ಚೆನ್ನೈ ಮಾನ ಕಾಪಾಡಿದ ಆಲ್‌ರೌಂಡರ್ಸ್‌ – ಆರ್‌ಸಿಬಿಗೆ ಟರ್ನಿಂಗ್‌ ಕೊಟ್ಟ 19ನೇ ಓವರ್‌!

2 Min Read

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಎಸ್‌ಕೆ ‌Vs ಆರ್‌ಸಿಬಿ (CSK vs RCB_ ನಡುವಿನ ಪಂದ್ಯ ಅಭಿಮಾನಿಗಳಿಗೆ ರಸದೌತಣ ನೀಡಿತ್ತು. ಸಿಕ್ಸರ್‌ ಬೌಂಡರಿಗಳ ಸುರಿಮಳೆಯು ಸ್ಟೇಡಿಯಂನಲ್ಲಿದ್ದ ಫ್ಯಾನ್ಸ್‌ ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಈ ಪಂದ್ಯದಲ್ಲಿ ಆರ್‌ಸಿಬಿ 200 ರಿಂದ 220 ರನ್‌ ಕಲೆಹಾಕುವುದು ಹೆಚ್ಚೆಂದೇ ಅಂದಾಜಿಸಲಾಗಿತ್ತು.

12 ಓವರ್‌ಗಳ ವತೆಗೂ ಬೌಲಿಂಗ್‌ನಲ್ಲಿ ಹಿಡಿತ ಸಾಧಿಸಿದ್ದ ಸಿಎಸ್‌ಕೆ 2 ವಿಕೆಟ್‌ ಪಡೆದು 114 ರನ್‌ ನೀಡಿತ್ತು. 13ನೇ ಓವರ್‌ನಲ್ಲಿ ಶಿವಂ ದುಬೆ 23 ರನ್‌, 14ನೇ ಓವರ್‌ನಲ್ಲಿ ಮ್ಯಾಟ್‌ ಹೆನ್ರಿ 14 ರನ್‌ ಚಚ್ಚಿಸಿಕೊಂಡರೂ 15ನೇ ಓವರ್‌ನಲ್ಲಿ ಜೇಮಿ ಓವರ್ಟನ್‌ ಕೇವಲ 2 ರನ್‌ ಬಿಟ್ಟುಕೊಟ್ಟು 1 ವಿಕೆಟ್‌ ಕಿತ್ತರು. ಈ ವೇಳೆ ಆರ್‌ಸಿಬಿ 15 ಓವರ್‌ಗೆ 3 ವಿಕೆಟ್‌ ಪಡೆದ 153 ರನ್‌ ಕಲೆಹಾಕಿತ್ತು. ಆದ್ರೆ ಟಿಮ್‌ ಡೇವಿಡ್‌ ಬಂದ ಬಳಿಕ ಬ್ಯಾಟಿಂಗ್‌ ದಿಕ್ಕನ್ನೇ ಬದಲಿಸಿದರು. ಸಿಕ್ಸರ್‌, ಬೌಂಡರಿಗಳ ಸುರಿಮಳೆಯಿಂದಲೇ ರನ್‌ ಪೇರಿಸಿದರು.

ಟರ್ನಿಂಗ್‌ ಸಿಕ್ಕಿದ್ದು ಹೇಗೆ?
ಟಿಮ್‌ ಡೇವಿಡ್ ಹಾಗೂ ರಜತ್ (Rajat Patidar) ಕೊನೇ 5 ಓವರಲ್ಲಿ 97 ರನ್ ಸಿಡಿಸಿದ್ದು ಆರ್‌ಸಿಬಿ ತಂಡ ಬೃಹತ್‌ ಮೊತ್ತ ದಾಖಲಿಸಲು ಕಾರಣವಾಯಿತು. ಅದರಲ್ಲೂ 19ನೇ ಓವರಲ್ಲಿ ಬರೋಬ್ಬರಿ 30 ರನ್ ದೋಚಿದರು. ಟಾರ್ಗೆಟ್ 220ರ ಆಸುಪಾಸಿನಲ್ಲಿ ಇದ್ದಿದ್ದರೆ ಸಿಎಸ್‌ಕೆ ಯಶಸ್ವಿಯಾಗಿ ಬೆನ್ನತ್ತುವ ಸಾಧ್ಯತೆ ಇತ್ತು.

