ಹೈದರಾಬಾದ್: ಆರಂಭದಲ್ಲಿ ಶಮಿ ಅವರ ಮಾರಕ ಬೌಲಿಂಗ್ ನಂತರ ನಾಯಕ ರಿಷಭ್ ಪಂತ್ ಅವರ ಸಮಯೋಚಿತ ಅರ್ಧಶತಕದ ಆಟದಿಂದ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ರೋಚಕ 5 ವಿಕೆಟ್‌ಗಳ ಜಯ ಸಾಧಿಸಿದಿದೆ.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಹೈದರಾಬಾದ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 156 ರನ್ ಹೊಡೆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಲಕ್ನೋ ಒಂದು ಎಸೆತ ಬಾಕಿ ಇರುವಂತೆಯೇ 5 ವಿಕೆಟ್ ನಷ್ಟಕ್ಕೆ 160 ರನ್ ಹೊಡೆದು ಜಯಗಳಿಸಿತು.
ಸುಲಭದ ಸವಾಲಾಗಿದ್ದರೂ 102 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಲಕ್ನೋ 105 ರನ್‌ಗಳಿಸುಷ್ಟವರಲ್ಲಿ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 17.4ನೇ ಓವರ್‌ನಲ್ಲಿ ಅಬ್ದುಲ್ ಸಮಾದ್ ಔಟಾದಾಗ ತಂಡದ ಮೊತ್ತ 5 ವಿಕೆಟ್ ನಷ್ಟಕ್ಕೆ 139 ಆಗಿತ್ತು.
OVER THE IN-FIELD! 😍
Captain Rishabh Pant guides the chase and finishes it off in style 🤌@LucknowIPL off the mark on the points table +2️⃣
Scorecard ▶️ https://t.co/qC2rF1Hiiz#TATAIPL | #KhelBindaas | #SRHvLSG pic.twitter.com/SEDFsub4UD
— IndianPremierLeague (@IPL) April 5, 2026
ಕೊನೆಯ 18 ಎಸೆತಗಳಲ್ಲಿ ಲಕ್ನೋ ಗೆಲುವಿಗೆ 19 ರನ್ ಬೇಕಿತ್ತು. 18ನೇ ಓವರ್‌ನಲ್ಲಿ 6 ರನ್ ಬಂದರೆ 19ನೇ ಓವರ್‌ನಲ್ಲಿ ಕೇವಲ 4 ರನ್ ಬಂದಾಗ ಪಂದ್ಯ ರೋಚಕ ಘಟ್ಟಕ್ಕೆ ತಿರುಗಿತು.
ಉನದ್ಕತ್ ಎಸೆದ ಕೊನೆಯ ಓವರ್‌ನಲ್ಲಿ 9 ರನ್ ಬೇಕಿತ್ತು. ಸ್ಟ್ರೈಕ್‌ನಲ್ಲಿದ್ದ ರಿಷಭ್ ಪಂತ್ (Rishabh Pant) ಮೊದಲ ಎರಡು ಎಸೆತಗಳಲ್ಲಿ ಬೌಂಡರಿ ಹೊಡೆದ ಕಾರಣ ಪಂದ್ಯ ಟೈ ಆಯ್ತು. ನಂತರ ಎರಡು ಎಸೆತಗಳಲ್ಲಿ ಯಾವುದೇ ರನ್ ಬಾರದ ಕಾರಣ ಪಂದ್ಯ ಸೂಪರ್ ಓವರಿಗೆ ಹೋಗುತ್ತಾ ಎಂಬ ಪ್ರಶ್ನೆ ಎದ್ದಿತ್ತು. ಆದರೆ ಐದನೇ ಎಸೆತವನ್ನು ಪಂತ್ ಬೌಂಡರಿಗೆ ಅಟ್ಟಿ ತಂಡಕ್ಕೆ ಗೆಲುವು ತಂದುಕೊಟ್ಟರು.
