IPL Retention | ಕೆಕೆಆರ್‌ನಿಂದ ಸ್ಟಾರ್ಕ್‌, ಶ್ರೇಯಸ್‌ ಔಟ್‌ – ರಿಂಕು ಸಂಭಾವನೆ ಕೋಟಿ ಕೋಟಿ ಏರಿಕೆ!

Public TV
1 Min Read

ಮುಂಬೈ: 2025ರ ಮೆಗಾ ಹರಾಜಿಗೂ ಮುನ್ನವೇ ಹಾಲಿ ಚಾಂಪಿಯನ್ಸ್‌ ಕೆಕೆಆರ್‌ (KKR) ಸ್ಟಾರ್‌ ಆಟಗಾರರನ್ನ ಹೊರದಬ್ಬಿದೆ. ಐಪಿಎಲ್‌ ಇತಿಹಾಸದಲ್ಲೇ ದಾಖಲೆ ಮೊತ್ತಕ್ಕೆ ಬಿಕರಿಯಾಗಿದ್ದ ಮಿಚೆಲ್‌ ಸ್ಟಾರ್ಕ್‌ (Mitchell starc), ನಾಯಕ ಶ್ರೇಯಸ್‌ ಅಯ್ಯರ್‌ (Shreyas Iyer) ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ.

ರಿಂಕು, ರಸ್ಸೆಲ್‌, ರಾಣಾ ಸೇರಿಂದಂತೆ ಆಲ್‌ರೌಂಡರ್‌, ಬೌಲರ್‌ಗಳಿಗೆ ಮಣೆಹಾಕಿರುವ ಕೋಲ್ಕತ್ತಾ ನೈಟ್‌ರೈಡರ್ಸ್‌ ಇಬ್ಬರು ವಿದೇಶಿ ಆಟಗಾರರು ಸೇರಿದಂತೆ 6 ಆಟಗಾರರನ್ನು ಉಳಿಸಿಕೊಂಡಿದೆ. ಈ ಪೈಕಿ ಕಳೆದ ಆವೃತ್ತಿಯಲ್ಲಿ 55 ಲಕ್ಷ ರೂ. ಸಂಭಾವನೆ ಪಡೆದಿದ್ದ ರಿಂಕು ಸಿಂಗ್‌ಗೆ 13 ಕೋಟಿ ರೂ. ಕೊಟ್ಟು ಖರೀದಿ ಮಾಡಿರುವುದು ವಿಶೇಷ. ಇದನ್ನೂ ಓದಿ: IPL Retention | ರಿಷಬ್‌ ಪಂತ್‌ ಸೇರಿ ಸ್ಟಾರ್‌ ಆಟಗಾರರೇ ಔಟ್‌ – ಆಲ್‌ರೌಂಡರ್‌ಗೆ ಮಣೆ ಹಾಕಿದ ಡೆಲ್ಲಿ

ಬಿಸಿಸಿಐ ನಿಮಯದ ಪ್ರಕಾರ ಐವರು ಆಟಗಾರರು ಮತ್ತು ಒಂದು ಆರ್‌ಟಿಎಂ ಬಳಕೆಗೆ ಅವಕಾಶ ನೀಡಿತ್ತು. ಆದ್ರೆ ಕೆಕೆಆರ್‌ 6 ಆಟಗಾರರನ್ನು ಉಳಿಸಿಕೊಂಡಿದ್ದು, ಆರ್‌ಟಿಎಂ ಕಾರ್ಡ್‌ ಬಳಕೆಗೆ ಅವಕಾಶ ಇಲ್ಲದಂತಾಗಿದೆ. ಇದನ್ನೂ ಓದಿ: IPL Retention | ಲಕ್ನೋದಿಂದ ರಾಹುಲ್‌ ಔಟ್‌ – ಪೂರನ್‌, ರಾಕೆಟ್‌ ವೇಗಿ ಮಯಾಂಕ್‌ಗೆ ಬಂಪರ್‌ ಗಿಫ್ಟ್‌

ಕೆಕೆಆರ್‌ನಲ್ಲಿ ಯಾರಿಗೆ ಎಷ ಉಳಿಕೆ?
* ರಿಂಕು ಸಿಂಗ್‌ – 13 ಕೋಟಿ ರೂ.
* ವರುಣ್‌ ಚಕ್ರವರ್ತಿ – 12 ಕೋಟಿ ರೂ.
* ಸುನೀಲ್‌ ನರೇನ್‌ – 12 ಕೋಟಿ ರೂ.
* ಆಂಡ್ರೆ ರಸ್ಸೆಲ್‌ – 12 ಕೋಟಿ ರೂ.
* ಹರ್ಷಿತ್‌ ರಾಣಾ – 4 ಕೋಟಿ ರೂ.
* ರಮಣದೀಪ್‌ ಸಿಂಗ್‌ – 4 ಕೋಟಿ ರೂ.

2025 ರಿಂದ 2027ರ ಐಪಿಎಲ್‌ ಆವೃತ್ತಿಗಳಿಗೆ ಹೊಸ ನಿಯಮ ಘೋಷಣೆ ಮಾಡಿರುವ ಬಿಸಿಸಿಐ, ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಮೆಗಾ ಹರಾಜು ನಡೆಸಲು ತೀರ್ಮಾನಿಸಿದೆ.

Share This Article