– ಐವರು ಸ್ಟಾರ್ ಪ್ಲೇಯರ್‌ಗಳನ್ನ ಹೊರದಬ್ಬಲು ಮುಂದಾದ ಸಿಎಸ್‌ಕೆ
– ಫ್ರಾಂಚೈಸಿಗಳ ಪರ್ಸ್ ಮೊತ್ತ 151 ಕೋಟಿಗೆ ಹೆಚ್ಚಳ
ಮುಂಬೈ: ಮುಂದಿನ ಡಿಸೆಂಬರ್ 13 ರಿಂದ 15ರ ಅವಧಿಯಲ್ಲಿ 2026ರ ಐಪಿಎಲ್ ಟೂರ್ನಿಗೆ ಮಿನಿ ಹರಾಜು (IPL Mini Auction) ನಡೆಯುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಎಲ್ಲಾ ಫ್ರಾಂಚೈಸಿಗಳು ರಿಟೇನ್ ಆಟಗಾರರ ಪಟ್ಟಿ ಪ್ರಕಟಿಸಲು ಡೆಡ್‌ಲೈನ್ ಫಿಕ್ಸ್ ಮಾಡಲಾಗಿದೆ.
ಮುಂದಿನ ನವೆಂಬರ್ 15ರ ಒಳಗೆ ಎಲ್ಲಾ ಫ್ರಾಂಚೈಸಿಗಳು ರಿಟೇನ್ ಆಟಗಾರರ ಪಟ್ಟಿಯನ್ನು ಪ್ರಕಟಿಸಲು ಐಪಿಎಲ್ ಮಂಡಳಿ ಸೂಚನೆ ನೀಡಿರುವುದಾಗಿ ವರದಿಗಳು ತಿಳಿಸಿವೆ. ಇದನ್ನೂ ಓದಿ: ಭಾರತಕ್ಕೆ ಏಷ್ಯಾ ಕಪ್ ನೀಡದ ಸಚಿವ ನಖ್ವಿಗೆ ಪಾಕ್‌ನಲ್ಲಿ ಚಿನ್ನದ ಪದಕ ನೀಡಿ ಸನ್ಮಾನಕ್ಕೆ ನಿರ್ಧಾರ
3 ವರ್ಷಗಳಿಗೊಮ್ಮೆ ಮೆಗಾ ಹರಾಜು ನಡೆಯಲಿದೆ. 2025ರ ಐಪಿಎಲ್ ಟೂರ್ನಿ ವೇಳೆ ಮೆಗಾ ಹರಾಜು ನಡೆದಿತ್ತು. ಆದ್ದರಿಂದ ಈ ಬಾರಿ ಮಿನಿ ಹರಾಜು ನಡೆಯಲಿದೆ. ಆದ್ರೆ ಬಿಸಿಸಿಐ (BCCI) ಈಗಾಗಲೇ ವಿಧಿಸಿರುವಂತೆ ಕಳೆದಬಾರಿಗಿಂತ ಫ್ರಾಂಚೈಸಿಗಳ ಪರ್ಸ್ ಮೊತ್ತ ಹಿಗ್ಗಲಿದೆ.
ಪರ್ಸ್ ಮೊತ್ತ ಇನ್ನಷ್ಟು ಹೆಚ್ಚಳ
ಈ ಹಿಂದೆ 90 ಕೋಟಿ ರೂ.ಗಳಷ್ಟಿದ್ದ ಐಪಿಎಲ್ ಫ್ರಾಂಚೈಸಿಗಳ ಪರ್ಸ್ 2023-24ರ ಐಪಿಎಲ್ ಟೂರ್ನಿಯಲ್ಲಿ 100 ಕೋಟಿ ರೂ.ಗೆ ಹೆಚ್ಚಿಸಲಾಗಿತ್ತು. 2025ರ ಐಪಿಎಲ್ ಟೂರ್ನಿಯ ಮೆಗಾ ಹರಾಜಿಗೂ ಮುನ್ನ ಬಿಸಿಸಿಐ ಮೂರು ವರ್ಷಗಳ ಅವಧಿಗೆ ವೇತನ ಸೇರಿ ಪರ್ಸ್ ಮೊತ್ತವನ್ನ 157 ಕೋಟಿ ರೂ.ಗಳ ವರೆಗೆ ಹೆಚ್ಚಿಸಿದೆ. ಅದರಂತೆ 2025ರ ಐಪಿಎಲ್ ಟೂರ್ನಿಯಲ್ಲಿ ಫ್ರಾಂಚೈಸಿಗಳು ಸಂಬಳ ಮಿತಿ ಸೇರಿ ತಲಾ 146 ಕೋಟಿ ರೂ. ಬಳಕೆ ಮಾಡಿದ್ದವು. 2026ರ ಟೂರ್ನಿಗೆ 151 ಕೋಟಿ ರೂ. ಬಳಕೆ ಮಾಡಲಿದ್ದು, 2027ರ ಟೂರ್ನಿಗೆ 157 ಕೋಟಿ ರೂ.ಗಳನ್ನು ಫ್ರಾಂಚೈಸಿಗಳು ಬಳಸಲಿವೆ. ಇದನ್ನೂ ಓದಿ: 2027ರ ವಿಶ್ವಕಪ್ ಆಡೋದು ಡೌಟ್ – ಆಸೀಸ್ ಸರಣಿ ಬಳಿಕ ʻಹಿಟ್‌ಮ್ಯಾನ್, ಕ್ರಿಕೆಟ್ ಲೋಕದ ಕಿಂಗ್ ಯುಗ ಅಂತ್ಯ?
ಐವರು ಸ್ಟಾರ್‌ಗಳನ್ನ ಹೊರದಬ್ಬಲು ಮುಂದಾದ ಸಿಎಸ್‌ಕೆ
ಇನ್ನೂ ಮಿನಿ ಹರಾಜಿಗೂ ಮುನ್ನ ರಿಟೇನ್ ಆಟಗಾರರ ಪಟ್ಟಿ ಬಿಡುಗಡೆಗೊಳಿಸಲು ಡೆಡ್‌ಲೈನ್ ಫಿಕ್ಸ್ ಮಾಡ್ತಿದ್ದಂತೆ ದೀಪಕ್ ಹೂಡ, ವಿಜಯ್ ಶಂಕರ್, ರಾಹುಲ್ ತ್ರಿಪಾಟಿ, ಸ್ಯಾಮ್ ಕರ್ರನ್, ಡಿವೋನ್ ಕಾನ್ವೆ ಅವರನ್ನ ತಂಡದಿಂದ ಹೊರಬ್ಬಲು ಫ್ರಾಂಚೈಸಿ ನಿರ್ಧರಿಸಿದೆ ಎಂಧು ತಿಳಿದುಬಂದಿದೆ. ಈ ಬಗ್ಗೆ ಸಿಎಸ್‌ಕೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇದನ್ನೂ ಓದಿ: 6 ಆಟಗಾರರ ರಿಟೇನ್‌ಗೆ ಬಿಸಿಸಿಐ ಅವಕಾಶ, ಪರ್ಸ್ ಮೊತ್ತ 120 ರಿಂದ 157 ಕೋಟಿ ರೂ.ಗೆ ಹೆಚ್ಚಳ!