ಆರ್‌ಸಿಬಿಗೆ ʻಜೋಶ್‌ʼ – ಟಾಸ್‌ ಗೆದ್ದ ಬೆಂಗಳೂರು ಫೀಲ್ಡಿಂಗ್‌ ಆಯ್ಕೆ

Public TV
1 Min Read

ಚಂಡೀಗಢ: 18ನೇ ಆವೃತ್ತಿ ಐಪಿಎಲ್‌ ಟೂರ್ನಿಯ ಕ್ವಾಲಿಫೈಯರ್‌-1 (IPL Qualifier 1) ಪಂದ್ಯ ಇಂದು ನಡೆಯುತ್ತಿದ್ದು, ಆರ್‌ಸಿಬಿ-ಪಂಜಾಬ್‌ ಕಿಂಗ್ಸ್‌ ತಂಡಗಳು ಕಾದಾಟ ನಡೆಸಲಿವೆ. ಟಾಸ್‌ ಗೆದ್ದ ಆರ್‌ಸಿಬಿ (RCB) ಫೀಲ್ಡಿಂಗ್‌ ಆಯ್ದುಕೊಂಡಿದ್ದು, ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಪಂಜಾಬ್‌ಗೆ ಬಿಟ್ಟುಕೊಟ್ಟಿದೆ.

ಚಂಡೀಗಢದ ಮಲ್ಲನ್‌ಪುರ ಕ್ರಿಕೆಟ್‌ ಅಂಗಳದಲ್ಲಿ ಸರಿಯಾಗಿ 7:30ಕ್ಕೆ ಪಂದ್ಯ ಆರಂಭವಾಗಲಿದೆ. ಗೆದ್ದ ತಂಡ ನೇರವಾಗಿ ಫೈನಲ್‌ ಪ್ರವೇಶಿಸಲಿದೆ. ಇನ್ನೂ ಸೋತ ತಂಡ ಕ್ವಾಲಿಫೈಯರ್‌ 2ನಲ್ಲಿ ಎಲಿಮಿನೇಟರ್‌ನಲ್ಲಿ ಗೆದ್ದ ತಂಡದೊಂದಿಗೆ ಸೆಣಸಲಿದೆ. ಗಾಯದ ಸಮಸ್ಯೆ ಎದುರಿಸುತ್ತಿದ್ದ ಜೋಶ್‌ ಹೇಜಲ್ವುಡ್‌ ಮತ್ತೆ ಆರ್‌ಸಿಬಿಗೆ ಕಂಬ್ಯಾಕ್‌ ಮಾಡಿದ್ದಾರೆ. ಇನ್ನೂ ಬೆರಳು ಗಾಯದ ಸಮಸ್ಯೆಯಿಂದ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಕಣಕ್ಕಿಳಿಯುತ್ತಿದ್ದ ರಜತ್‌ ಪಾಟಿದಾರ್‌ ಮತ್ತೆ ನಾಯಕತ್ವ ವಹಿಸಿಕೊಂಡಿದ್ದಾರೆ. ಹೀಗಾಗಿ ಇಂದಿನ ಆರ್‌ಸಿಬಿ ಫಲಿತಾಂಶದಲ್ಲಿ ಬದಲಾವಣೆ ತರಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ಪಂಜಾಬ್‌ ಕಿಂಗ್ಸ್‌ ಪ್ಲೇಯಿಂಗ್‌-11
ಪ್ರಿಯಾಂಶ್‌ ಆರ್ಯ, ಪ್ರಭ್‌ಸಿಮ್ರನ್‌ ಸಿಂಗ್‌, ಜೋಶ್‌ ಇಂಗ್ಲಿಷ್‌, ಶ್ರೇಯಸ್‌ ಅಯ್ಯರ್‌ (ನಾಯಕ), ನೇಹಾಲ್‌ ವಧೇರಾ, ಶಶಾಂಕ್‌ ಸಿಂಗ್‌, ಮಾರ್ಕಸ್‌ ಸ್ಟೋಯ್ನಿಸ್‌, ಅಝ್ಮತುಲ್ಲಾ ಒಮರ್ಝೈ, ಹರ್ಪ್ರೀತ್‌ ಬ್ರಾರ್‌, ಕೈಲ್‌ ಜೇಮಿಸನ್‌, ಅರ್ಷ್‌ದೀಪ್‌ ಸಿಂಗ್‌.

ಆರ್‌ಸಿಬಿ ಪ್ಲೇಯಿಂಗ್‌-11
ವಿರಾಟ್‌ ಕೊಹ್ಲಿ, ಫಿಲ್‌ ಸಾಲ್ಟ್‌, ರಜತ್‌ ಪಾಟಿದಾರ್‌ (ನಾಯಕ), ಲಿಯಾಮ್‌ ಲಿವಿಂಗ್‌ಸ್ಟೋನ್‌, ಜಿತೇಶ್‌ ಶರ್ಮಾ, ರೊಮಾರಿಯೊ ಶೆಫರ್ಡ್‌, ಕೃನಾಲ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಜೋಶ್‌ ಹೇಜಲ್ವುಡ್‌, ಸೂಯಶ್‌ ಶರ್ಮಾ, ಯಶ್‌ ದಯಾಳ್‌.

Share This Article