ಸಿಕ್ಸರ್‌, ಬೌಂಡರಿಗಳಿಂದಲೇ 178 ರನ್‌
ಪವರ್‌ ಪ್ಲೇ ನಲ್ಲಿ ನಿರೀಕ್ಷಿತ ಬ್ಯಾಟಿಂಗ್‌ ಪ್ರದರ್ಶನ ನೀಡದಿದ್ದರೂ ಸ್ಪರ್ಧಾತ್ಮಕ ಮೊತ್ತ ಕಲೆಹಾಕುವಲ್ಲಿ ಆರ್‌ಸಿಬಿ ತಂಡ ಯಶಸ್ವಿಯಾಗಿತ್ತು. ಆ ಬಳಿಕ ಫಿಲ್‌ ಸಾಲ್ಟ್‌, ಪಡಿಕ್ಕಲ್‌, ಪಾಟಿದಾರ್‌ ಹಾಗೂ ಟಿಮ್‌ ಡೇವಿಡ್‌ ಆಕ್ರಮಣ ಬ್ಯಾಟಿಂಗ್‌ಗೆ ಮುಂದಾದರು. ಆರ್‌ಸಿಬಿ ಬ್ಯಾಟರ್‌ಗಳ ಅಬ್ಬರಕ್ಕೆ ಸಿಎಸ್‌ಕೆ ಬೌಲರ್‌ಗಳು ಹೈರಾಣಾದರು. ಈ ಪಂದ್ಯದಲ್ಲಿ ಆರ್‌ಸಿಬಿ ಪರ ಒಟ್ಟು 19 ಸಿಕ್ಸರ್‌, 14 ಬೌಂಡರಿಗಳು ಸಿಡಿದವು, ಬೌಂಡರಿಗಳಿಂದಲೇ ಆರ್‌ಸಿಬಿ 178 ರನ್‌ ಕಲೆಹಾಕಿತ್ತು ಅನ್ನೋದು ಮತ್ತೊಂದು ವಿಶೇಷ.

ಚೆನ್ನೈ ಮಾನ ಕಾಪಾಡಿದ ಆಲ್‌ರೌಂಡರ್ಸ್‌
ಸಿಎಸ್‌ ಸೋಲುತ್ತೆ ಎಂಬುದು ಮೊದಲ 3 ಓವರ್‌ನಲ್ಲೇ ಬಹುತೇಕ ಖಚಿತವಾಗಿತ್ತು. ಸ್ಯಾಮನ್ (9 ರನ್‌), ಋತು ರಾಜ್ (7 ರನ್‌), ಆಯುಶ್ ಮ್ಹಾತ್ರೆ (1 ರನ್‌) ಕೈ ಕೊಟ್ಟರು. ಆಗ ಪಂದ್ಯಕ್ಕೆ ಕಿಕ್ ಕೊಟ್ಟಿದ್ದು ಸರ್ಫರಾಜ್ ಖಾನ್‌ ಆಟ. ಅವರು 25 ಎಸೆತಕ್ಕೆ 50 ರನ್ ಸಿಡಿಸಿದರೂ, ಪವರ್‌ ಪ್ಲೇ ಬಳಿಕ ತಂಡ ಮತ್ತೆ ಮಂಕಾಯಿತು. ಕೊನೆಯಲ್ಲಿ ಪ್ರಶಾಂತ್‌ ವೀರ್‌ ವೀರ್ (29 ಎಸೆತಕ್ಕೆ 43 ರನ್‌) ಹಾಗೂ ಓವರ್ಟನ್ (16 ಎಸೆತಕ್ಕೆ 37 ರನ್‌) ಕೆಲಹೊತ್ತು ಅಬ್ಬರಿಸಿ, ಸಿಎಸ್‌ಕೆ ಮಾನ ಕಾಪಾಡಿದರು. ಇಲ್ಲದಿದ್ದರೆ ಚೆನ್ನೈ 150 ರನ್‌ ದಾಟುವುದೂ ಕಷ್ಟವಾಗುತ್ತಿತ್ತು. ಎಷ್ಟೇ ಪ್ರಯತ್ನಿಸಿದರೂ ಸೋಲು ತಪ್ಪಿಸಲಾಗಲಿಲ್ಲ.

Share This Article