Effortless timing right from the word go ❤️💙
🎥 Two glorious sixes from Aiden Markram as #LSG look in control of this chase 💪
Updates ▶️ https://t.co/qC2rF1Hiiz#TATAIPL | #KhelBindaas | #SRHvLSG pic.twitter.com/a0mkeCBi2z
— IndianPremierLeague (@IPL) April 5, 2026
ಪಂತ್ ಔಟಾಗದೇ 68 ರನ್(50 ಎಸೆತ, 9 ಬೌಂಡರಿ) ಹೊಡೆದರು. ಪಂತ್ ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿ. ಆದರೆ ಇಂದು ಯಾವುದೇ ಸಿಕ್ಸ್ ಸಿಡಿಸದೇ ಕೇವಲ ಬೌಂಡರಿ ಹೊಡೆಯುವ ಮೂಲಕ ಜವಾಬ್ದಾರಿಯುತ ಆಟವಾಡಿದರು. ಆರಂಭಿಕ ಆಟಗಾರ ಮಾರ್ಕ್ರಾಮ್ 45 ರನ್(27 ಎಸೆತ, 6 ಬೌಂಡರಿ, 2 ಸಿಕ್ಸ್) ಹೊಡೆದಿದ್ದರು.
ಆರಂಭಿಕ ಕುಸಿತ
ಹೈದರಾಬಾದ್ ಆರಂಭದಲ್ಲೇ ಕುಸಿತ ಕಂಡಿತ್ತು. ಕೇವಲ 26 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಹೆನ್ರಿಕ್ ಕ್ಲಾಸನ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಐದನೇ ವಿಕೆಟಿಗೆ 63 ಎಸೆತಗಳಲ್ಲಿ 116 ರನ್ ಜೊತೆಯಾಟವಾಡಿದ್ದರಿಂದ ತಂಡದ ಮೊತ್ತ 150 ರನ್‌ಗಳ ಗಡಿ ದಾಟಿತ್ತು. ಕ್ಲಾಸನ್ 62 ರನ್(41 ಎಸೆತ, 5 ಬೌಂಡರಿ, 2 ಸಿಕ್ಸ್), ನಿತೀಶ್ ಕುಮಾರ್ ರೆಡ್ಡಿ 56 ರನ್(55 ಎಸೆತ, 3 ಬೌಂಡರಿ, 5 ಸಿಕ್ಸ್) ಹೊಡೆದು ಔಟಾದರು.
Rebuilding in progress for #SRH! 💪
🎥 Nitish Kumar Reddy and Heinrich Klaasen take the aerial route to get the innings back on track 🤝
Updates ▶️ https://t.co/qC2rF1Hiiz#TATAIPL | #KhelBindaas | #SRHvLSG | @SunRisers pic.twitter.com/Jv6NeNtS0c
— IndianPremierLeague (@IPL) April 5, 2026
ಶಮಿ (Mohammed Shami) ಆರಂಭದಲ್ಲೇ ಅಭಿಶೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಅವರನ್ನು ಔಟ್ ಮಾಡಿದ್ದರು. ಮಾರಕ ಬೌಲಿಂಗ್ ಮಾಡಿದ ಶಮಿ 4 ಓವರ್‌ನಲ್ಲಿ ಕೇವಲ 9 ರನ್ ನೀಡಿ 2 ವಿಕೆಟ್ ಕಿತ್ತಿದ್ದರು. ಅಷ್ಟೇ ಅಲ್ಲದೇ 18 ಡಾಟ್ ಬಾಲ್ ಎಸೆದಿದ್ದರು. ಪ್ರಿನ್ಸ್ ಯಾದವ್, ಅವೇಶ್ ಖಾನ್ ತಲಾ 2 ವಿಕೆಟ್ ಪಡೆದರೆ ದಿಗ್ವೇಶ್ ರಾಥಿ 1 ವಿಕೆಟ್ ಪಡೆದರು.

