂರು (RCB) 5.20 ಕೋಟಿ ರೂ. ನೀಡಿ ಖರೀದಿಸಿದೆ.

ಮಧ್ಯಪ್ರದೇಶದ 23 ವರ್ಷದ ಮಂಗೇಶ್‌ ಯಾದವ್‌ ಎಡಗೈ ಬ್ಯಾಟರ್‌ ಮತ್ತು ಎಡಗೈ ವೇಗದ ಬೌಲರ್‌ ಆಗಿದ್ದಾರೆ. ಇತ್ತೀಚಿನ ಪ್ರದರ್ಶನದ ಬಳಿಕ ಅವರು ಭರವಸೆಯ ಅಲ್‌ರೌಂಡರ್‌ ಆಗಿ ಗುರುತಿಸಿಕೊಂಡಿದ್ದಾರೆ.  ಇದನ್ನೂ ಓದಿ:   ಕ್ಯಾಮರೂನ್‌ ಗ್ರೀನ್‌ 25.20 ಕೋಟಿಗೆ ಸೇಲಾದ್ರೂ ಸಿಗೋದು 18 ಕೋಟಿ!


ಎಂಪಿಟಿ 20 ಲೀಗ್‌ನ 6 ಪಂದ್ಯಗಳಲ್ಲಿ 14 ವಿಕೆಟ್‌ ಪಡೆದಿದ್ದಾರೆ. ಈ ಪೈಕಿ ಮೂರು ಬಾರಿ 4 ವಿಕೆಟ್‌ಗಳ ಗೊಂಚಲು ಪಡೆದಿರುವುದು ವಿಶೇಷ. ಮಂಗೇಶ್‌ ಯಾದವ್‌ ಅವರಿಗೆ 30 ಲಕ್ಷ ರೂ. ಮೂಲ ಬೆಲೆಯನ್ನು ನಿಗದಿ ಮಾಡಲಾಗಿತ್ತು. ಹರಾಜಿನಲ್ಲಿ ಹೈದರಾಬಾದ್‌ ತಂಡ ಇವರ ಖರೀದಿಗೆ ಭಾರೀ ಆಸಕ್ತಿ ತೋರಿಸಿತ್ತು. ಕೊನೆಗೆ ಮಂಗೇಶ್ ಯಾದವ್ ಅವರನ್ನು ಆರ್‌ಸಿಬಿ ಖರೀದಿಸುವಲ್ಲಿ ಯಶಸ್ವಿಯಾಗಿದೆ. ಇದನ್ನೂ ಓದಿ: ಸಂಬಳದಲ್ಲಿ 70% ಇಳಿಕೆ – 7 ಕೋಟಿಗೆ ಆರ್‌ಸಿಬಿಗೆ ವೆಂಕಟೇಶ್‌ ಅಯ್ಯರ್‌ ಮಾರಾಟ

ನ್ಯೂಜಿಲೆಂಡಿನ ವೇಗದ ಬೌಲರ್‌ ಜಾಕೋಬ್ ಡಫಿ , ಇಂಗ್ಲೆಂಡಿನ ವಿಕೆಟ್‌ ಕೀಪರ್‌ ಜೋರ್ಡಾನ್ ಕಾಕ್ಸ್, ಆಲ್‌ರೌಂಡರ್‌ ಆಟಗಾರ ಸಾತ್ವಿಕ್ ದೇಸ್ವಾಲ್ ಅವರನ್ನು ಆರ್‌ಸಿಬಿ ಖರೀದಿಸಿದೆ. ಆಲ್‌ರೌಂಡರ್‌ ಆಟಗಾರರಾದ ಕಾನಿಷ್ಕ್ ಚೌಹಾಣ್, ವಿಹಾನ್ ಮಲ್ಹೋತ್ರಾ, ಬೌಲರ್‌ ವಿಕಿ ಓಸ್ಟ್ವಾಲ್ ಅವರು ಆರ್‌ಸಿಬಿ ಪಾಲಾಗಿದ್ದಾರೆ. ಐಪಿಎಲ್‌ ಮಿನಿ ಹರಾಜಿನಲ್ಲಿ ಆರ್‌ಸಿಬಿ ಪರ್ಸ್‌ನಲ್ಲಿ 16.40 ಕೋಟಿ ರೂ. ಇತ್ತು.

ಆರ್‌ಸಿಬಿ ಖರೀದಿಸಿದ ಆಟಗಾರರು
ವೆಂಕಟೇಶ್‌ ಅಯ್ಯರ್‌ – 7 ಕೋಟಿ ರೂ.
ಮಂಗೇಶ್‌ ಯಾದವ್‌ – 5.20 ಕೋಟಿ ರೂ
ಜಾಕೋಬ್ ಡಫಿ – 2 ಕೋಟಿ ರೂ.
ಜೋರ್ಡಾನ್ ಕಾಕ್ಸ್ – 75 ಲಕ್ಷ ರೂ.
ಸಾತ್ವಿಕ್ ದೇಸ್ವಾಲ್ – 30 ಲಕ್ಷ ರೂ.
ಕಾನಿಷ್ಕ್ ಚೌಹಾಣ್ – 30 ಲಕ್ಷ ರೂ.
ವಿಹಾನ್ ಮಲ್ಹೋತ್ರಾ – 30 ಲಕ್ಷ ರೂ.
ವಿಕಿ ಓಸ್ಟ್ವಾಲ್- 30 ಲಕ್ಷ ರೂ.

Share This Article